ವಾದಿ ಇರ್ಫಾನ್ ನೂತನ ಮಸೀದಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಮಕ್ಕಳ ಮನಸ್ಸಿನಲ್ಲಿ ಮತೀಯ ಸೌಹಾರ್ದ ಭಾವ ಮೂಡಿಸುವ ಜವಾಬ್ಧಾರಿ ಆಯಾಯ ಧರ್ಮಗಳ ಮುಖಂಡರದ್ದು : ಶಾಸಕ ಬಂಗೇರ

ಬೆಳ್ತಂಗಡಿ: ಎಲ್ಲ ಜಾತಿ, ಧರ್ಮ, ಸಂಸ್ಕೃತಿಯ ಜನ ಜೀವಿಸುವ ಸುಂದರ ಅವಕಾಶವನ್ನು ಈ ದೇಶದ ಸಂವಿಧಾನ ನೀಡಿದೆ. ಅಂತಹಾ ಸೌಹಾರ್ದ ಮನೋಭಾವನೆಯನ್ನು ತಮ್ಮ ತಮ್ಮ ಸಮುದಾಯ ಮಕ್ಕಳ ಮನಸ್ಸಿನಲ್ಲಿ ಬೆಳೆಸುವ ಕೆಲಸವನ್ನು ಆಯಾಯ ಧರ್ಮದ ಮುಖಂಡರುಗಳು ಮಾಡಬೇಕು ಎಂದು ಶಾಸಕ ವಸಂತ ಬಂಗೇರ ಹೇಳಿದರು.
ವಾದಿ ಇರ್ಫಾನ್ ಅಕಾಡಮಿಕ್ ಸೆಂಟರ್ ಸಬರಬೈಲು ಮದ್ದಡ್ಕ ಇದರ ವತಿಯಿಂದ ಸಬರಬೈಲು ಮರ್‌ಹೂಮ್ ಕಾಜೂರು ತಂಙಳ್ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಮಸೀದಿಯ ಉದ್ಘಾಟನೆ ಪ್ರಯುಕ್ತ ಜ. 10ರಂದು ನಡೆದ ಸರ್ವಧರ್ಮೀಯರ ಸೌಹಾರ್ದ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಚೇರ್‌ಮೆನ್ ಹಾಜಿ ಎ. ಉಸ್ಮಾನ್ ಆಲಂದಿಲ ವಹಿಸಿದ್ದರು. ಪ್ರಧಾನ ಸಂದೇಶ ಭಾಷಣ ಮಾಡಿದ ಅಲ್‌ಕಾದಿಸ ಕಾವಳಕಟ್ಟೆ ಇಲ್ಲಿನ ಪ್ರಾಂಶುಪಾಲ ಹಾಫಿಲ್ ಸುಫಿಯಾನ್ ಸಖಾಫಿ ಮಾತನಾಡಿ, ಅಮಾನವೀಯತೆ ತೋರುವ ಪ್ರವೃತ್ತಿ ಹೊಂದಿದ ಜನರು ಎಲ್ಲ ಧರ್ಮಗಳಲ್ಲೂ 3 ಶೇಖಡ ಇರುತ್ತಾರೆ. ಅಂತಹಾ ಜನರನ್ನು ಇಡೀ ಸಮಾಜ ಒಂದಾಗಿ ಮೂಲೆಗುಂಪು ಮಾಡಿ ಸೌಹಾರ್ದ ಭಾರತ
ಕಟ್ಟುವ ಕೆಲಸದಲ್ಲಿ ತೊಡಗದಿದ್ದರೆ ಈ ದೇಶಕ್ಕೆ ಸೌಂದರ್ಯವಿಲ್ಲ, ಈ ದೇಶವನ್ನು ಕಟ್ಟುವ ಜವಾಬ್ಧಾರಿ ಧರ್ಮಗುರುಗಳಿಗೆ ಮತ್ತು ರಾಜಕೀಯ ರಂಗದಲ್ಲಿ ತೊಡಗಿಸಿಕೊಂಡವರಿಗಿದೆ ಎಂಬ ಜ್ಞಾನವನ್ನು ಅವರು ತಿಳಿದುಕೊಳ್ಳಬೇಕಾಗಿದೆ ಎಂದರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಪ್ರ. ಧರ್ಮಗುರುಗಳಾದ ರೆ. ಫಾ| ಬೇಸಿಲ್ ವಾಸ್ ಮಾತನಾಡಿ, ಪ್ರಾರ್ಥನಾ ಮಂದಿರಗಳು ದೇವರ ದರ್ಶನಕ್ಕೆ ಇರುವ ತಾಣಗಳು, ಪ್ರತಿಯೊಬ್ಬ ಮನುಷ್ಯರಲ್ಲೂ ದೇವರ ಪ್ರತಿರೂಪ ಕಾಣುವ ಹೃದಯವಂತಿಕೆ ನಮ್ಮದಾದರೆ ಇಲ್ಲಿ ಅಧರ್ಮಗಳು, ಅನೀತಿಗಳು, ಘಟಿಸಲು ಸಾಧ್ಯವೇ ಇಲ್ಲ ಎಂದರು.
ಸಂಸ್ಥೆಯ ಚೇರ್‌ಮೆನ್ ಸಯ್ಯಿದ್ ಡಾ| ಫಝಲ್ ಜಮಲುಲ್ಲೈಲಿ ತಂಙಳ್ ದುಆ ಪ್ರಾರ್ಥನೆ ನಡೆಸಿದರು.
ಸಮಾರಂಭದಲ್ಲಿ ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕುಮಾರ್ ಕೋಟ್ಯಾನ್, ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಮಂಡಲದ ಪ್ರ. ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕುವೆಟ್ಟು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅರ್ಕಜೆ, ಡಿಸಿಸಿ ಬ್ಯಾಂಕ್ ವಗ್ಗದ ವ್ಯವಸ್ಥಾಪಕ ಕೆ. ಚಂದ್ರಹಾಸ ಕೇದೆ, ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಗಣೇಶ್ ಸುವರ್ಣ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಸಬರಬೈಲು ಹಿರಿಯ ನಾಗರಿಕ ಅಮ್ಮಿ ಕೋಟ್ಯಾನ್, ಕುವೆಟ್ಟು ಗ್ರಾ.ಪಂ. ಸದಸ್ಯ ಹೈದರ್ ಮದ್ದಡ್ಕ, ಹಿರಿಯ ವಿದ್ವಾಂಸ ಯಾಕೂಬ್ ಮುಸ್ಲಿಯಾರ್ ಪಣಕಜೆ, ಎಸ್‌ವೈಎಸ್ ಬೆಳ್ತಂಗಡಿ ಝೋನ್ ಅಧ್ಯಕ್ಷ ಸಯ್ಯಿದ್ ಎಸ್.ಎಮ್. ಕೋಯ ತಂಙಳ್ ಉಜಿರೆ, ಮದ್ದಡ್ಕ ಮಸೀದಿ ಖತೀಬ್ ರಫೀಕ್ ಅಹ್‌ಸನಿ, ಅಬ್ದುಲ್ ಅಝೀಝ್ ಝುಹುರಿ, ಪ್ರಕಾಶ್ ಭಟ್ ಕಳಸ, ಬಾಲಕೃಷ್ಣ ಭಟ್ ಕಾರ್ಕಳ ಮೊದಲಾದವರು ಉಪಸ್ಥಿತರಿದ್ದರು.
ಸಂಜೆ ನೂತನ ಮಸೀದಿಯನ್ನು ಖ್ಯಾತ ಧಾರ್ಮಿಕ ವಿದ್ವಾಂಸರಾದ ಕಡಲುಂಡಿ ತಂಙಳ್ ಉದ್ಘಾಟಿಸಿದರು. ಸಯ್ಯಿದ್ ಕೂರತ್ ತಂಙಳ್ ಪ್ರಾರ್ಥನೆ ನೆರವೇರಿಸಿದರು. ವಿಶ್ವವಿಖ್ಯಾತ ಧಾರ್ಮಿಕ ಪ್ರವಚನಕಾರ ಪೇರೋಡ್ ಉಸ್ತಾದ್ ಮುಖ್ಯಪ್ರಭಾಷಣ ನಡೆಸಿದರು. ಸಮಾರಂಭದ ಬಳಿಕ ಅನ್ನದಾನ ನಡೆಯಿತು.
ಪತ್ರಕರ್ತ ಲ| ಅಶ್ರಫ್ ಆಲಿಕುಂಞಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ವೀನರ್ ಅಬ್ಬೋನು ಮದ್ದಡ್ಕ ಸಹಿತ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.
ವಾದಿ ಇರ್ಫಾನ್ ಪ್ರ. ಕಾರ್ಯದರ್ಶಿ ರಾಝಿಯುದ್ದೀನ್ ಸಬರಬೈಲು ಧನ್ಯವಾದವಿತ್ತರು. ರಶೀದ್ ಮಡಂತ್ಯಾರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.