ಬರೆಂಗಾಯ ಅಂತರ್‌ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

ಕಬಡ್ಡಿ ಅಂತರಾಷ್ಟ್ರೀಯ ಮಟ್ಟದ ಪ್ರಖ್ಯಾತ ಕ್ರೀಡೆ: ಬಂಗೇರ

ಸನ್ಮಾನ : ಈ ಸಂದರ್ಭದಲ್ಲಿ ಶಾಸಕ ಕೆ. ವಸಂತ ಬಂಗೇರ, ನಿಡ್ಲೆ ಪ್ರಾ.ಕೃ.ಸ.ಸಂಘದ ನಿವೃತ್ತ ಲೆಕ್ಕಿಗ ವೀರೇಶ್ವರ ಹೆಬ್ಬಾರ್, ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ| ಗಿರಿಯಪ್ಪ, ನಿಡ್ಲೆ ವಳಂಕ ನಿಶಾಂತ್ ಆಘಾಶೆ, ರಾಜ್ಯ ಮಟ್ಟದ ಆಟಗಾರ ಪ್ರತ್ಯುಶ್ ಪನೆತ್ತಡ್ಕ, ಜಿಲ್ಲಾ ಮಟ್ಟದ ಆಟಗಾರ ರಂಜಿತ್ ಎನ್. ಬರೆಂಗಾಯ, ಆನಂದಕೃಷ್ಣ ಗೌಡ ನೂಜಿಲ ಇವರನ್ನು ಸನ್ಮಾನಿಸಲಾಯಿತು.

ಫಲಿತಾಂಶ : ಕಬಡ್ಡಿ ಪಂದ್ಯಾಟದಲ್ಲಿ ಒಟ್ಟು 42 ತಂಡಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಮುಂಡಾಜೆ ವೈ.ಸಿ.ಎಸ್.ಸಿ, ದ್ವಿತೀಯ ಸ್ಥಾನವನ್ನು ಸ್ವಾಮಿ ಕೊರಗಜ್ಜ ಕಿಲ್ಲೂರು ತಂಡ, ತೃತೀಯ ಸ್ಥಾನವನ್ನು ಕೊಕ್ಕಡ ತಂಡ, ನಾಲ್ಕನೇ ಸ್ಥಾನವನ್ನು ಬಂಗೇರಕಟ್ಟೆ ತಂಡ ಪಡೆದುಕೊಂಡಿತು. ಉತ್ತಮ ಹಿಡಿತಗಾರ ಮುಂಡಾಜೆ ತಂಡದ ಬಾಲು, ಉತ್ತಮ ದಾಳಿಗಾರ ಕಿಲ್ಲೂರು ತಂಡದ ಅಶ್ರಫ್, ಸರ್ವಾಂಗೀಣ ಆಟಗಾರ ಮುಂಡಾಜೆ ತಂಡದ ಹನೀಫ್ ಪಡೆದುಕೊಂಡರು.

ನಿಡ್ಲೆ : ಹಿಂದೆ ಜಗಳದಾಟವೆಂದು ಹೆಸರು ಪಡೆದ ಕಬಡ್ಡಿ ಇಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ ಎಂದು ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ವನದುರ್ಗಾ ಕ್ರೀಡಾ ಸಮಿತಿ ಬರೆಂಗಾಯ ಹಾಗೂ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ಬರೆಂಗಾಯ ಶಾಲಾ ವಠಾರದಲ್ಲಿ ಜ.13 ರಂದು ಜರಗಿದ ಹೊನಲು ಬೆಳಕಿನ ಅಂತರ್ ಜಿಲ್ಲಾ ಮಟ್ಟದ 65 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಜಾತಿ-ಧರ್ಮದವರು ಒಟ್ಟಿಗೆ ಸೇರಿ ಆಡುವ ಆಟ ಕಬಡ್ಡಿ ಆಗಿದೆ. ಇಂದು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಆಟಗಾರರು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಆಟದಲ್ಲಿ ಒಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಇನ್ನೂ ಪ್ರಯತ್ನ ಮುಂದುವರಿಸಬೇಕು ಎಂದರು.
ಮುಖ್ಯ ಅತಿಥಿ ಧರ್ಮಸ್ಥಳ ಜಮಾ ಉಗ್ರಾಣ ಮುತ್ಸದ್ಧಿ ಭುಜಬಲಿ ಬಿ. ಮಾತನಾಡಿ ಆಟ ಆಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಒಳ್ಳೆಯ ಯೋಗ ದೊರೆಯುತ್ತದೆ, ಆಟಗಾರರು ಸಮಯಕ್ಕೆ ಪ್ರಾಧನ್ಯತೆ ನೀಡಬೇಕೆಂದರು.
ದ.ಕ ಜಿಲ್ಲಾ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಮಾತನಾಡಿ ಕ್ರೀಡೆ ಮೂಲಕ ಸಂಘಟನೆ ಬೆಳೆಯುತ್ತದೆ. ಪತ್ರೀ ಗ್ರಾಮದಲ್ಲಿ ನೂರು ಯುವಕರು ಒಟ್ಟಾದಲ್ಲಿ ಸಮಾಜದಲ್ಲಿ ಯಾವುದೇ ಕೆಟ್ಟ ಕೆಲಸ ಆಗದಂತೆ ತಡೆಯಬಹುದು ಎಂದರು.
ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ದ.ಕ ಅಮೆಚೂರ್ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷ ನಾಮ್‌ದೇವ್ ರಾವ್, ಅಧ್ಯಕ್ಷತೆಯನ್ನು ವಹಿಸಿದ್ದ ನಿಡ್ಲೆ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶುಭ ದೇವಧರ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಉಪನಿರೀಕ್ಷಕ ಅವಿನಾಶ್, ನಿಡ್ಲೆ ಗ್ರಾ.ಪಂ ಪಿಡಿಒ ಶ್ರೀಮತಿ ರಾಜೀವಿ ಶೆಟ್ಟಿ, ಬರೆಂಗಾಯ ದ.ಕ.ಜಿ.ಪಂ.ಉ ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ, ನಿಡ್ಲೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಧನಂಜಯ ಗೌಡ, ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ಕೊಲ್ಲಾಜೆ, ನಿಡ್ಲೆ ಖೆಡ್ಡಾಜೆ ಭಾರತಿ ಸದನದ ಮಹಾದೇವ ತಾಮ್ಹನ್‌ಕರ್, ಧರ್ಮಸ್ಥಳ ಶ್ರೀ.ಧ.ಮಂ. ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸದಾನಂದ ಉಪಸ್ಥಿತರಿದ್ದರು.
ಅಪೂರ್ವ, ಯಜ್ಞಶ್ರೀ ಪ್ರಾರ್ಥಿಸಿದರು. ಸಮಿತಿ ಅಧ್ಯಕ್ಷ ಆನಂದ ಕೃಷ್ಣ ನೂಜಿಲ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕೊಕ್ರಾಡಿ, ಸೌಮ್ಯ, ಸತೀಶ್ ದಾಲಾಟ ಧನ್ಯವಾದವಿತ್ತರು.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.