ನಿಡಿಗಲ್ ಕಲ್ಮಂಜ ಸ. ಹಿ. ಪ್ರಾ ಶಾಲಾ ಶತಮಾನೋತ್ಸವಕ್ಕೆ ಸಂಕಲ್ಪ

Advt_NewsUnder_1
Advt_NewsUnder_1
Advt_NewsUnder_1

ಕಲ್ಮಂಜ : ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನಿಡಿಗಲ್ ಕಲ್ಮಂಜ ಇದು 1925 ರಲ್ಲಿ ಪ್ರಾರಂಭಗೊಂಡು ಇನ್ನೇನೋ 7 ವರ್ಷಗಳಲ್ಲಿ ಶತಮಾನೋತ್ಸವವನ್ನು ಕಾಣಲಿರುವುದರಿಂದ ಹಳೆವಿದ್ಯಾರ್ಥಿಗಳೇ ಸೇರಿ ಈ ಕಾರ್ಯಕ್ರಮವನ್ನು ಐತಿಹಾಸಿಕ ಕಾರ್ಯಕ್ರಮವಾಗಿ ಸಂಘಟಿಸುವ ಬಗ್ಗೆ ಸಂಕಲ್ಪ ಕೈಗೊಂಡರು.ಸ
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಮತ್ತು ಶಾಲಾ ಹಳೆವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಹೆತ್ತವರ ಸಹಕಾರದೊಂದಿಗೆ ಡಿ. 16 ರಂದು ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವದ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲ್ಮಂಜ ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ ವಹಿಸಿದ್ದರು.
ಉದ್ಘಾಟನೆಯನ್ನು ಉಜಿರೆ ಕ್ಷೇತ್ರದ ಜಿ.ಪಂ ಸದಸ್ಯೆ ನಮಿತಾ ಕೆ ಪೂಜಾರಿ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಶಾಲಾ ಆಟದ ಮೈದಾನ ರಚನೆಗೆ 1 ಲಕ್ಷ ರೂ. ಸರಕಾರಿ ಅನುದಾನ ಒದಗಿಸಿಕೊಡುವುದಾಗಿ ಭರವಸೆಯನ್ನೂ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯೆ ಲೀಲಾವತಿ, ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮಾಲಕ ಮೋಹನ ಚೌದರಿ, ಪತ್ರಕರ್ತ ಲ| ಅಶ್ರಫ್ ಆಲಿಕುಂಞಿ ಮುಂಡಾಜೆ, ಎಸ್‌ಡಿಎಂಸಿ ನಿಕಟಪೂರ್ವಾಧ್ಯಕ್ಷ ಮೋನಪ್ಪ ಟಿ, ಎಚ್.ಡಿ.ಎಫ್.ಸಿ ಬ್ಯಾಂಕ್ ಕ್ಲಸ್ಟರ್ ಹೆಡ್ ಚಿದಾನಂದ ಶೆಟ್ಟಿ ಇವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಕೋರಿದರು.
ವೇದಿಕೆಯಲ್ಲಿ ಕೃಷಿಕರಾದ ರತನ್ ಕುಮಾರ್ ಜೈನ್ ಹುಣಿಪ್ಪಾಜೆ, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಮುಜೀಬ್ ಸಾಹೇಬ್, ಅಲ್‌ಮಾಸ್ ಇಂಟರ್‌ನ್ಯಾಷನಲ್ ಮಂಗಳೂರು ಇದರ ಅಬ್ಬಾಸ್ ಬಿ.ಇ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಮ ಟಿ, ವಿದ್ಯಾರ್ಥಿ ನಾಯಕ ಶೋಭಿತ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯೋ ಪಾಧ್ಯಾಯಿನಿ ಸಾವಿತ್ರಿ ಶರ್ಮ ವರದಿ ವಾಚಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಸಂಘಟಕ ಬಿ.ಎನ್ ಹಮೀದ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸುಬ್ರಾಯ ಕಲ್ಮಂಜ ಕಾರ್ಯಕ್ರಮ ನಿರೂಪಿಸಿ “ಷಾ ಎರೇಂಜರ್‍ಸ್”ನ ಶರೀಫ್ ಟಿ ನಿಡಿಗಲ್ ವಂದನಾರ್ಪಣೆ ಗೈದರು. ವಾರ್ಷಿಕೋತ್ಸವ ಪ್ರಯುಕ್ತ ವಿದ್ಯಾಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸ್ಪರ್ಧಾ ವಿಜೇತರು ಮಾತ್ರವಲ್ಲದೆ ಎಲ್ಲಾ ವಿದ್ಯಾರ್ಥಿಗಳನ್ನೂ ಗುರುತಿಸಿ ಬಹುಮಾನ ವಿತರಿಸಲಾಯಿತು. ಅಪೂರ್ವ ಧ್ವನಿ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ವಿಶೇಷ ಅಲಂಕೃತ ವೇದಿಕೆಯಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳು ಅಭಿವ್ಯಕ್ತಗೊಂಡವು. ಎಸ್‌ಡಿಎಂಸಿ ಸದಸ್ಯರು, ಶಿಕ್ಷಕವೃಂದ, ಪೋಷಕರು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.