ಪಂಚಾಯತ್‌ನ ಆಡಳಿತ ಮನೆಯ ಆಡಳಿತದಂತೆ ನಡೆಸಿಕೊಂಡು ಹೋಗೋಣ: ಕೋಟ ಶ್ರೀನಿವಾಸ ಪೂಜಾರಿ

Madanthyar savlabhyaಮಡಂತ್ಯಾರು: ಗ್ರಾಮ ಪಂಚಾಯತನ್ನು ನಮ್ಮ ಮನೆಯಮಾದರಿಯಲ್ಲಿ ನಡೆಸಿಕೊಂಡು ಹೋಗಬೇಕಾಗಿದೆ. ಮನೆಯ ಯಜಮಾನನಿಗೆ ಆದಾಯವಿರುವಷ್ಟಕ್ಕೆ ಸರಿದೂಗಿಸಿಕೊಂಡು ಜೀವನ ನಡೆಸಲು ಕ್ರಿಯಾಯೋಜನೆ, ಕಾರ್ಯಚಟುವಟಿಕೆ ಹಮ್ಮಿಕೊಳ್ಳುವಂತೆ ಪಂಚಾಯತ್‌ಗೂ ಕೂಡ ಸರಕಾರ ನೀಡುವ ಅನುದಾನಕ್ಕೆ ಪೂರಕವಾಗಿ ಆಡಳಿತ ರೂಪಿಸಿಕೊಂಡು ಹೋಗಬೇಕಾದ ಹೊಣೆಗಾರಿಕೆ ಜನಪ್ರತಿನಿಧಿ ಮತ್ತು ಆಡಳಿತಕ್ಕಿದೆ. ಜನತೆಗೆ ಪಂಚಾಯತ್ ಸದಸ್ಯರ ಬಗ್ಗೆ ಹೆಚ್ಚಿನ ನಿರೀಕ್ಷೆ ಇರುವುದರಿಂದಾಗಿ ನಿರಾಶೆಗಳು ಎದುರಾಗಿ ಟೀಕೆಗಳನ್ನು ಎದುರಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಡಂತ್ಯಾರು ಗ್ರಾಮ ಪಂಚಾಯತ್ ವತಿಯಿಂದ ಆ. 5 ರಂದು ನಡೆದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಸಂಸ್ಥೆಗಳಿಗೆ ಅಭಿನಂದನೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ವಿವಿಧ ಸೌವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಂಚಾಯತ್‌ಗಳು ಸೀಮಿತ ಅನುದಾನದಲ್ಲಿ ಹೆಚ್ಚಿನ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ತಾ.ಪಂ, ಜಿ.ಪಂ, ಶಾಸಕರು, ಸಂಸದರು ಎಂಬುದಾಗಿ ಮೇಲ್ಘಟಕದ ಜನಪ್ರತಿನಿಧಿಗಳ ಸಹಾಯ ಪಡೆದು ಅನುದಾನ ತರಿಸಿಕೊಂಡು ಕಾಮಗಾರಿ ಅನುಷ್ಟಾನಿಸಬೇಕಾಗಿದೆ. ಪಂಚಾಯತ್‌ಗಳಲ್ಲಿ ಅಭಿವೃದ್ದಿ ಎಂದರೆ ಅದು ನಿರಂತರ ಪ್ರಕ್ರೀಯೆ ಎಂದರು.
ಮೀಸಲಾತಿಯಿಂದ ಕಟ್ಟಕಡೇಯ ವ್ಯಕ್ತಿಗೂ ಅಧಿಕಾರ: ಹಿಂದೆ ಮೀನು ವ್ಯಾಪಾರಿಯ ಮಗ ಮೀನು ವ್ಯಾಪಾರ ಮಾಡುತ್ತಿದ್ದ, ಮೂರ್ತೆದಾರನ ಮಗ ಮೂರ್ತೆದಾರನೇ ಆಗುತ್ತಿದ್ದ. ಆದರೆ ಇಂದು ಸ್ಥಿತಿ ಬದಲಾಗಿದ್ದು, ಶಿಕ್ಷಣದ ಮೂಲಕ
ಎಲ್ಲರೂ ಸ್ವಾವಲಂಬನೆ ಮತ್ತು ಮೆರಿಟ್ ಆಧರಿತವಾಗಿ ವಿವಿಧ ಸರಕಾರಿ ಹುದ್ದೆಗಳತ್ತ ಹೋಗುತ್ತಿದ್ದಾರೆ, ಮೀಸಲಾತಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಕೂಡ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದೆ. ನಮ್ಮ ಗ್ರಾ.ಪಂ ಅಧ್ಯಕ್ಷೆಯೊಬ್ಬರು ಮಹಿಳೆ ಎಂದಾದರೆ ಅವರಿಗೆ ನಮ್ಮ ಅನುಭವಗಳನ್ನು ಕೊಟ್ಟು, ಉತ್ತೇಜನ ನೀಡಬೇಕಾದುದು ನಮ್ಮ ಕರ್ತವ್ಯ ಎಂದರು. ಮಡಂತ್ಯಾರು ಪಂಚಾಯತ್ ಉತ್ತಮ ಆಡಳಿತ ಕಚೇರಿ ಹೊಂದಿದ್ದು ಮಾದರಿಯಾಗಿ ಬೆಳೆದಿದೆ. ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇತರ ಪಂಚಾಯತ್‌ಗೆ ಮಾದರಿಯಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ,ಪಂ ಅಧ್ಯಕ್ಷ ಗೋಪಾಲಕೃಷ್ಣ ವಹಿಸಿದ್ದರು. ಉಪಾಧ್ಯಕ್ಷೆ ಜಯಂತಿ ಸಹಿತ ಸದಸ್ಯರುಗಳು ಉಪಸ್ಥಿತರಿದ್ದರು. ಜಿ.ಪಂ ಉಪಾಧ್ಯಕ್ಷ ಕಸ್ತೂರಿ ಪಂಜ, ಕುವೆಟ್ಟು ಜಿ. ಪಂ ಸದಸ್ಯೆ ಮಮತಾ ಎಂ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಅಭಿವೃದ್ಧಿ ಅಧಿಕಾರಿ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಮಡಂತ್ಯಾರು ಗ್ರಾ.ಪಂ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸೈಕಲ್ ವಿತರಣೆ, ಸೋಲಾರ್ ದೀಪ ವಿತರಣೆ, ನೀರಿನ ಟ್ಯಾಂಕ್ ವಿತರಣೆ ಇತ್ಯಾದಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.