ವೇಣೂರು ಲಯನ್ಸ್ ಕ್ಲಬ್‌ನಿಂದ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

ವೇಣೂರು ವೇಣೂರು ಲಯನ್ಸ್ ಕ್ಲಬ್‌ನ ವತಿಯಿಂದ ವೇಣೂರು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಮೆನೇಜರ್ ಆಗಿ ಸೇವೆ ಸಲ್ಲಿಸಿ, ಉತ್ತಮ ಸೇವೆಯನ್ನು ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿ ಈಗ ಬೆಳ್ತಂಗಡಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಮೆನೇಜರ್ ಆಗಿರುವ ಸೂರ್ಯನಾರಾಯಣ ಭಟ್ ಮತ್ತು ವೇಣೂರು ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್‌ನಲ್ಲಿ ಉತ್ತಮ ಸೇವೆ ನೀಡಿ, ಕ್ಲಬ್‌ನ ಬೆಳವಣಿಗೆಗೆ ಒಳ್ಳೆಯ ಸಹಕಾರವನ್ನು ನೀಡುತ್ತಾ ಬಂದಿರುವ ಲಯನ್ಸ್ ಜಿಲ್ಲಾ ಸಂಯೋಜಕ ಲ| ಜಗದೀಶ್ಚಂದ್ರ ಡಿ.ಕೆ.ರವರನ್ನು ಜಿಲ್ಲಾ ರಾಜ್ಯಪಾಲ ಲ| ಹೆಚ್.ಆರ್ ಹರೀಶ್ ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ನಿತೀಶ್ ಹೆಚ್. ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಲಯನ್ಸ್ ಕಾರ್ಯದರ್ಶಿ ಲ| ವಸಂತ ಕುಮಾರ್ ಶೆಟ್ಟಿ, ಲಯನ್ಸ್ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್ ಇಂದ್ರ, ಪ್ರಾಂತೀಯ ಅಧ್ಯಕ್ಷ ಲ| ನಿತ್ಯಾನಂದ ನಾವರ, ಲಯನ್ಸ್ ವಲಯಾಧ್ಯಕ್ಷ ಲ| ಎಂ.ಬಿ ವೆಂಕಟೇಶ್, ಲ| ಎಸ್ ವಾಸು, ಲ| ಶಿವಪ್ರಸಾದ್ ಹೆಗ್ಡೆ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಧರಣೇಂದ್ರ ಕೆ. ಜೈನ್, ಅಳದಂಗಡಿ ಲಯನ್ಸ್ ಅಧ್ಯಕ್ಷ ಲ| ವಿಜಯಕುಮಾರ್ ಜೈನ್, ನಾರಾವಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಮುರಳಿ ಬಿ., ಕಾರ್ಯದರ್ಶಿ ಲ| ಸುಧೀರ್ ಭಂಡಾರಿ, ಕೋಶಾಧಿಕಾರಿ ಲ| ಮಿತ್ರ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.