HomePage_Banner_
HomePage_Banner_
HomePage_Banner_

ಮಾಧ್ಯಮಗಳ ಪ್ರಭಾವ ವಿದ್ಯಾರ್ಥಿಗಳ ಮೇಲಾಗಿದೆ : ಡಾ| ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.5 ರಂದು ವಾರ್ಷಿಕ ಪ್ರತಿಭಾ ದಿನಾಚರಣೆ ಜರಗಿತು. ಈ ಸಮಾರಂಭದಲ್ಲಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಈ ನೂತನ ಯುಗದಲ್ಲಿ ವಿದ್ಯಾರ್ಥಿಗಳು ವಾರ್ತಾಪತ್ರಿಕೆ, ಮ್ಯಾಗಜಿನ್, ಟಿ.ವಿ.ಗಳನ್ನು ಓದಿ ಅನೇಕ ವಿಷಯಗಳನ್ನು ಕಲಿಯುವರು.ಹೀಗೆ ಈ ಮಾಧ್ಯಮಗಳ ಪ್ರಭಾವ ನಮ್ಮ ಸಮಾಜದ ವಿದ್ಯಾರ್ಥಿಗಳ ಮೇಲಾಗುತ್ತದೆ. ದೂರದರ್ಶನದಿಂದ ಅನೇಕ ವಿಷಯಗಳನ್ನು ನೋಡಿ ಕಲಿಯುತ್ತಾರೆ. ಹೀಗೆ ಮಾಧ್ಯಮಗಳ ಮೂಲಕ ನೋಡಿ ಕಲಿಯುವ ಬುದ್ಧಿಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಿರುತ್ತಾರೆ. ಇದರಿಂದ ಉತ್ತಮ ಕಾರ್ಯಕ್ರಮಗಳು ನಿರೂಪಿಸಲು ಸಾಧ್ಯವಾಗಿದೆ ಎಂದು ತಮ್ಮ ಆಶಿರ್ವಚನ ಭಾಷಣದಲ್ಲಿ ತಿಳಿಸಿದರು. ಅಲ್ಲದೆ 2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯಿಂದ ನಿವೃತ್ತಿಗೊಳ್ಳಲಿರುವ ಶಾಲಾ ಮುಖ್ಯ ಶಿಕ್ಷಕ ಡಿ.ಧರ್ಣಪ್ಪ ಅವರನ್ನು ಚಿನ್ನದ ಉಂಗುರ ತೊಡಿಸಿ,ಹೂಹಾರ ಹಾಕಿ ಅಭಿನಂದಿಸಿ ಶಾಲಾ ಕೆಲಸ ಕಾರ್ಯಗಳಲ್ಲಿ ಅಲ್ಲದೆ, ಶ್ರೀ ಕ್ಷೇತ್ರದ ಕೆಲಸಗಳಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ದುಡಿದು ನಂಬಿಕೆ ವಿಶ್ವಾಸಕ್ಕೆ ಪಾತ್ರವಾದ ವ್ಯಕ್ತಿ ಎಂದರಲ್ಲದೆ, ನಿವೃತ್ತಿಯ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾ ಅಧಿಕಾರಿ ಶಶಿಧರ ಶೆಟ್ಟಿ ಶುಭಕೋರಿದರು.
ಸನ್ಮಾನಗೊಂಡ ಶಾಲಾ ಮುಖ್ಯ ಶಿಕ್ಷಕ ಡಿ.ಧರ್ಣಪ್ಪ ತನ್ನ ಹಿರಿಯರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು ಹೆಗ್ಗಡೆಯವರ ಆಶೀರ್ವಾದದಿಂದ ನನಗೆ ಶಿಕ್ಷಕನಾಗಿ ಸೇವೆ ಸಲ್ಲಿಸುವ ಭಾಗ್ಯ ದೊರೆತಿದೆ. ಬಾಲ್ಯ ಜೀವನದಲ್ಲಿ ಒಳ್ಳೆಯ ಸ್ನೇಹಿತರ ಸಹವಾಸವಿದ್ದು ನನ್ನ ವ್ಯಕ್ತಿತ್ವ ರೂಪುಗೊಳ್ಳಲು ಸಹಾಯಕವಾಯಿತು. ಅಲ್ಲದೆ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ನನ್ನ ಹಿರಿಯ ಗುರುಗಳ ಆದರ್ಶ ವ್ಯಕ್ತಿತ್ವ ಜೀವನದ ಪ್ರಗತಿಗೆ ಕಾರಣವಾಯಿತು ಎಂದರು. ಶಾಲಾ ಸಂಚಾಲಕ ಡಿ.ಅನಂತ ಪದ್ಮನಾಭ ಭಟ್ ಸ್ವಾಗತಿಸಿ, ಶ್ರೀಮತಿ ಮನೋರಮಾ ಮುಖ್ಯ ಶಿಕ್ಷಕರ ಬಗ್ಗೆ ಅನಿಸಿಕೆ, ಶ್ರೀಮತಿ ಗಿರಿಜಾರವರಿಂದ ಸಂದೇಶ ವಾಚನ, ಶ್ರೀಮತಿ ಸತ್ಯವತಿಯವರಿಂದ ಬಹುಮಾನ ವಿಜೇತರ ಪಟ್ಟಿ ವಾಚನ, ಶ್ರೀಮತಿ ಶ್ರೀಜಾರವರಿಂದ ಧನ್ಯವಾದ ಸುಬ್ರಹ್ಮಣ್ಯರಾವ್ ಮತ್ತು ಶ್ರೀಮತಿ ಪೂರ್ಣಿಮಾ ಜೋಷಿಯವರ ನಿರೂಪಣೆಯೊಂದಿಗೆ, ಶಿಕ್ಷಕರೆಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.