HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವೇಣೂರು ವಿದ್ಯೋದಯ ಶಾಲೆ : ಜನ್ಮ ಶತಾಬ್ಧಿ ಆಚರಣೆ

ವೇಣೂರು : ವೇಣೂರು ವಿದ್ಯೋದಯ ಶಾಲೆಯ ಮೈದಾನದಲ್ಲಿ ಜ.7 ರಂದು 4 ದಶಕಗಳ ಕಾಲ ಸಂಚಾಲಕರಾಗಿ ಮುನ್ನಡೆಸಿದ ದಿ| ಕೆ. ನಾರಾಯಣ ಹೆಗ್ಡೆಯವರ ಜನ್ಮ ಶತಾಬ್ಧಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವೇಣೂರಿನ ಹಿರಿಯ ವೈದ್ಯ ಡಾ| ಬಿ.ಪಿ. ಇಂದ್ರ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕ ಡಾ| ಕೆ.ಎಂ. ಹೆಗ್ಡೆ ವಹಿಸಿದ್ದರು. ಈ ಸಂದರ್ಭದಲ್ಲಿ ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ಬಿಎಚ್‌ಇಲ್‌ನ ನಿವೃತ್ತ ಸೀನಿಯರ್ ಮೆನೇಜರ್ ಕೊಡ್ಯಡ್ಕ ನರಸಿಂಹ ಹೆಗ್ಡೆ, ಕಡ್ತಲದ ನಿವೃತ್ತ ಉಪನ್ಯಾಸಕ ಕೆ. ಕರುಣಾಕರ ಹೆಗ್ಡೆ, ವಿದ್ಯೋದಯ ಟ್ರಸ್ಟಿನ ಗೌರವ ಕಾರ್ಯದರ್ಶಿ ಯೂಸುಫ್ ವಿಟ್ಲ, ಜನ್ಮಶತಾಬ್ಧಿ ಆಚರಣಾ ಸಮಿತಿ ಅಧ್ಯಕ್ಷ ಡಾ| ರತ್ನಾಕರ ಹೆಗ್ಡೆ, ವಿದ್ಯೋದಯ ಶಾಲೆಯ ಮುಖ್ಯ ಶಿಕ್ಷಕಿಯರಾದ ಶೀಲಾ ಎಸ್. ಹೆಗ್ಡೆ, ಶಶಿಪ್ರಭಾ, ನಿವೃತ ಶಿಕ್ಷಕ ಬಿ. ಶಿವರಾಮ ಹೆಗ್ಡೆ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಕೆ. ಶಿವರಾಮ ಹೆಗ್ಡೆ ಪ್ರಾಸ್ತಾವಿಸಿ ಸ್ವಾಗತಿಸಿದರು. ಶಿಕ್ಷಕ ಕೆ. ಧರಣೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿ, ಎನ್.ಆರ್. ಹೆಗ್ಡೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.