ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಕಳೆದ ೭ ವರ್ಷಗಳಿಂದ ಧರ್ಮಗುರುಗಳಾಗಿ ಕರ್ತವ್ಯ ನಿರ್ವಹಿಸಿ ಬಂಟ್ವಾಳ ತಾಲೂಕಿನ ಅಮ್ಮೆಂಬಳ ಚರ್ಚ್ಗೆ ವರ್ಗಾವಣೆಗೊಳ್ಳಲಿರುವ ವಂ| ಲಾರೆನ್ಸ್ ಮಸ್ಕರೇನ್ಹಸ್ರವರನ್ನು ಜೂ. 4ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಬೀಳ್ಕೊಡಲಾಯಿತು.
ವಂ| ಲಾರೆನ್ಸ್ ಮಸ್ಕರೇನ್ಹಸ್ 2010ರಲ್ಲಿ ಮಡಂತ್ಯಾರು ಚರ್ಚ್ಗೆ ಧರ್ಮಗುರುಗಳಾಗಿ ಆಗಮಿಸಿ ಅಭಿವೃದ್ಧಿ ಕಾರ್ಯಕ್ಕೆ ಚಿಂತನೆ ನಡೆಸಿದ್ದರು. ಅದೇ ರೀತಿ 7 ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಿದ್ದು, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ತಂದಿದ್ದಾರೆ.
ನೂತನ ಧರ್ಮಗುರುಗಳಾಗಿ ಆಗಮಿಸಿದ ವಂ| ಬಾಸಿಲ್ ವಾಸ್, ಸಹಾಯಕ ಧರ್ಮಗುರುಗಳಾದ ವಂ| ಆಲ್ವಿನ್ ಡಿಸೋಜ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾ| ಜೆರೋಂ ಡಿಸೋಜಾ, ಮಡಂತ್ಯಾರು ಚರ್ಚ್ನಲ್ಲಿ ಸೇವೆ ಸಲ್ಲಿಸಿದ್ದ ಸಹಾಯಕ ಧರ್ಮಗುರು ರೋಹಿತ್ ಡಿಕೋಸ್ತ, ವಂ| ಕ್ಲಿಫರ್ಡ್ ಪಿಂಟೊ, ವಂ| ಪ್ರವೀನ್ ಡಿಸೋಜಾ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ರೊನಾಲ್ಡ್ ಸಿಕ್ವೇರಾ, ಕಾರ್ಯದರ್ಶಿ ಲಿಯೋ ರೊಡ್ರಿಗಸ್, ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಅರುಣ್ ಫುರ್ಟಾಡೋ ಮೊದಲಾದವರು ಉಪಸ್ಥಿತರಿದ್ದರು. ಕೆಥೋಲಿಕ ಸಭಾ ಮಡಂತ್ಯಾರು, ಸೈಂಟ್ ವಿನ್ಸೆಂಟ್ ಡಿಪೌಲ್ ಸೊಸೈಟಿ, ಅರ್ಸುಲೈನ್ ಕಾನ್ವೆಂಟ್, ಮರಿಯಾ ಕೃಪಾ ಕಾನ್ವೆಂಟ್, ಐಸಿವೈಎಂ, ವೈಸಿಎಸ್, ವೇದಿ ಸೇವಕರು,
ಸೇಕ್ರೆಡ್ ಹಾರ್ಟ್ ಆಂಗ್ಲಮಾಧ್ಯಮ ಶಾಲೆ, ಸೇಕ್ರೆಡ್ ಹಾರ್ಟ್ ಗಾರ್ಡಿಯಾನ್ ಏಂಜಲ್ಸ್ ಶಾಲೆ, ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು, ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ನಡೆಯಿತು.
ಪ್ರೋ| ಲಿಯೋ ನೊರೊನ್ಹಾ ಮತ್ತು ಮೋಹನ್ ನಾಯಕ್ ಪ್ರಸ್ತಾವನೆಗೈದರು. ರೊನಾಲ್ಡ್ ಸಿಕ್ವೇರಾ ಸ್ವಾಗತಿಸಿದರು. ಲಿಯೋ ರೊಡ್ರಿಗಸ್ ವಂದಿಸಿದರು. ವಿವೇಕ್ ವಿ. ಪಾಸ್ ಕಾರ್ಯಕ್ರಮ ನಿರೂಪಿಸಿದರು.