ಬಿಜೆಪಿ ಯುವಮೋರ್ಛಾದಿಂದ ಮಾನ್ ಕೀ ಬಾತ್ ಚಾಯ್ ಕೇ ಸಾತ್ ವಿಶಿಷ್ಟ ಕಾರ್‍ಯಕ್ರಮ

ಬೆಳ್ತಂಗಡಿ : ಸದಾ ಒಂದಿಲ್ಲೊಂದು ಹೊಸತನಗಳ ಮೂಲಕ ಸದಾ ಸುದ್ದಿಯಲ್ಲಿರುವ ಬೆಳ್ತಂಗಡಿ ಬಿಜೆಪಿ ಯುವಮೋರ್ಛಾ ಈ ಬಾರಿ ಪ್ರಧಾನಿ ನರೇಂದ್ರ ಮೋದಿರವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಟವಾಗಿ, ವಿಭಿನ್ನವಾಗಿ ಆಯೋಜಿಸಿ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.
ಅತ್ಯಂತ ಸೃಜನಾತ್ಮಕವಾಗಿ ಯೋಜಿಸಲಾದ ಕಾರ್ಯಕ್ರಮ ಮನ್ ಕೀ ಬಾತ್ ಚಾಯ್ ಕೇ ಸಾತ್ ಪ್ರಧಾನಿ ನರೇಂದ್ರ ಮೋದಿಯವರ ಭವ್ಯಭಾರತ ಕಟ್ಟುವ ಕನಸುಗಳನ್ನು ಜನಸಾಮಾನ್ಯರಲ್ಲಿ ಅವರು ವ್ಯಕ್ತಪಡಿಸುವ ವಿಚಾರಧಾರೆ ಗಳನ್ನು ಪರಿಣಾಮಕಾರಿಯಾಗಿ ಜನ-ಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಆಯೋಜಿಸಲಾಗಿತ್ತು. ಕಾರ್‍ಯಕ್ರಮದಲ್ಲಿ 5 ಬಗೆಯ ವಿಶೇಷ ಚಹಾಗಳಾದ ಏವನಾಡ ಚಹಾ, ಅಸ್ಸಾಂ ಚಹಾ, ಲೆಮನ್ ಚಹಾ, ಮಸಾಲ ಚಹಾ, ಬ್ಲ್ಯಾಕ್ ಚಹಾ ಆಸ್ವಾದಿಸುವುದರೊಂದಿಗೆ ಪ್ರಧಾನಿ ಮೋದಿಯವರ ಮನದಾಳದ ಮಾತು ಗಳನ್ನು ಕೇಳುವ ಅವಕಾಶ ಕಲ್ಪಿಸಲಾಗಿತ್ತು. ಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ಸಂಪತ್ ಬಿ. ಸುವರ್ಣ ಸ್ವಾಗತಿಸಿ, ದೇಶದ ಚರಿತ್ರೆಯಲ್ಲಿ ಪ್ರಥಮ ಬಾರಿಗೆ ಪ್ರಧಾನಿಯೊಬ್ಬರು ಜನಸಾಮಾನ್ಯರ ಸಣ್ಣ ಸಣ್ಣ ವಿಚಾರಗಳ ಬಗೆಗೆ ಗಂಭೀರವಾಗಿ ಸ್ಪಂದಿಸುವುದು ಶ್ರೇಷ್ಠ ವಿಚಾರ. 39ನೇ ಆವೃತ್ತಿಯ ಮೂಲಕ ತಾಲೂಕಿನ ವಿವಿದೆಡೆಗಳಲ್ಲಿ ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ವಿಭಿನ್ನವಾಗಿ ಆಯೋಜನೆಗೊಳ್ಳಲಿದೆ ಎಂದರು.
ಮಾಜಿ ಶಾಸಕರಾದ ಕೆ ಪ್ರಭಾಕರ ಬಂಗೇರ ಪ್ರಧಾನಿ ಮೋದಿಯುವರ ಕಾರ್ಯವೈಖರಿಗೆ ಅವರ ಜನಪರ ಕಾಳಜಿಗೆ ಒಂದು ಸಣ್ಣ ಉದಾಹರಣೆ ಮನ್ ಕೀ ಬಾತ್ ಎಂದರು. ಬಿಜೆಪಿ ಮಂಡಲ ಪ್ರದಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾ.ಪಂ ಸದಸರಾದ ಸುಧಾಕರ್ ಲಾಯಿಲ, ಲಾಯಿಲ ಗ್ರಾ.ಪಂ ಉಪಾಧ್ಯಕ್ಷ ಗಿರೀಶ್ ಡೊಂಗ್ರೆ, ಚಹಾ ಶೋಧಿಸುವ ಮೂಲಕ ಕಾರ್‍ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಾರಾಯಣ ಆಚಾರ್, ಪುರುಷೋತ್ತಮ್, ಪೂವಪ್ಪ ಭಂಡಾರಿ, ಗೋಪಾಲಕೃಷ್ಣ ಭಟ್ ಉಪಸ್ಥಿತರಿ ದ್ದರು. ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.