ಉಜಿರೆ ಬೆನಕ ಹೆಲ್ತ್ ಸೆಂಟರ್: ನೂತನ ಐಸಿಯು ಉದ್ಘಾಟನೆ

ಉಜಿರೆ : ಇಲ್ಲಿಯ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನವೀಕೃತಗೊಂಡ ತೀವ್ರ ನಿಗಾ ಘಟಕವನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಪ್ರಖ್ಯಾತ ಹೃದ್ರೋಗ ತಜ್ಞರಾದ ಡಾ| ಪದ್ಮನಾಭ ಕಾಮತ್ ರವರು ಜ.11 ರಂದು ಉದ್ಘಾಟಿಸಿದರು. ಉಜಿರೆಯಂತ ಹಳ್ಳಿ ಪ್ರದೇಶದಲ್ಲಿಯೂ ಇಂತಹ ಆಧುನಿಕ ಮತ್ತು ಸಕಲ ಸೌಲಭ್ಯಗಳನ್ನು ಒಳಗೊಂಡ ತೀವ್ರ ನಿಗಾ ಘಟಕ ಸ್ಥಾಪನೆಯಾದದ್ದು ಅತೀವ ಸಂತೋಷ ತಂದಿದೆ ಮತ್ತು ಸಾರ್ವಜನಿಕರಿಗೆ ಈ ಮೂಲಕ ಉತ್ತಮ ಸೇವೆ ಸಲ್ಲಿಸುವ ಮಟ್ಟಿಗೆ ಬೆನಕ ಹೆಲ್ತ್ ಸೆಂಟರ್ ಬೆಳೆದಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಜಿರೆಯ ಖ್ಯಾತ ವೈದ್ಯ ಡಾ| ಅಶ್ವಿನ್ ಉದ್ಯಾವರ್(ಫಿಸಿಷಿಯನ್) ಉಪಸ್ಥಿತರಿದ್ದು ಶುಭ ಕಾಮನೆಗಳನ್ನು ತಿಳಿಸಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಗೋಪಾಲಕೃಷ್ಣ ಭಟ್, ಡಾ| ಭಾರತೀ ಜಿ.ಭಟ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಯಸ್.ಟಿ ಭಟ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.