ಬೆಳ್ತಂಗಡಿ: ಬೆಳ್ತಂಗಡಿ ಲಯನ್ಸ್ ಕ್ಲಬ್ನ ಸೇವಾ ಹಿರಿಮೆಯನ್ನು ಪರಿಗಣಿಸಿ ಲಯನ್ಸ್ ರಾಜ್ಯಪಾಲರಾದ ಲ.ಹೆಚ್.ಆರ್.ಹರೀಶ್ ರವರು ಅವರ ಜಿಲ್ಲಾ ಸಂಪುಟಕ್ಕೆ ಅಧಿಕೃತವಾಗಿ ಬೆಳ್ತಂಗಡಿ ಲಯನ್ಸ್ ಸಂಸ್ಥೆಯ ಐವರು ಹಿರಿಯ ಸದಸ್ಯರನ್ನು ಆಯ್ಕೆಗೊಳಿಸಿರುತ್ತಾರೆ.
ಲ.ನಿತ್ಯಾನಂದ ನಾವರರವರಿಗೆ ಪ್ರಾಂತ್ಯ 10ರ ವ್ಯಾಪ್ತಿಗೊಳಪಟ್ಟ ಬೆಳ್ತಂಗಡಿ, ಅಳದಂಗಡಿ, ನಾರಾವಿ, ವೇಣೂರು, ತೋಡಾರು ಮಿಜಾರು, ಮೂಡಬಿದ್ರೆ, ಆಲಂಗಾರು, ಶಿರ್ತಾಡಿ ಕ್ಲಬ್ಗಳ ಜವಾಬ್ದಾರಿಯನ್ನು ನೀಡಿ ಪ್ರಾಂತ್ಯಾಧ್ಯಕ್ಷರಾಗಿ ಆಯ್ಕೆಗೊಳಿಸಿರುತ್ತಾರೆ. ಅದೇ ರೀತಿ ಮಾಜಿ ಪ್ರಾಂತ್ಯಾಧ್ಯಕ್ಷರಾದ ಲ.ಪ್ರಕಾಶ್ ಶೆಟ್ಟಿ ನೊಚ್ಚರವರನ್ನು ತನ್ನ ಸಂಪುಟದ ರಸ್ತೆ ಸುರಕ್ಷತಾ ವಿಭಾಗದ ಸಂಯೋಜಕರಾಗಿ ಮತ್ತು ಬೆಳ್ತಂಗಡಿ ಲಯನ್ಸ್ ಕ್ಲಬ್ನ ಸ್ಥಾಪಕ ಸದಸ್ಯರಾದ ಲ.ವಿ.ಆರ್.ನಾಯಕ್ರವರಿಗೆ ಸಂಪುಟದ ಜೀವನ ಕಲೆ ವಿಭಾಗದ ಜಿಲ್ಲಾ ಸಂಯೋಜಕರಾಗಿ ಹಾಗೂ ಲ.ಹೆಚ್.ರಾಮಕೃಷ್ಣ ಗೌಡರವರನ್ನು ತುಳುನಾಡ ವೈಭವ ವಿಭಾಗದ ಜಿಲ್ಲಾ ಸಂಯೋಜಕರಾಗಿ, ಅದೇ ರೀತಿ ಲ.ರಾಜು ಶೆಟ್ಟಿಯವರನ್ನು ಜಿಎಸ್ಟಿ ವಿಭಾಗದ ಸದಸ್ಯರಾಗಿ ಆಯ್ಕೆಗೊಳಿಸಿರುತ್ತಾರೆ. ಇದು ಬೆಳ್ತಂಗಡಿ ಕ್ಲಬ್ಗೆ ನೀಡಿರುವ ವಿಶೇಷ ಗೌರವದ ಸ್ಥಾನವಾಗಿದೆ ಎಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಧರಣೇಂದ್ರ ಕೆ. ಜೈನ್ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.