ತುಳು ಕೂಟ ಕುವೈಟ್ ಕಾರ್ಯಕ್ರಮಕ್ಕೆ ಡಾ| ಹೆಗ್ಗಡೆಯವರಿಗೆ ಆಹ್ವಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ : ತುಳುನಾಡ ಸಂಸ್ಕೃತಿ ಸಂಸ್ಕಾರ, ಆಚಾರ ವಿಚಾರಗಳನ್ನು ಮರುಭೂಮಿ ನಾಡು ಕುವೈಟ್‌ನಲ್ಲಿಯೂ ಬಿತ್ತರಿಸಲು ಮತ್ತು ಬೆಳೆಸಲು ತುಳುಕೂಟ ಕುವೈಟ್ ಶ್ರಮಿಸುತ್ತಿದ್ದು ಇದರ ವತಿಯಿಂದ ಅ.26 2018ರಂದು ತುಳುಪರ್ಬ ಕುವೈಟ್‌ನಲ್ಲಿ ನಡೆಯಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆಯವರನ್ನು ಭಾಗವಹಿಸುವಂತೆ ತುಳು ಕೂಟ ಕುವೈಟ್ ಇದರ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಡಿ.26 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ತುಳುನಾಡ ಸಂಸ್ಕೃತಿಯಂತೆ ಆಹ್ವಾನಿಸಿದರು.
ನಂತರ ಡಾ| ಹೆಗ್ಗಡೆಯವರಲ್ಲಿ ಮಾತನಾಡಿ 2000 ಇಸವಿಯಲ್ಲಿ ಕುವೈಟ್‌ನಲ್ಲಿ ತುಳುಕೂಟ ಪ್ರಾರಂಭವಾಗಿದ್ದು ತುಳು ಭಾಷೆ, ತುಳು ಸಂಸ್ಕೃತಿ ಮುಂತಾದವುಗಳನ್ನು ತುಳು ಕೂಟ ಬೆಳೆಸುತ್ತಿದ್ದು ತುಳು ದೀಪ ಯೋಜನೆಯಲ್ಲಿ ತುಳು ನಾಡಿಗೆ ಅಂಬುಲೆನ್ಸ್ ದೇಣಿಗೆ ಉಡುಪಿ ಹಾಗೂ ಮಂಗಳೂರಿನ ಆಸ್ಪತ್ರೆಗೆ ಕಿಡ್ನಿ ಡಯಾಲಿಸಿಸ್ ಕೇಂದ್ರ ಯಂತ್ರ ಮತ್ತು ಪ್ರಧಾನಮಂತ್ರಿ ಪರಿಹಾರನಿಧಿಗೆ ದೇಣಿಗೆಯನ್ನು ನೀಡಿದ
ಕೆಲಸವನ್ನು ಮಾಡಿರುತ್ತೇವೆ. ಕುವೈಟ್‌ನಲ್ಲಿ ತುಳುನಾಡಿನಲ್ಲಿ ನಡೆಯುತ್ತಿರುವ ಎಲ್ಲಾ ಆಚಾರ ವಿಚಾರ ತುಳು ಸಾಂಸ್ಕೃತಿಕ ಕಲೆ, ಕ್ರೀಡೆಗಳನ್ನು ಪ್ರತೀವರ್ಷ ನಡೆಸುತ್ತಿದ್ದು ಅದರಂತೆ 2018 ಅಕ್ಟೋಬರ್.26ರಂದು ತುಳು ಪರ್ಬ 2018ನ್ನು ಆಚರಿಸುತ್ತಿದ್ದೇವೆ.
ತುಳು ಭಾಷೆ ಸಂಸ್ಕೃತಿಗೆ ಅತಿಹೆಚ್ಚು ಮಹತ್ವವನ್ನು ನೀಡುತ್ತಿರುವ ನೀವು ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಗಳಲ್ಲಿಯೂ ಕೂಡ ಮನವಿ ಮಾಡಿದ್ದೀರಿ. ಆದ್ದರಿಂದ ಕರ್ನಾಟಕದ ನಿವಾಸಿಗಳಾದ ಹಲವಾರು ತುಳು ಭಾಷಿಗರು ಕುವೈಟ್‌ನಲ್ಲಿ ನೆಲೆಸಿದ್ದು ವಿವಿಧ ತುಳು ವೇದಿಕೆಗಳನ್ನು ರಚಿಸಿ ತುಳುಭಾಷೆ ಸಂಸ್ಕೃತಿಗೆ ಪ್ರೋತ್ಸಾಹಿಸುತ್ತಿದ್ದೇವೆ. ಇದಕ್ಕೆ ಶಕ್ತಿ ತುಂಬಲು ತಾವು ಹಾಗೂ ಹೇಮಾವತಿ ವಿ. ಹೆಗ್ಗಡೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತುಳು ಕೂಟ ಕುವೈಟ್‌ನ ಅಧ್ಯಕ್ಷ ವಿಲ್ಸನ್ ಡಿಸೋಜಾ, ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಸುಧಾಕರ ಶೆಟ್ಟಿ ಮಾಜಿ ಅಧ್ಯಕ್ಷರು ಬಂಟರ ಸಂಘ ಕುವೈಟ್, ಗೋಕುಲ್‌ದಾಸ್ ಭಟ್ ಅಧ್ಯಕ್ಷರು ಜಿ.ಎಸ್.ಬಿ ಸಭಾ ಕುವೈಟ್, ವಿನಾಯಕ ಶೆಣೈ ಜಿಎಸ್‌ಬಿ ಪ್ರತಿನಿಧಿ ಕುವೈಟ್, ಹರೀಶ್ ಭಂಡಾರಿ ಮಾಜಿ ಅಧ್ಯಕ್ಷರು ತುಳುಕೂಟ ಕುವೈಟ್, ಅಲ್ವೀನ್ ಮಾಡ್ತ ಸದಸ್ಯರು ತುಳುಕೂಟ ಕುವೈಟ್, ವಸಂತಿ ಸುಧಾಕರ ಶೆಟ್ಟಿ, ಗೀತಾ ಗೋಕುಲ್ ಭಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.