ನಮ ಮಾತೆರ್‍ಲಾ ಒಂಜೇ ಕಲಾ ತಂಡದ ದಶಕದ ಸಂಭ್ರಮ ಕಲಾ ತಂಡದಿಂದ ಸರ್ವಧರ್ಮ ಸಮನ್ವಯತೆಯ ಸಂದೇಶ

  • ಮೂರು ಧರ್ಮಗಳ ಪ್ರಮುಖರಿಂದ ಮೂರು ಧರ್ಮಗಳ ಪ್ರಮುಖರಿಂದ ಕಾರ್ಯಕ್ರಮ ಉದ್ಘಾಟನೆ
  • 35 ಮಂದಿ ವಿವಿಧ ಕ್ಷೇತ್ರಗಳ ಕಲಾ ಪ್ರೋತ್ಸಾಹಕರಿಗೆ ಗೌರವಾರ್ಪಣೆ
  • ಮೂರು ಧರ್ಮದ ಕಲಾ ಪ್ರತಿಭೆಗಳಿಂದ ಒಂದೇ ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
  • ಸರಕಾರಿ ಶಾಲಾ ಆಯ್ದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
  • ಅಶಕ್ತರಿಗೆ ನಿಧಿ ಪುರಸ್ಕಾರ
  • ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ

ಅಳದಂಗಡಿ: ನಮ ಮಾತೆರ್‍ಲಾ ಒಂಜೇ ಕಲಾ ತಂಡ ಅರುವ ಇದರ ದಶಕದ ಸಂಭ್ರಮ, ಮೂರು ಧರ್ಮಗಳ ಪ್ರಮುಖರು, ಸಮಾಜ ಬಾಂಧವರ ಒಗ್ಗೂಡುವಿಕೆಯೊಂದಿಗೆ, ಕಲಾಪ್ರೋತ್ಸಾಹಕರಿಗೆ ಗೌರವಾರ್ಪಣೆ, ಮಕ್ಕಳ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ನಿಧಿ ಅರ್ಪಣೆ, ಮೂರು ಧರ್ಮಗಳ ಕಲಾ ಪ್ರತಿಭೆಗಳಿಂದ ಒಂದೇ ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿ.೨೩ರಂದು ಅಳದಂಗಡಿಯಲ್ಲಿ ಅದ್ದೂರಿಯಾಗಿ ನಡೆಯಿತು. ಅಳದಂಗಡಿ ಅರಸರು, ಖತೀಬರು ಮತ್ತು ಧರ್ಮಗುರುಗಳು
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಅವರು ಮಾತನಾಡಿ, ಸಾಮಾಜಿಕ ಕಳಕಳಿಯ ಯುವಕರು ಒಟ್ಟು ಸೇರಿ ರಚಿಸಿದ ಕಲಾತಂಡ ತನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸನ್ನು ಗೆದ್ದಿದೆ. ಅಜಿಲ ಸೀಮೆಯ ಪರಂಪರೆಗೆ ತಕ್ಕಂತೆ ಕಲಾ ತಂಡ ಸರ್ವಧರ್ಮ ಸಮನ್ವಯತೆಯಿಂದ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಇಂದಿನ ಕಾರ್ಯಕ್ರಮ ಅಳದಂಗಡಿ ಇತಿಹಾಸದಲ್ಲೇ ಅತ್ಯುತ್ತಮ ಕಾರ್ಯಕ್ರಮವಾಗಿದೆ. ತಂಡದ ಯುವಕರು ತಮ್ಮ ಆದಾಯದ ಒಂದು ಅಂಶವನ್ನು ಅನೇಕ ಜನೋಪಯೋಗಿ ಕಾರ್ಯಗಳನ್ನು ಮಾಡಲು ಬಳಕೆ ಮಾಡಿ ಇತರರಿಗೆ ಆದರ್ಶರಾಗಿದ್ದಾರೆ ಇವರ ಸೇವೆ ಇನ್ನಷ್ಟು ಮುಂದುವರಿಯಲಿ ಎಂದು ಹಾರೈಸಿದರು.
ಅಳದಂಗಡಿ ನೂರಲ್ ಇಸ್ಲಾಂ ಜುಮ್ಮಾ ಮಸೀದಿಯ ಖತೀಬರಾದ ಯೂಸುಫ್ ಸಖಾಫಿಯವರು ಮಾತನಾಡಿ, ಇಂದು ಮನುಷ್ಯ, ಮನುಷ್ಯರ ನಡುವೆ ನಡೆಯುತ್ತಿರುವ ಕಲಹದಂತಹ ಸಂದಿಗ್ದ ಕಾಲಘಟ್ಟದಲ್ಲಿ ನಮ ಮಾತೆರ್‍ಲ ಒಂಜೇ ಎಂಬ ಸಂದೇಶ ಪ್ರತಿಯೊಬ್ಬರಿಗೂ ತಲುಪಬೇಕು. ಮನುಷ್ಯತ್ವ, ಮಾನವೀಯತೆಯೇ ನಮ್ಮ ನಿಜವಾದ ಧರ್ಮವಾಗಿದೆ ಎಂದರು. ಅರ್ವ ಸಂತ ಪೀಟರ್ ಕ್ಲೇವರ್ ಚರ್ಚ್‌ನ ಧರ್ಮಗುರು ರೆ|ಫಾ| ಅಬೆಲ್ ಲೋಬೊ ಅವರು ಮಾನವ ಸೇವೆಗೆ ಧರ್ಮ, ರಾಜಕೀಯ ಅಡ್ಡ ಬರುವುದಿಲ್ಲ ಎಂಬ ಸಂದೇಶವನ್ನು ನಮ ಮಾತೆರ್‍ಲಾ ಒಂಜೇ ಕಲಾ ತಂಡ ಇಂದು ಜಗತ್ತಿಗೆ ಸಾರಿದೆ. ನಾವು ಮಾನವರು ಸಹೋದರತೆಯಿಂದ ಬದುಕಬೇಕು, ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣುವುದೇ ಮಾನವ ಧರ್ಮವಾಗಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕ್ಷಿನಿಕ್ ಅಳದಂಗಡಿಯ ಡಾ| ಎನ್.ಎಂ. ತುಳಪುಳೆ ಅವರು ಮಾತನಾಡಿ ನಮ ಮಾತೆರ್‍ಲಾ ಒಂಜೇ ಕಲಾ ತಂಡದ ಸಾಮಾಜಿಕ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಗಳಾಗಿ ಜಾತ್ಯಾತೀತ ಜನತಾದಳ ಜಿಲ್ಲಾ ಉಪಾಧ್ಯಕ್ಷ ಕೆ. ಜಗನ್ನಾಥ ಗೌಡ, ಜಾತ್ಯಾತೀತ ಜನತಾದಳ ಬೆಳ್ತಂಗಡಿಯ ಶ್ರೀಮತಿ ರಾಜಶ್ರೀ ಎಸ್. ಹೆಗ್ಡೆ, ಅಂಡಿಂಜೆ ಕ್ಷೇತ್ರದ ತಾ.ಪಂ. ಸದಸ್ಯ ಸುಧೀರ್ ಆರ್.ಸುವರ್ಣ, ಅಳದಂಗಡಿ ಕ್ಷೇತ್ರದ ತಾ.ಪಂ. ಸದಸ್ಯೆ ವಿನುಷಾ ಪ್ರಕಾಶ್, ಅಳದಂಗಡಿ ಗ್ರಾ.ಪಂ. ಉಪಾಧ್ಯಕ್ಷ ಸತೀಶ್, ರಂಗಭೂಮಿ ನಟ ಸುಂದರ ಹೆಗ್ಡೆ ಮೂಡುಕೋಡಿ ಮಾತನಾಡಿ ಕಲಾ ತಂಡದ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇನ್ನಷ್ಟು ಸಮಾಜ ಸೇವಾ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ, ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು ಕಾರ್ಯಕ್ರಮಕ್ಕೆ ಮೊದಲು ಆಗಮಿಸಿ ಶುಭ ಕೋರಿದ್ದರು. ವರ್ಷಿಣಿ ಭಟ್ ಪ್ರಾರ್ಥನೆ ಹಾಡಿದರು. ವಸಂತ ಬಿ. ಬಂಗೇರ ಸ್ವಾಗತಿಸಿದರು. ಯೋಗೀಶ್ ಕುಮಾರ್ ದೋರಿಂಜೆ ಕಲಾ ತಂಡ ನಡೆದು ಬಂದ ದಾರಿ ಬಗ್ಗೆ ಪ್ರಸ್ತಾಪಿಸಿದರು. ಪತ್ರಕರ್ತ ವಿಜಯಕುಮಾರ್ ನಾವರ ಸನ್ಮಾನಿತರನ್ನು ಪರಿಚಯಿಸಿದರು. ಸುನೀಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿ, ಕಲಾ ತಂಡದ ಪ್ರಧಾನ ಕಾರ್ಯದರ್ಶಿ ದರ್ಶನ್ ಶೆಟ್ಟಿ ವಂದಿಸಿದರು. ಪ್ರಧಾನ ವ್ಯವಸ್ಥಾಪಕ ರಮೇಶ್ ಸುವರ್ಣ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಕಿರಣ್‌ಕುಮಾರ್, ಪ್ರಧಾನ ಸಂಚಾಲಕ ಜನಾರ್ದನ, ಕ್ರೀಡಾ ಸಂಚಾಲಕ ಪ್ರಶಾಂತ್, ಜೊತೆ ಕಾರ್ಯದರ್ಶಿ ದಿವಾಕರ ಭಟ್, ಉಪಾಧ್ಯಕ್ಷರಾದ ಮಾರ್ಕ್ ಡಿ’ಸೋಜಾ, ಶುಭಕರ ಬಂಗೇರ, ಕೋಶಾಧಿಕಾರಿ ಗಂಗಾಧರ ಎಂ, ಪ್ರಚಾರ ಸಮಿತಿಯ ಬಾಲಕೃಷ್ಣ, ರವಿ ಪೂಜಾರಿ, ಬೇಬಿ ಸಾಲ್ಯಾನ್, ಶೇಖರ್, ವರದರಾಜ, ಕಲಾ ತಂಡದ ಅಧ್ಯಕ್ಷ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಗಿರೀಶ್ ಕುಲಾಲ್, ಉಪಾಧ್ಯಕ್ಷ ಶ್ರೀಧರ್, ಜೊತೆ ಕಾರ್ಯದರ್ಶಿ ಹಿತೇಶ್ ಬೇಕಲ್, ಸಂಚಾಲಕರಾದ ಸುರೇಂದ್ರ, ರಮೇಶ್ ಹೆಗ್ಡೆ, ಕೋಶಾಧಿಕಾರಿ ದಾಮೋದರ ಟೈಲರ್ ಹಾಗೂ ಎಲ್ಲಾ ಸದಸ್ಯರು ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ನಂತರ ಸ್ಥಳೀಯ ಆಹ್ವಾನಿತ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಸಂತ ಪೀಟರ್ ಕ್ಲೇವರ್ ಚರ್ಚ್ ಅರ್ವ ಇವರಿಂದ ಮನೋರಂಜನಾ ಕಾರ್ಯಕ್ರಮ, ಕೀರ್ತನಾ ತಂಡ ಮುಂಡಾಜೆ ಇವರಿಂದ ತುಳುನಾಡ ಸಾಂಸ್ಕೃತಿಕ ವೈಭವ, ಐಜಿ ಮುಹಮ್ಮದ್ ರಿಯಾಜ್ ಬಾಹಸನಿ ಹಾಗೂ ಸಂಗಡಿಗರು, ಅಲ್‌ವಫಾ ದಫ್ ಕಮಿಟಿ ಬದ್ಯಾರು ಇವರಿಂದ ಒಂದೇ ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.