ಫೆಲ್ಸಿ ಜ್ಯೋತಿ ಸೆರಾವೊರಿಗೆ ಪಿ.ಹೆಚ್.ಡಿ ಪದವಿ

Felcy Jyothiಮಡಂತ್ಯಾರು : ಮಡಂತ್ಯಾರಿನ ದಿ. ಬ್ಯಾಪ್ಪಿಸ್ಟ್ ಸೆರಾವೊ ಮತ್ತು ಶ್ರೀಮತಿ ಬ್ರಿಜಿತ್ ಸೆರಾವೊ ಇವರ ಪುತ್ರಿ ಫೆಲ್ಸಿ ಜ್ಯೋತಿ ಸೆರಾವೊ ಇವರು ಮಂಡಿಸಿದ ‘Study of structural, optical and electrical properties of pure and doped Zno thin film’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪದವಿ ನೀಡಿದೆ. ಇವರು ಭೌತಶಾಸ್ತ್ರ ವಿಭಾಗದ ಪ್ರೊ.ಎಸ್.ಎಮ್ ಧರ್ಮಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಸಂಸ್ಥೆಗಳಲ್ಲಿ ಪೂರೈಸಿ, ಪದವಿಯನ್ನು ಎಸ್.ಡಿ.ಎಂ ಕಾಲೇಜು ಉಜಿರೆ ಮತ್ತು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ರ್‍ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ಪಡೆದಿರುತ್ತಾರೆ. ಪ್ರಸ್ತುತ ಇವರು ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ಅಡ್ಯಾರ್ ಇಲ್ಲಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.