HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ 43ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

ಬೆಳ್ತಂಗಡಿ : ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಹಾಗೂ ಸೇವಾ ಸಮಿತಿ ಆಶ್ರಯದಲ್ಲಿ 43ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಜ. 5 ಮತ್ತು ಜ. 6ರಂದು ಬೆಳ್ತಂಗಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಾಮನಗರದಲ್ಲಿ ಜರುಗಿತು.
ಜ. 5 ರಂದು ದೀಪೋತ್ಸವ ಉದ್ಘಾಟನೆಯನ್ನು ಉದ್ಯಮಿ ಅಭಿನಂದನ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯವಾದಿ ಪ್ರಮೋದ್ ಆರ್. ನಾಯಕ್ ಭಾಗವಹಿಸಿದ್ದರು. ಜ. 6ರಂದು ಸಂಜೆ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ಪಾಲಶ ಮರದ ಕೊಂಬೆಯ ಭವ್ಯ ಮೆರವಣಿಗೆ ಜರುಗಿತು.
ನಂತರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕಾತ್ಯಾಯಿನಿ ಸ್ಟೋರ್‌ನ ಸುನೀಲ್ ಶೆಣೈ ವಹಿಸಿದ್ದರು. ಪ್ರಕಾಶ್ ಶೆಟ್ಟಿ ನೊಚ್ಚ ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ದೀಪೋತ್ಸವ ಸಮಿತಿ ಅಧ್ಯಕ್ಷ ಸಂಕೇತ್ ಶೆಟ್ಟಿ, ಕಾರ್ಯದರ್ಶಿ ಅಭಿಷೇಕ್ ಗೌಡ, ಗುರುಸ್ವಾಮಿಗಳಾದ ಪ್ರಕಾಶ್ ಕೆ., ದಿನೇಶ್ ಸೋಣಂದೂರು, ಟ್ರಸ್ಟ್‌ನ ಅಧ್ಯಕ್ಷ ಕೆ. ಶಂಕರ ಹೆಗ್ಡೆ, ಉಪಾಧ್ಯಕ್ಷ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.