HomePage_Banner_
HomePage_Banner_

ಬಸ್ ಅಪಘಾತದಲ್ಲಿ ಮೃತರಾದವರ ಅಂತಿಮ ಕ್ರಿಯೆ

ಬೆಳ್ತಂಗಡಿ : ಹಾಸನದ ಶಾಂತಿ ಗ್ರಾಮದ ಬಳಿ ಜ. 13ರಂದು ನಡೆದ ಬಸ್ ಅಪಘಾತದಲ್ಲಿ ಮೃತರಾದ ನೆರಿಯ ಗ್ರಾಮದ ದೇವಗಿರಿ ನಿವಾಸಿಗಳಾದ ಬಿಜೋ ಪುತ್ತೆಟ್ಟಿಪಡವಿಲ್(25), ವೈದ್ಯಕೀಯ ವಿದ್ಯಾರ್ಥಿನಿ ಡಯಾನ ಪುತ್ತೆಟ್ಟಿಪಡವಿಲ್(20), ಸೋನಿಯ ಪುತ್ತೆಟ್ಟಿಪಡವಿಲ್ ಇವರ ಅಂತಿಮ ಕ್ರಿಯೆಯು ದೇವಗಿರಿ ಚರ್ಚ್‌ನಲ್ಲಿ ಜ. 14ರಂದು ನೆರವೇರಿತು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕುಯಿ ಅಂತಿಮ ವಿಧಿ ವಿಧಾನ ನಡೆಸಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜೇರಾಲ್ ವಂ. ಫಾ. ಜೋಸ್ ವಲಿಯಾ ಪರಂಬಿಲ್, ಫಾ. ಬಿನೋಯಿ, ಫಾ. ಸನ್ನಿ, ಫಾ. ಅಬ್ರಾಹಂ, ಫಾ. ಶಾಜಿ ಮ್ಯಾಥ್ಯು, ಅನುಗ್ರಹ ಶಾಲಾ ಸಂಚಾಲಕ ಫಾ. ಜೊಸೆಫ್ ಮಸ್ಕರೇನ್ಹಸ್, ಫಾ. ಜೋಸ್, ಫಾ. ಟೋಮಿ, ಹಾಗೂ ಧರ್ಮಪ್ರಾಂತ್ಯದ ಎಲ್ಲಾ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ತಾಲೂಕಿನಾದ್ಯಂತ ಎಲ್ಲಾ ಧರ್ಮದವರು ಸಾವಿರಾರು ಮಂದಿ ಅಂತಿಮ ವಿಧಿ ವಿಧಾನದಲ್ಲಿ ಪಾಲ್ಗೊಂಡರು. ಬೆಳ್ತಂಗಡಿ ಶಾಸಕ ವಸಂತ ಬಂಗೇರಾ, ಮಾಜಿ ಶಾಸಕ ಪ್ರಭಾಕರ ಬಂಗೇರಾ, ತಾ.ಪಂ ಸದಸ್ಯ ವಿ.ಟಿ ಸೆಬಾಸ್ಟಿನ್, ಮೋಹನ ಕಲ್ಮಂಜ, ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಜಿ.ಪಂ ಸದಸ್ಯ ಕೊರಗಪ್ಪ ನಾಯ್‌ಕ, ಜಿ.ಪಂ ಸದಸ್ಯೆ ನಮಿತಾ ಇನ್ನಿತರ ಜನಪ್ರತಿನಿಧಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.