HomePage_Banner_
HomePage_Banner_

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ 2017ರ ಅತ್ಯುತ್ತಮ ಘಟಕ ಪ್ರಶಸ್ತಿ

jci belthangady athyuthama gataka prasasthiಬೆಳ್ತಂಗಡಿ : ಜೆಸಿಐ ವಿಟ್ಲ ಇದರ ಅತಿಥ್ಯದಲ್ಲಿ ಮೇ-28ರಂದು ನಡೆದ ದ.ಕ, ಉಡುಪಿ, ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ 15ರ ಜೆಸಿಐನ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ 2017ರ ಅತ್ಯುತ್ತಮ ಘಟಕದ ಪ್ರಶಸ್ತಿಯೊಂದಿಗೆ ವಿವಿಧ ಹತ್ತು-ಹಲವಾರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ವಲಯದಲ್ಲಿಯೇ ಪ್ರತಿಷ್ಠಿತ ಘಟಕದಲ್ಲೊಂದಾದ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು 2016-17 ನೇ ಸಾಲಿನಲ್ಲಿ ನಿರಂತರವಾಗಿ ಹಲವು ಸಮಾಜಮುಖಿ ಕೆಲಸಕಾರ್ಯಗಳನ್ನು ಮಾಡುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿಯನ್ನು ಈ ವರ್ಷದ ಬೆಳ್ತಂಗಡಿ ಜೆಸಿಐಯ ಯಶಸ್ವಿ ಅಧ್ಯಕ್ಷ ಸಂತೋಷ ಪಿ.ಕೋಟ್ಯಾನ್ ಬಳಂಜರವರು ವಲಯಧ್ಯಕ್ಷ ಸಂತೋಷ್.ಜಿ ಯವರಿಂದ ಪಡೆದುಕೊಂಡರು.
ರಾಷ್ಟ್ರೀಯ ಬಾವೈಕ್ಯತೆ ದಿನಾಚರಣೆಯ ಸಂದರ್ಭ ತಾಲೂಕಿನಾದ್ಯಂತ ಸುಮಾರು 35 ಶಾಲಾ ಕಾಲೇಜುಗಳಲ್ಲಿ 16,850 ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋದಿಸಿರುವುದು ಜೆಸಿ ವಲಯದಲ್ಲಿಯೇ ದಾಖಲೆ ಮಾಡಿದ ಕೀರ್ತಿಗೆ ಬಾಜನವಾಯಿತು. ಅಲ್ಲದೆ ಒಂದು ವಾರಗಳ ಕಾಲ ಅಕ್ಯೂಪ್ರೆಶರ್ ಮತ್ತು ಸುಜೋಥೋ ತೆರಪಿ ಕ್ಯಾಂಪ್, ರೋಗಿಗಳಿಗೆ ಹಣ್ಣುಹಂಪಲು ವಿತರಣೆ, ವಲಯದ ಪ್ರತಿಷ್ಟಿತ ಕಾರ್ಯಕ್ರಮ ಗಳೊಂದಾದ ರಾಷ್ಟ್ರಧ್ಯಕ್ಷರ ಬೇಟಿ ಕಾರ್ಯಕ್ರಮ, ರಕ್ತದಾನ ಶಿಬಿರ, ವೃದ್ದಾಶ್ರಮಕ್ಕೆ ತೆರಳಿ ದವಸಧಾನ್ಯ, ಅಕ್ಕಿ, ಬೆಳೆ, ಕಾಳು ವಿತರಣೆ, ಗಾಂಧಿಜಯಂತಿ ಆಚರಣೆ, ವೈದ್ಯಕೀಯ ಶಿಬಿರ, ಮಕ್ಕಳ ಬೇಸಿಗೆ ಶಿಬಿರ, ಮಹಿಳಾ ದಿನಾಚರಣೆ, ಉದ್ಯಮಶೀಲತಾ ತಿಳುವಳಿಕೆ ಮಾಹಿತಿ ಶಿಬಿರ, ಕುಟುಂಬೋತ್ಸವ, ತರಬೇತಿ ಕಾರ್ಯಗಾರ, ವಲಯದ ಕಾರ್ಯಕ್ರಮಗಳು, ಕಡಲೋತ್ಸವದಲ್ಲಿ ಭಾಗವಹಿಸುವಿಕೆ, ಎಲ್.ಡಿ.ಎಂ.ಟಿ ತರಬೇತಿ ಕಾರ್ಯಕ್ರಮ, ಮಹಿಳಾ ಸಾಧಕರಿಗೆ ಪಂಚರತ್ನ ಪುರಸ್ಕಾರ ಕಾರ್ಯಕ್ರಮ, ರಂಗ ಸಂಭ್ರಮ ಮಕ್ಕಳ ಬೇಸಿಗೆ ಶಿಬಿರ, ಡಾನ್ಸ್ ತರಬೇತಿ ಕಾರ್ಯಕ್ರಮ, ಚಿಣ್ಣರ ಯೋಗತ್ಸೋವ ಕಾರ್ಯಕ್ರಮ, ಹೊಸವರ್ಷವನ್ನು ವೃದ್ಧಾಶ್ರಮದಲ್ಲಿ ವಿಶಿಷ್ಠವಾಗಿ ಆಚರಣೆ, ಚಿಣ್ಣರ ಚಿಲುಮೆ ಶೈಕ್ಷಣಿಕ ಶಿಬಿರ, ಹೀಗೆ ಹಲವು ಕಾರ್ಯ ಕ್ರಮಗಳಿಗೆ ಪ್ರಶಸ್ತಿಯ ಜೊತೆಗೆ ಹಲವು ವಿಶೇಷ ಮನ್ನಣೆಗೆ ಭಾಜನವಾಗಿದೆ.
ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಸಂತೋಷ್. ಜಿ, ವಲಯ ನಿಕಟಪೂರ್ವಧ್ಯಾಕ್ಷರಾದ ಸಂದೀಪ್ ಕುಮಾರ್, ವಲಯ ಉಪಾಧ್ಯಕ್ಷ ಪುರುಷೋತ್ತಮ ಶೆಟಿ, ಬೆಳ್ತಂಗಡಿ ಘಟಕಾಧ್ಯಕ್ಷ ಸಂತೋಷ್.ಪಿ.ಕೋಟ್ಯಾನ್ ಬಳಂಜ, ಮ್ಯಾನೇಜ್‌ಮೆಂಟ್ ವಿಭಾಗದ ನಿರ್ದೇಶಕ ಸತೀಶ್ ಪೂಜಾರಿ, ಕಾರ್ಯಕ್ರಮ ವಿಭಾಗದ ನಿರ್ದೇಶಕ ಅನಿಲ್ ಕುಮಾರ್, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನಿಕಟಪೂರ್ವಧ್ಯಕ್ಷ ವಲಯಾಧಿಕಾರಿ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯಾ, ಮೀಡಿಯಾ ಕವರೇಜ್ ಸಂಯೋಜಕ ರಾಘವೇಂದ್ರ ಪ್ರಭು, ವಲಯ ಕಾರ್ಯದರ್ಶಿ ಪ್ರಶಾಂತ ರೈ, ತರಬೇತಿ ವಿಭಾಗದ ನಿರ್ದೇಶಕ ಮಂದಾರ ವಿ. ವಲಯಾದ ವಲಯಾಧಿಕಾರಿಗಳು ಹಾಗೂ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಕಾರ್ಯದರ್ಶಿ ರಂಜಿತ್ ಎಚ್.ಡಿ, ಉಪಾಧ್ಯಕ್ಷರಾದ ಪ್ರಶಾಂತ್ ಲಾಯಿಲ, ಪ್ರಸಾದ್ ಬಿ.ಎಸ್ ಕಕ್ಕಿಂಜೆ, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್, ಸದಸ್ಯರಾದ ಸತೀಶ್ ಸುವರ್ಣ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.