ಬಂದಾರು ಗ್ರಾಮದಲ್ಲಿ ಒಟ್ಟು 7.78 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಕರ್ನಾಟಕದಲ್ಲಿ ಸಿದ್ದರಾಮಯ್ಯರದ್ದು ನುಡಿದಂತೆ ನಡೆದ ಸರಕಾರ: ಶಾಸಕ ವಸಂತ ಬಂಗೇರ

ಶಿಲಾನ್ಯಾಸ ನೆರವೇರಿದ ಕಾಮಗಾರಿಗಳು

  • ಬಂದಾರು ಬೈಪಾಡಿ ಕಾಡಂಡ ಕಿಲಾರು ಮೈಪಾಲ ರಸ್ತೆ ಮತ್ತು  ಸೇತುವೆಗೆ 1.60 ಕೋಟಿ ರೂ.
  • ಬಂದಾರು ಗ್ರಾಮದ ದಡ್ಡು-ಗೋಳಿದಡಿ-ಕೊಲುದಪಲ್ಕೆ  ಬೋಲೊಡಿ ರಸ್ತೆ ಮತ್ತು ಸೇತುವೆಗೆ 5.97 ಕೋಟಿ ರೂ.
  • ಬಂದಾರು ಗ್ರಾಮದ ಕಾಪಿನಬಾಗಿಲು ಎಸ್.ಟಿ  ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ರೂ.
  • ಬಂದಾರು ಗ್ರಾಮದ ಪೆರ್ಲ ಬೈಪಾಡಿ ಸರಕಾರಿ ಪ್ರೌಢ ಶಾಲೆ  ಅಭಿವೃದ್ಧಿಗೆ 10 ಲಕ್ಷ ರೂ.
  • ಬಂದಾರು ಗ್ರಾಮದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನ ನಿರ್ಮಾಣಕ್ಕೆ 1 ಲಕ್ಷ ರೂ.

ಬೈಪಾಡಿ; ಕರ್ನಾಟಕ ರಾಜ್ಯದಲ್ಲಿ ನುಡಿದಂತೆ ನಡೆದ ಸರಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಕಳೆದ ಚುನಾವಣೆಯ ಸಂದರ್ಭ ಪ್ರಣಾಳಿಕೆ ಮೂಲಕ ಜನತೆಗೆ ಭರವಸೆ ನೀಡಿದ್ದ ಎಲ್ಲಾ 165 ಅಂಶಗಳನ್ನೂ ಪೂರೈಸಿದ ಈ ಸರಕಾರ ಆ ಮೂಲಕ ಮತದಾರರ ವಿಶ್ವಾಸ ಉಳಿಸಿಕೊಂಡಿದೆ. ಇದರ ಅನುಭವ ಮತ್ತು ಪರಿಣಾಮ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರತಿಬಿಂಭಿತವಾಗಲಿದೆ ಎಂದು ಶಾಸಕ ವಸಂತ ಬಂಗೇರ ವಿಶ್ವಾಸ ವ್ಯಕ್ತಪಡಿಸಿದರು.
ಬಂದಾರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕರು ಬಳಿಕ ಬೈಪಾಡಿ ಎಂಬಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಜನತೆಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬಂದಾರು ಗ್ರಾಮದಲ್ಲಿ 2 ಡಾಂಬರು ರಸ್ತೆ, ಒಂದು ಕಾಂಕ್ರೀಟ್ ರಸ್ತೆ, ಕಾಡಂಡ ಎಂಬಲ್ಲಿ ಒಂದು ಸೇತುವೆ, ದಡ್ಡು ಮತ್ತು ಕೊಲುಪಲ್ಕೆ ಎಂಬಲ್ಲಿ 2 ಸೇತುವೆಗಳು, ಸರಕಾರಿ ಶಾಲಾ ಅಭಿವೃದ್ಧಿ ಕಾಮಗಾರಿ ಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿಯ ಸಭಾಭನಕ್ಕೆ ಮೀಸಲಿರಿಸಿದ ಅನುದಾನವನ್ನೂ ಅವರು ಪ್ರಕಟಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂದಾರು ಗ್ರಾ. ಪಂ ಅಧ್ಯಕ್ಷ ಉದಯ ಕುಮಾರ್ ಬಿ.ಕೆ ವಹಿಸಿದ್ದರು.
ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್, ತಾ.ಪಂ ಸದಸ್ಯರಾದ ಕೇಶವತಿ, ಪ್ರವೀಣ್ ಗೌಡ, ಕೃಷ್ಣಯ್ಯ ಆಚಾರ್ಯ, ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಪಿಎಲ್‌ಡಿ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ, ತಾ.ಪಂ ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ ಬೋಲೋಡಿ, ಇಳಂತಿಲ ಗ್ರಾ.ಪಂ ಅಧ್ಯಕ್ಷ ಇಸುಬು, ಗ್ರಾ.ಪಂ ಸದಸ್ಯರಾದ ರಮೇಶ್ ಪೂಜಾರಿ ಅಡೆಂಕಿರಿಮಜಲು, ಲಲಿತಾ ಉಮೇಶ್ ಗೌಡ ಬದ್ಯಾರು, ದಿನೇಶ್ ಗೌಡ ಖಂಡಿಗ, ಸಡಕ್ ಇಂಜಿನಿಯರ್ ಉದಯ ಭಟ್, ಜಿ.ಪಂ ಕಾರ್ಯಪಾಲಕ ಅಭಿಯಂತರ ಸಿ. ಆರ್ ನರೇಂದ್ರ, ಸಹಾಯಕ ಇಂಜಿನಿಯರ್ ಸುಜಿತ್ ಕುಮಾರ್, ಸುಬ್ರಹ್ಮಣ್ಯ ಭಟ್ ಉಳಿಯ, ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್, ಪ್ರಮುಖರಾದ ದೇಜಪ್ಪ ಗೌಡ ಕೊಂಕನೊಟ್ಟು, ರವೀಂದ್ರ ಪೂಜಾರಿ, ಚನನ ಗೌಡ ಬೈಪಾಡಿ, ಶಿವಪ್ಪ ಗೌಡ, ಪೂವಪ್ಪ ಗೌಡ, ಸಂತೋಷ್ ಬಲಿಪೆ, ದಿನೇಶ್ ಕಿಲಾರು, ಮಹೇಶ್ ಬೋಲೋಡಿ, ಜನಾರ್ದನ ನಿರ್ಬುಂಡ, ಶ್ರೀಪತಿ ಭಟ್ ಕುರಾಯ, ಧರ್ಣಪ್ಪ ನಾವುಳೆ, ಶ್ರೀನಿವಾಸ ಗೌಡ ಕುಂಟಾಲಪಲ್ಕೆ, ಮುತ್ತಪ್ಪ ಗೌಡ ಹಾಡ್ಯಾರು, ಚಂದಪ್ಪ ಗೌಡ ಬೈಪಾಡಿ, ಉದಯ ಗೌಡ ಬೈಪಾಡಿ, ದಾಮೋಧರ ಗೌಡ, ಸದಾನಂದ ಗೌಡ ಕೊಂಕನೊಟ್ಟು, ಉಮೇಶ್ ಗೌಡ ಕಜೆ, ವಸಂತ ನಾಯ್ಕ ಕಾಪಿನಬಾಗಿಲು, ರಾಮಣ್ಣ ನಾಯ್ಕ ಕಾಪಿನಬಾಗಿಲು, ತಾ.ಪಂ ಮಾಜಿ ಸದಸ್ಯ ಮಹಾಬಲ ಗೌಡ ನಾಗಂದೋಡಿ, ಸಂತೋಷ್ ಬಲಿಪೆ, ಸುರೇಶ್ ಗೌಡ ಕಜೆ, ನಾರಾಯಣ ಗೌಡ ಪಯ್ಯೋಡಿ, ಕೊರಗಪ್ಪ ನಲಿಕೆ, ಶೀನಪ್ಪ ನಲಿಕೆ, ರಾಮಣ್ಣ ಟೈಲರ್ ಬೈಪಾಡಿ, ವಿಶ್ವನಾಥ ಗೌಡ ಬನದಮಜಲು, ಶ್ಯಾಮಲಾ ಪಯ್ಯೋಡಿ, ಪೆರ್ಲ ಬೈಪಾಡಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಉಮೇಶ್ ಎಸ್.ಕೆ, ನವೀನ್ ರೈ, ಉಮಾವತಿ ದೇಜಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು. ಬಂದಾರು ಗ್ರಾ.ಪಂ ಸದಸ್ಯರೂ ಆಗಿರುವ ತಾ. ಪಂ ಕೆಡಿಪಿ ನಾಮನಿರ್ದೇಶಿತ ಸದಸ್ಯ ಹರೀಶ್ ಗೌಡ ಬಂದಾರು ಪ್ರಸ್ತಾವನೆಗೈದು ಸ್ವಾಗತಿಸಿದರು. ಶಂಕರ ಭಟ್ ಬಜಿಲ ಪೂಜಾರಿ ಧಾರ್ಮಿಕ ವಿಧಿ ನೆರವೇರಿಸಿದರು. ತನ್ಸೀಫ್ ಕಿಲ್ಲೂರು, ಸತೀಶ್ ಬಾಲಂಪಾಡಿ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಪೂಜಾರಿ ಬೋಲೋಡಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.