ಚಾರ್ಮಾಡಿಯ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ರೂ.1.03 ಕೋಟಿ ಅನುದಾನ : ಬಂಗೇರ

ಕಕ್ಕಿಂಜೆ: ದ.ಕ. ಜಿಲ್ಲಾ ಪಂಚಾಯತು ಮಂಗಳೂರು, ತಾಲೂಕು ಪಂಚಾಯತು ಬೆಳ್ತಂಗಡಿ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಚಾರ್ಮಾಡಿಯ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವು ಡಿ.14ರಂದು ಕಕ್ಕಿಂಜೆಯಲ್ಲಿರುವ ಚಾರ್ಮಾಡಿ ಗ್ರಾಮ ಪಂಚಾಯತು ಕಟ್ಟಡದಲ್ಲಿ ಆರಂಭಗೊಂಡಿತು.
ನೂತನ ಆಸ್ಪತ್ರೆಯನ್ನು ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಕೆ. ವಸಂತ ಬಂಗೇರ ಉದ್ಘಾಟಿಸಿ ಮಾತನಾಡಿ, ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಗೆ ಆರೋಗ್ಯ ಕೇಂದ್ರ ಮಂಜೂರಾಗಿ 10 ವರ್ಷಗಳು ಕಳೆಯಿತು. ಇದನ್ನು ಕೆಲವರು ಚಾರ್ಮಾಡಿಯಲ್ಲಿ ಆರಂಭಿಸಿ ಎಂದರೆ ಇನ್ನೂ ಕೆಲವರು ಚಿಬಿದ್ರೆ, ಮತ್ತೆ ಕೆಲವರು ತೋಟತ್ತಾಡಿಯಲ್ಲಿ ಆರಂಭಿಸಿ ಎಂದು ಒತ್ತಾಯ ಮಾಡಿದರು. ಚಾರ್ಮಾಡಿ ಗ್ರಾಮಸ್ಥರು ರೂ.1 ಲಕ್ಷ ವಂತಿಗೆ ಹಣವನ್ನು ಸಹ ಕಟ್ಟಿದ್ದರು. ಇದೀಗ ಚಾರ್ಮಾಡಿ ಗ್ರಾ.ಪಂ. ಹಳೇ ಕಟ್ಟಡದಲ್ಲಿ ಕೇಂದ್ರವನ್ನು ಆರಂಭಿಸಲಾಗಿದೆ. ಈ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಈಗಾಗಲೇ ಸರಕಾರ ರೂ.1.30 ಕೋಟಿ ಅನುದಾನ ಮಂಜೂರುಗೊಳಿಸಿದ್ದು, ಕಾಮಗಾರಿ ನಡೆಯುತ್ತಿದೆ ಎಂದರು. ಬೆಳ್ತಂಗಡಿ ಸಮುದಾಯ ಆರೋಗ್ಯಕೇಂದ್ರದಲ್ಲಿ ಡಯಾಲೀಸಿಸ್ ವ್ಯವಸ್ಥೆ ಈಗಾಗಲೇ ಆರಂಭಗೊಂಡಿದೆ. ಸರಕಾರದಿಂದ ಎರಡು ಹಾಗೂ ಕೊಡುಗೆಯಾಗಿ ಎರಡು ಸೇರಿದಂತೆ ಒಟ್ಟು 4 ಮೆಶೀನ್‌ಗಳು ಇಲ್ಲಿ ಆರಂಭಗೊಳ್ಳಲಿದ್ದು, ಇನ್ನು ಮುಂದೆ ಡಯಾಲೀಸಿಸ್ ಅಗತ್ಯ ಇರುವವರು ಮಂಗಳೂರು, ಪುತ್ತೂರಿಗೆ ಹೋಗದೆ ಇಲ್ಲೇ ಉಚಿತವಾಗಿ ಸೌಲಭ್ಯ ಪಡೆದು ಕೊಳ್ಳಬೇಕು ಎಂದು ಶಾಸಕರು ತಿಳಿಸಿ ದರು. ಮುಖ್ಯ ಅತಿಥಿ ದ.ಕ. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್‌ಹಮೀದ್ ಮಾತನಾಡಿ, ರಾಜ್ಯ ಸರಕಾರ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ, ಶಿಕ್ಷಣ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ನೀಡುತ್ತಿದ್ದು, ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳುವಂತೆ ಕರೆ ನೀಡಿದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ. ಸದಸ್ಯೆ ನಮಿತಾ ಕೆ. ಪೂಜಾರಿ, ತಾ.ಪಂ. ಸದಸ್ಯ ಕೊರಗಪ್ಪ ಗೌಡ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಗ್ರಾ.ಪಂ. ಉಪಾಧ್ಯಕ್ಷೆ ರೇವತಿ, ತಾ.ಪಂ. ಕಾರ್ಯನಿರ್ವಾ ಹಣಾಧಿಕಾರಿ ಬಸವರಾಜ್ ಕೆ. ಅಯ್ಯಣನವರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಎಂ. ಶೈಲಜಾ ವಹಿಸಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ. ರಾಮಕೃಷ್ಣ ರಾವ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಅನುಷ್ಠಾನ ಸಮಿತಿ ಅಧ್ಯಕ್ಷ ಅನಂತರಾಮ ರಾವ್, ಗೌರವಾಧ್ಯಕ್ಷ ಹಸನಬ್ಬ ಚಾರ್ಮಾಡಿ, ಲೋಕೋಪಯೋಗಿ ಇಲಾಖೆ ಸ.ಕಾ. ಇಂಜಿನಿಯರ್ ಶಿವಪ್ರಸಾದ ಅಜಿಲ, ತ್ರಿನೇತ್ರ ಪ್ರೊಜೆಕ್ಟ್‌ನ ಅಮೃತೇಶ್, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ, ಗ್ರಾ.ಪಂ. ಸದಸ್ಯರು, ಊರಿನ ನಾಗರಿಕರು ಉಪಸ್ಥಿತರಿದ್ದರು. ಅಶ್ವಿನಿ ಇವರ ಪ್ರಾರ್ಥನೆ ಬಳಿಕ ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಸ್ವಾಗತಿಸಿದರು. ಪಿಡಿಒ ಪ್ರಕಾಶ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿ, ಡಾ| ಅಜೇಯ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.