ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಬಿ ಅಶ್ರಫ್ ನೆರಿಯ ನೇಮಕ

Advt_NewsUnder_1
Advt_NewsUnder_1

Ashraf Neriyaಬೆಳ್ತಂಗಡಿ: ಭಾರತ ರಾಷ್ಟ್ರೀಯ ಕಾಂಗ್ರೆಸ್ ಬೆಳ್ತಂಗಡಿ ನಗರ ಬ್ಲಾಕ್ ಅಲ್ಪಸಂಖ್ಯಾತರ ಸಮಿತಿ ಇದರ ನೂತನ ಅಧ್ಯಕ್ಷರಾಗಿ ನೆರಿಯ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ. ಅಶ್ರಫ್ ನೆರಿಯ ಅವರನ್ನು ನೇಮಕಗೊಳಿಸಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಜಿ ಎನ್.ಎಸ್. ಕರೀಂ ಆದೇಶ ನೀಡಿದ್ದಾರೆ.
ಶಾಸಕ ಕೆ. ವಸಂತ ಬಂಗೇರ ಅವರ ಆದೇಶದಂತೆ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ ಮತ್ತು ಗ್ರಾಮೀಣ ಘಟಕದ ಅಧ್ಯಕ್ಷ ಎನ್ ಶ್ರೀನಿವಾಸ ವಿ. ಕಿಣಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಇವರ ಶಿಫಾರಸ್ಸುಗೊಳಿಸಿ, ಹಾಗೂ ಪಕ್ಷಕ್ಕಾಗಿ ಸಕ್ರೀಯವಾಗಿ ದುಡಿಯುತ್ತಾ, ತಾ.ಪಂ. ಮತ್ತು ಜಿ.ಪಂ. ಚುನಾವಣೆ, ಎಪಿಎಂಸಿ ಸಹಿತ ಇತರ ಚುನಾವಣೆಗಳಲ್ಲಿ ಹಾಗೂ ಉಜಿರೆ ಜಿ.ಪಂ. ಕ್ಷೇತ್ರ ಸಹಿತ ತಾಲೂಕಿನಾದ್ಯಂತ ಪಕ್ಷ ವಹಿಸುವ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅರ್ಹತೆಯ ಮೇರೆಗೆ ಅವರನ್ನು ಘಟಕದ ಜಿಲ್ಲಾಧ್ಯಕ್ಷರು ಈ ಸ್ಥಾನಕ್ಕೆ ನೇಮಕಗೊಳಿಸಿ ಆದೇಶ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಸಕ್ರೀಯ ಸಂಘಟಕರಾಗಿರುವ ಬಿ. ಅಶ್ರಫ್ ಅವರು ಬೆಳ್ತಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಪ್ರ. ಕಾರ್ಯದರ್ಶಿಯಾಗಿ, ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಪ್ರ. ಕಾರ್ಯದರ್ಶಿಯಾಗಿ, ಕಾಂಗ್ರೆಸ್ ಪಕ್ಷದ ನೆರಿಯ ಗ್ರಾಮ ಸಮಿತಿ ಅಧ್ಯಕ್ಷರಾಗಿ, ಮೂರನೇ ಬಾರಿಗೆ ನೆರಿಯ ಗ್ರಾ.ಪಂ ಸದಸ್ಯರಾಗಿ, ಅದರಲ್ಲಿ ಒಂದು ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ.
ಜೊತೆಗೆ ನೆರಿಯ ಗ್ರಾಮದ ಬಯಲು ಸರಕಾರಿ ಪ್ರಾಥಮಿಕ ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ನೆರಿಯ ಗ್ರಾಹಕರ ಸಂಘದ ನಿರ್ದೇಶಕರಾಗಿ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.