ಧರ್ಮಸ್ಥಳ : ಧರ್ಮಸ್ಥಳಕ್ಕೆ ಮುನಿಸಂಘವು ಜ.4 ರಂದು ಪುರಪ್ರವೇಶ ಮಾಡಿದಾಗ ಪ್ರವೇಶ ದ್ವಾರದ ಬಳಿ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ ಕೋರಲಾಯಿತು. ಮುನಿಸಂಘದಲ್ಲಿ ಪೂಜ್ಯ ಆಚಾರ್ಯ 108 ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು, ಪೂಜ್ಯ ಶ್ರೀ 108 ಮುನಿಶ್ರೀ ಪ್ರಮುಖ್ ಸಾಗರ ಮುನಿ ಮಹಾರಾಜರು, ಪೂಜ್ಯ 108 ಶ್ರೀ ಮುನಿಶ್ರೀ ಪ್ರಸಂಗ ಸಾಗರ ಮಹಾರಾಜರು, ಪೂಜ್ಯ ಶ್ರೀ ಅಮಿತಸೇನ್ ಮತ್ತು ಪೂಜ್ಯ ಶ್ರೀ ವೃಷಭಸೇನ್ ಇದ್ದರು.
ಮುನಿ ಸಂಘವನ್ನು ಸ್ವಾಗತಿಸಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮುನಿಗಳ ದರ್ಶನದಿಂದ ಎಲ್ಲರಿಗೂ ಪುಣ್ಯ ಸಂಚಯವಾಗಿದೆ ಎಂದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪ್ರೊ.ಎಸ್. ಪ್ರಭಾಕರ್ ಮತ್ತು ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.