ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಬಳಗದ ಪದಗ್ರಹಣ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಮುಂದಿನ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಕಿರಣ್ ಕುಮಾರ್ ಶೆಟ್ಟಿ ಬಳಗದ ಪದಗ್ರಹಣ ಡಿ. 23ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ರುಡ್‌ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ಎಂ ಜನಾರ್ದನ್, ಜೇಸಿ ವಲಯಾಧ್ಯಕ್ಷ ರಾಕೇಶ್ ಕುಂಜೂರು, ವಲಯ ಉಪಾಧ್ಯಕ್ಷ ರವಿ ಕಕ್ಕ್ಯಪದವು, ಕುವೆಂಪು ವಿ.ವಿ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ ರಮೇಶ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ನೂತನ ಪದಾಧಿಕಾರಿಗಳಾದ ವಿಶಾಲ್ ಆಗಸ್ಟಿನ್, ಪ್ರಶಾಂತ್ ಲಾಯಿಲ, ಸತೀಶ್ ಸುವರ್ಣ, ಪ್ರಸಾದ್ ಬಿ.ಎಸ್, ರಂಜಿತ್ ಎಚ್.ಡಿ, ಅಭಿನಂದನ್ ಹರೀಶ್, ಸಂತೋಷ್ ಶೆಟ್ಟಿ, ಗುರುರಾಜ್ ಎಸ್, ಜೇಸಿರೆಟ್ ಅಧ್ಯಕ್ಷೆ ದೀಪಾ ಕಿರಣ್, ಜೇಜೇಸಿ ಅಧ್ಯಕ್ಷ ಸುಹಾಸ್ ಶೆಟ್ಟಿ, ಸ್ವಾತಿ ವಿಜಯ ಕುಮಾರ್, ಗಣೇಶ್ ಶಿರ್ಲಾಲ್, ದಾಮೋಧರ್, ಅನುಶ್ಚಂದ್ರ, ವಿಜಯ ನಿಡಿಗಲ್, ಪ್ರೀತಮ್ ಶೆಟ್ಟಿ, ಚಿದಾನಂದ ಮತ್ತು ಹೇಮಾವತಿ, ಸ್ಮಿತೇಶ್ ಎಸ್ ಬಾರ್ಯ ಮತ್ತು ಜಿತೇಶ್, ನಿರ್ಗಮಿತ ಜೇಸಿರೆಟ್ ಅಧ್ಯಕ್ಷೆ ಅಮೃತಾ ಎಸ್ ಕೋಟ್ಯಾನ್ ಉಪಸ್ಥಿತರಿದ್ದರು.
ನಿರ್ಗಮನಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳೆಂಜ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು.
ಸಂಘ ಸಂಸ್ಥೆಗಳ ಪರವಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಕೆ ಜೈನ್, ವಲಯಾಧ್ಯಕ್ಷ ವೆಂಕಟೇಶ್ ಎಂ.ಬಿ, ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ ಸಾಧನಾ, ಉಜಿರೆ ಜೇಸಿಐ ಅಧ್ಯಕ್ಷ ದೇವದಾಸ್ ನಾಯಕ್, ಮಡಂತ್ಯಾರು ಜೇಸಿಐ ಅಧ್ಯಕ್ಷ ನವೀನ್ ಕೋಡ್ಲಕ್ಕೆ, ರೋಟರಿ ಕ್ಲಬ್ ಅಧ್ಯಕ್ಷ ಡಾ| ಸುಧೀರ್ ಪ್ರಭು ನೂತನ ಆಡಳಿತ ಮಂಡಳಿಗೆ ಶುಭಕೋರಿದರು.
ಜೇಸಿ ತುಕಾರಾಮ ಮತ್ತು ಕೇಶವ ಪೈ ಅತಿಥಿಗಳ ಪರಿಚಯ ಮಾಡಿದರು. ರೈತ ದಿನದ ಅಂಗವಾಗಿ ಜೇಸಿ ಸದಸ್ಯ, ಮಾಜಿ ಸೈನಿಕರೂ ಆಗಿರುವ ದಯಾನಂದ ಅವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.