ತಹಶೀಲ್ದಾರ್ ನೇಮಕಗೊಳಿಸದಿದ್ದರೆ ಸಿಎಂ ಕಾರ್ಯಕ್ರಮದಲ್ಲಿ ಬಿಜೆಪಿ ಕಪ್ಪು ಬಾವುಟ ಪ್ರದರ್ಶನ : ರಂಜನ್ ಜಿ. ಗೌಡ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಛೇರಿಗೆ ಪೂರ್ಣಕಾಲಿಕ ತಹಶಿಲ್ದಾರ್ ಕೊಡಿ ಎಂದು ಭಾರತೀಯ ಜನತಾ ಪಾರ್ಟಿಯಿಂದ ತಿಂಗಳ ಹಿಂದೆಯೇ ಪ್ರತಿಭಟನೆ ನಡೆಸಿ ಆಡಳಿತದ ಗಮನಸೆಳೆಯಲಾದರೂ ಇದುವರೆಗೆ ಯಾವುದೇ ಕ್ರಮ ಜರುಗಿಲ್ಲ, ಆ ವೇಳೆ ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿದ್ದ ಸಹಾಯಕ ಆಯುಕ್ತರು ನೀಡಿದ್ದ ಭರವಸೆ ಕೂಡ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಕೂಡಲೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಜ.7 ರಂದು ಬೆಳ್ತಂಗಡಿಗೆ ಆಗಮಿಸಲಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಬಿಜೆಪಿ ವತಿಯಿಂದ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿರೋಧ ವ್ಯಕ್ತಪಡಿಸಲಾಗುವುದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ ಹೇಳಿದ್ದಾರೆ.
ಪಕ್ಷದ ವತಿಯಿಂದ ಡಿ. 26 ರಂದು ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ನೀಡಿದ ಬಳಿಕ ಸುದ್ದಿ ಪ್ರತಿನಿಧಿ ಜೊತೆ ಅವರು ಮಾತನಾಡಿದರು.
ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿದ ವೇಳೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸುವ ತಯಾರಿ ನಡೆಸಲಾಗಿತ್ತಾದರೂ ಎ.ಸಿ. ಯವರು ನೀಡಿದ ಭರವಸೆಯಂತೆ ತಾತ್ಕಾಲಿಕವಾಗಿ ಹೋರಾಟ ಹಿಂಪಡೆದುಕೊಳ್ಳಲಾಗಿತ್ತು, ತಾಲೂಕು ಕಛೇರಿಯಲ್ಲಿ ತಹಶಿಲ್ದಾರ್ ಇಲ್ಲದಿರುವುದರಿಂದ ಜನ ಸಾಮಾನ್ಯರಿಗೆ ಇನ್ನಿಲ್ಲದ ತೊಂದರೆಯಾಗಿದೆ, ಯಾವುದೇ ಕಡತಗಳ ವಿಲೇ ನಡೆಯುತ್ತಿಲ್ಲ, ಪ್ರಭಾರ ತಹಶಿಲ್ದಾರರನ್ನು ನಿಗಧಿತ ದಿನಗಳಲ್ಲಿ ಹೆಚ್ಚುವರಿಯಾಗಿ ಕರ್ತವ್ಯಕ್ಕೆ ನಿಯುಕ್ತಿಗೊಳಿಸಿ ಜನತೆಗೆ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳುವುದಾಗಿ ಆಡಿದ್ದ ಮಾತೂ ಇಂದು ಸುಳ್ಳಾಗಿದೆ. ಆದ್ದರಿಂದ ಪಕ್ಷ ಮುಂದಿನ ತೀರ್ಮಾನಕ್ಕೆ ಬಂದಿದೆ ಎಂದರು.
ಮನವಿ ನೀಡುವ ವೇಳೆ ಅಧ್ಯಕ್ಷರ ಜೊತೆ ಮಾಜಿ ಶಾಸಕ ಪ್ರಭಾಕರ ಬಂಗೇರ, ಪಕ್ಷದ ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತು ಸೀತಾರಾಮ, ಪ್ರಮುಖರಾದ ನಾರಾಯಣ ಆಚಾರ್ಯ, ಪ್ರಭಾಕರ ಗೌಡ ಮೊಗ್ರು, ತಾ.ಪಂ. ಸದಸ್ಯರಾದ ಸುಧಾಕರ ಬಿ.ಎಲ್. ಮತ್ತು ಶಶಿದರ ಎಂ. ಕಲ್ಮಂಜ, ಲಾಯಿಲ ಶಕ್ತಿ ಕೇಂದ್ರದ ಅಧ್ಯಕ್ಷ ಭರತ್ ಕುಮಾರ್ ಬಂಗಾಡಿ, ಶೇಖರ್ ಪಿಜತ್ತಾಡಿ, ಭಾಸ್ಕರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.