ಇನ್ಫೋತ್ಸವ ಐಟಿ ಶ್ರೀ ಗುರುದೇವ ಕಾಲೇಜಿಗೆ ಪ್ರಶಸ್ತಿ

ಬೆಳ್ತಂಗಡಿ : ಉಜಿರೆಯ ಎಸ್‌ಡಿಎಂ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ 2017-18ನೇ ಸಾಲಿನ ಇನ್ಫೋತ್ಸವ ಐಟಿ ಸ್ಪರ್ಧೆಯಲ್ಲಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಯತೀಶ್ ಕುಮಾರ್ ಪೇಪರ್ ಪ್ರಸೆಂಟೇಶನ್‌ನಲ್ಲಿ ಪ್ರಥಮ ಸ್ಥಾನವನ್ನು, ಮ್ಯಾಡ್ ಆಂಡ್ ಆಡ್ ಸ್ಫರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ರಫೀಕ್, ಸಾತ್ವಿಕ್, ನಿಶಾತ್, ಕವಿತಾ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ. ಇವರ ಜೊತೆ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ದರ್ಶನ್, ಸಿರಿಲ್, ನಿಧೀಕ್ಷಾ, ಅಮಿತ್ ಹೆಚ್.ಎಸ್, ಪ್ರಜ್ವಲ್ ಭಾಗವಹಿಸಿದ್ದಾರೆ. ಇವರಿಗೆ ಪ್ರಾಂಶುಪಾಲ ಎ ಕೃಷ್ಣಪ್ಪ ಪೂಜಾರಿ, ಗಣಕವಿಜ್ಞಾನ ವಿಭಾಗದ ಉಪನ್ಯಾಸಕಿಯರಾದ ಶುಭಲಕ್ಷ್ಮೀ ಮತ್ತು ದಿವ್ಯಾ ಯಾದವ್ ಮಾರ್ಗದರ್ಶನ ನೀಡಿದ್ದಾರೆ.

Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.