ಬಿಜೆಪಿ ಯುವ ಮೋರ್ಛಾದಿಂದ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಗಾರ – ಪ್ರತೀ ಬೂತ್‌ಗಳಲ್ಲೂ ಬಿಜೆಪಿ ಗೆಲ್ಲಿಸೋಣ: ಮಾಜಿ ಶಾಸಕ ಪ್ರಭಾಕರ ಬಂಗೇರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  • ಅಟಲ್ ಬಿಹಾರಿ ವಾಜಪೇಯಿ 93ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಶಿಷ್ಠ ಕಾರ್ಯಕ್ರಮ
  • ಕೇಂದ್ರ ಸರಕಾರಗಳ ಮಾಹಿತಿ ಕಾರ್ಯಾಗಾರ
  • ಗ್ರಾಮದ ಮೂರು ಮಂದಿಗೆ ಅಟಲ್‌ಜೀ   ಜನಸ್ನೇಹಿ ಪುರಸ್ಕಾರ

ಮೂರು ಮಂದಿಗೆ ಅಟಲ್‌ಜೀ ಜನಸ್ನೇಹಿ ಪುರಸ್ಕಾರ
ಈ ಸಂದರ್ಭ ಲಾಯಿಲ ಗ್ರಾಮದದಲ್ಲಿ ಸ್ವಾಭಿಮಾನಿ ಬದುಕು ಸಾಗಿಸುತ್ತಿರುವ ಜಗನ್ನಾಥ ಎಂ. (ಪೈಂಟರ್), ರಾಮ ಕುಂಬಾರ (ಕುಂಬಾರಿಕೆ) ಮತ್ತು ಸುಬ್ರಹ್ಮಣ್ಯ (ಟೈಲರ್) ಇವರನ್ನು ಗುರುತಿಸಿ ಅವರಿಗೆ ಯುವ ಮೋರ್ಛಾ ವತಿಯಿಂದ ಅಟಲ್‌ಜೀ ಜನಸ್ನೇಹಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಫಲಕಾಣಿಕೆ ಜೊತೆಗೆ ಭಗವದ್ಗೀತೆ, ಸ್ವಾಮಿ ವಿವೇಕಾನಂದರ ಪುತ್ಥಳಿ ಸಮರ್ಪಿಸಲಾಯಿತು.
ಕಾರ್ಯಕ್ರಮಕ್ಕೆ ಸಹಕಾರಿಯಾದ ಸುಧಾಕರ ಬಿ.ಎಲ್, ರುಕ್ಮಯ್ಯ ಆಚಾರ್ಯ ಕನ್ನಾಜೆ, ಗಿರೀಶ್ ಡೋಂಗ್ರೆ, ಅವರಿಗೆ ಮನ್ನಣೆ ನೀಡಲಾಯಿತು.
ಸರಕಾರಿ ಯೋಜನೆಗಳ ಮಾಹಿತಿ ರ್ಕಾರ್ಯಕ್ರಮ ನಡೆಸಿಕೊಟ್ಟ ಉಷಾ ಕಾಮತ್, ಉದಯ ಕುಮಾರ್ ಬಿ.ಕೆ, ರಶ್ಮಿ ಮತ್ತು ಶಿವಪ್ಪ ರಾಥೋಡ್ ಅವರಿಗೂ ಭಗವದ್ಗೀತೆಯ ಸ್ಮರಣಿಕೆಯೊಂದಿಗೆ ಗೌರವ ನೀಡಲಾಯಿತು. ಅದೇ ದಿನ ತನ್ನ ಹುಟ್ಟುಹಬ್ಬ ಆಚರಿಸಿಕೊಂಡ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಅವರಿಗೂ ಎಲ್ಲರೂ ಶುಭಾಶಯ ಕೋರಿದರು.

ಬೆಳ್ತಂಗಡಿ: ಕೇವಲ ಎರಡು ಮಂದಿ ಮಾತ್ರ ಸಂಸದರಾಗಿದ್ದ ಬಿಜೆಪಿ ಪಕ್ಷ ಅಟಲ್ ಬಿಹಾರಿ ವಾಜಪೇಯಿ ಅವರ ಆತ್ಮವಿಶ್ವಾಸ ಮತ್ತು ಛಲದ ನಡತೆಯಿಂದ 2014ರ ವೇಳೆಗೆ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದಿಂದ ಅಧಿಕಾರ ಹಿಡಿಯುವಂತಾಯಿತು. ಆದ್ದರಿಂದ ಅವರ ಪ್ರೇರಣೆ ಪಡೆದು ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲೂ ಪಕ್ಷ ಅಧಿಕಾರಕ್ಕೆ ಬರಬೇಕು, ಬೆಳ್ತಂಗಡಿಯಿಂದಲೂ ಪಕ್ಷದ ಶಾಸಕರು ಗೆದ್ದು ಬರಬೇಕಾಗಿದ್ದು ಅದಕ್ಕಾಗಿ ಕಾರ್ಯಕರ್ತರು ಪ್ರತೀ ಬೂತ್‌ನಲ್ಲೂ ಬಿಜೆಪಿಗೆ ಗೆಲುವಾಗುವಂತೆ ನೋಡಿಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರಭಾಕರ ಬಂಗೇರ ಹೇಳಿದರು.
ಬಿಜೆಪಿ ಮತ್ತು ಯುವಮೋರ್ಛಾ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ 93ನೇ ಜನ್ಮದಿನಾಚರಣೆಯಂಗವಾಗಿ ಡಿ. 25 ರಂದು ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಯುವ ಮೋರ್ಛಾ ಅಧ್ಯಕ್ಷ ಹರೀಶ್ ಪೂಂಜ ಮಾತನಾಡಿ, ಪ್ರಧಾನಮಂತ್ರಿ ಸಡಕ್ ರಸ್ತೆ ಯೋಜನೆ ಮೂಲಕ ಹಳ್ಳಿಗಳನ್ನು ಪಟ್ಟಣಕ್ಕೆ ಸಂಪರ್ಕಿಸಿದ ಮಹಾನ್ ಸಾಧನೆ ಮಾಡಿದ ಪ್ರಧಾನಿ ವಾಜಪೇಯಿಯವರಾಗಿದ್ದರು. ಸರ್ವ ಶಿಕ್ಷಣ ಅಭಿಯಾನ ಮೊದಲಾದ ಕ್ರಿಯಾತ್ಮಕ ಯೋಜನೆ ಅವರಿಂದ ಆರಂಭವಾಗಿದ್ದರೆ ಕೇವಲ 12 ರೂ. ಗಳ ಬ್ಯಾಂಕ್ ಖಾತೆ ಪಾವತಿ ಮೂಲಕದ ವಿಮಾ ಸೌಲಭ್ಯ ನೀಡಿ ದೇಶದ ಪ್ರತಿಯೊಬ್ಬರ ವೈಯುಕ್ತಿಕ ಭದ್ರತೆ ಒದಗಿಸಿಕೊಟ್ಟವರು ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ, ಮಾತನಾಡಿ, ಜ. 27ಕ್ಕೆ ಬೂತ್ ಮಟ್ಟದ ನವರತ್ನಗಳು ಎಂದು ಗುರುತಿಸಲ್ಪಟ್ಟವರ ಸಮಾವೇಶಕ್ಕೆ ದಿನ ನಿಗಧಿಯಾಗಿದೆ, 29ಕ್ಕೆ ಪರಿವಾರ ಸಂಘಟನೆಗಳ ಸಭೆ ಕರೆಯಲಾಗಿದೆ. ಸದ್ಯದಲ್ಲೇ ಎದುರಾಗುವ ಚುನಾವಣೆಯಂಗವಾಗಿ ಇನ್ನು ಕಾರ್ಯಕರ್ತರಿಗೆ ಬಿಡುವಿಲ್ಲದ ಚಟುವಟಿಕೆಗಳಿವೆ. ಎಲ್ಲದರಲ್ಲೂ ಭಾಗಿಗಳಾಗಿ ಪಕ್ಷದ ಗೆಲುವಿನತ್ತ ಶ್ರಮವಹಿಸಬೇಕು ಎಂದರು.
ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ ಮತ್ತು ಸೌಮ್ಯಲತಾ ಜಯಂತ ಗೌಡ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಲಾಯಿಲ ಶಕ್ತಿಕೇಂದ್ರದ ಅಧ್ಯಕ್ಷ ಭರತ್ ಕುಮಾರ್ ಬಂಗಾಡಿ, ತಾಲೂಕು ಯುವ ಮೋರ್ಛಾ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ಪಣೆಕ್ಕರ, ಪಕ್ಷದ ಪ್ರ. ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತು ಸೀತಾರಾಮ ಬಿ.ಎಸ್. ವೇದಿಕೆಯಲ್ಲಿದ್ದರು.
ರುಕ್ಮಯ್ಯ ಆಚಾರ್ಯ ಕನ್ನಾಜೆ ಕಾರ್ಯಕ್ರಮ ನಿರೂಪಿಸಿದರು. ಲಾಯಿಲ ಗ್ರಾ.ಪಂ. ಸದಸ್ಯೆ ಜಯಶ್ರೀ ಪ್ರಾರ್ಥನೆ ಹಾಡಿದರು. ಲಾಯಿಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ವಂದಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತಾಲೂಕು ಬಿಜೆಪಿ ಯುವಮೋರ್ಛಾ ಅಧ್ಯಕ್ಷ ಸಂಪತ್ ಬಿ ಸುವರ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 1992ರಲ್ಲಿ ಬಿಜೆಪಿಯಿಂದ ಕೇವಲ ಇಬ್ಬರು ಮಾತ್ರ ಸಂಸದರಿದ್ದ ಸಂಸತ್‌ನಲ್ಲಿ ವಾಜಪೇಯಿಯವರು ಆಡಿದ ಮಾತು ಅಂದು ಪ್ರಭಲ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‌ನವರಿಗೆ ಅಪಹಾಸ್ಯವಾಗಿ ಕಂಡರೂ ಅವರ ಮಾತಿನ ಪ್ರೇರಣೆಯಿಂದ ಮುನ್ನಡೆದ ಪಕ್ಷ ಅದೇ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಹಿಂದಿಕ್ಕಿದ್ದು ಒಂದು ಇತಿಹಾಸ, ಪ್ರಾರಂಭದಲ್ಲಿ ಪಕ್ಷ ವಾಜಪೇಯ ಅವರ ಹೆಸರಿನಲ್ಲೇ ಗ್ರಾಮ ಗ್ರಾಮಕ್ಕೆ ಮತಯಾಚನೆ ಮಾಡಲು ತೆರಳಿ ಪಕ್ಷಕ್ಕೆ ಅತೀ ಹೆಚ್ಚು ಪ್ರಚಾರ ಬರುವಂತಾಗಿತ್ತು.  ಅಂತಹ ಧೀಮಂತ ವ್ಯಕ್ತಿಯ ಹುಟ್ಟುಹಬ್ಬ ಈ ರೀತಿ ವಿಶಿಷ್ಟವಾಗಿ ಆಚರಿಸುವ ಕನಸು ಕಾಣಲಾಯಿತು ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.