HomePage_Banner_
HomePage_Banner_

ಜೆಸಿಐ ಬೆಳ್ತಂಗಡಿ ಮಂಜುಶ್ರೀ-ಮಹಿಳಾ ಮಂಡಲಗಳ ಒಕ್ಕೂಟ ಬಡಕುಟುಂಬದ ಮನೆಯಲ್ಲಿ ಹೊಸ ವರ್ಷ ಆಚರಣೆ

ಊರವರಿಂದ ಜೆಸಿಐ ಬೆಳ್ತಂಗಡಿಗೆ ಕೃತಜ್ಞತೆ :  ಕಳೆದ ಹಲವು ವರ್ಷಗಳಿಂದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಹೊಸ ವರ್ಷವನ್ನು ಅತ್ಯಂತ ವಿಶೇಷವಾಗಿ ಹಾಗೂ ವಿನೂತನ ರೀತಿಯಲ್ಲಿ ಆಚರಿಸುತ್ತಾ ಬರುತ್ತಿದ್ದು, ಈ ವರ್ಷ ಶಿರ್ಲಾಲುವಿನ ಬಡ ಕುಟುಂಬದಲ್ಲಿ ಆಚರಿಸಿ ಅವರಿಗೆ ಇತರ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು. ಊರವರು ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ಸಮಾಜಮುಖಿ ಕೆಲಸ ಕಾರ್ಯಗಳನ್ನು ಇನ್ನಷ್ಟು ಮಾಡುವಂತಾಗಲಿ ಎಂದು ಹಾರೈಸಿ ಕೃತಜ್ಞತೆ ಸಲ್ಲಿಸಿದರು.

ಶಿರ್ಲಾಲು : ಜೆಸಿಐ ಬೆಳ್ತಂಗಡಿ ಮಂಜುಶ್ರೀ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ ಇದರ ವತಿಯಿಂದ ವಿಶಿಷ್ಟ ಹಾಗೂ ವಿನೂತನವಾಗಿ 2018 ಹೊಸ ವರ್ಷಾಚರಣೆಯನ್ನು ಶಿರ್ಲಾಲು ಒಂಜರೆ ಪಲ್ಕೆ ಕಾಳಿಕಂಭಾ ನಿವಾಸ ಬಡ ಕುಟುಂಬದ ವಿಠಲ ಆಚಾರ್ಯರವರ ಮನೆಯಲ್ಲಿ ಆಚರಿಸಲಾಯಿತು.
ಮನೆಯ ಯಜಮಾನ ವಿಠಲ ಆಚಾರ್ಯರವರಿಗೆ 2 ಕಣ್ಣು ಕಾಣುವುದಿಲ್ಲ, ಹೆಂಡತಿ ಅಂಗವಿಕಲೆ, ಅವರ ಮಗುವಿಗೆ ಕುತ್ತಿಗೆಯಲ್ಲಿ ಬಲವಿಲ್ಲಾ ಇವರು ಆರ್ಥಿಕವಾಗಿ ತೀರ ಸಂಕಷ್ಟದಲ್ಲಿ ಇವರ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ ಹಾಗೂ ಮನೆಗೆ ಅಕ್ಕಿ, ಬೆಳೆ-ಕಾಳು, ತರಕಾರಿ, ಸೀರೆ, ಇತರ ದವಸಧಾನ್ಯಗಳನ್ನು ನೀಡುವುದರೊಂದಿಗೆ ಹೊಸ ವರ್ಷವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ತಾ.ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ ಅದ್ಯಕ್ಷೆ ಶಾಂತಾ ಬಂಗೇರ, ಶಿರ್ಲಾಲು ಗ್ರಾ.ಪಂ ಅಧ್ಯಕ್ಷೆ ಶಶಿಕಲಾ, ಸಿ.ಎ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ ಕೋಟ್ಯಾನ್, ಉಪಾಧ್ಯಕ್ಷ ಸುನೀಲ್ ಕುಮಾರ್ ಜೈನ್, ಉದ್ಯಮಿ ಶ್ರೀಧರ ಪೂಜಾರಿ, ಶಿರ್ಲಾಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಾಧವ, ಜೇಸಿ ವಲಯಾಧಿಕಾರಿ ಚಿದಾನಂದ ಇಡ್ಯಾ, ನಿಕಟ ಪೂರ್ವಾಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಉಪಾಧ್ಯಕ್ಷ ಪ್ರಶಾಂತ್ ಲಾಯಿಲ, ಕೋಶಾಧಿಕಾರಿ ಗುರುರಾಜ್ ಗುರಿಪಳ್ಳ, ಮಹಿಳಾ ಮಂಡಲಗಳ ಒಕ್ಕೂಟದ ಕೋಶಾಧಿಕಾರಿ ಉಷಾ, ಜೇಸಿ ನಿರ್ದೇಶಕ ವಿಜಯ ನಿಡಿಗಲ್, ಶೀತಲ್ ಜೈನ್, ಮನೋಜ್ ಹಾಗೂ ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.