ಗುರುವಾಯನಕೆರೆ: ಕ್ಯಾಂಪಸ್ ಮೆನ್ಸ್‌ವೇರ್ ಶುಭಾರಂಭ

campus guruvayanakere copyಗುರುವಾಯನಕೆರೆ: ಬೆಳೆಯುತ್ತಿರುವ ಗುರುವಾಯನಕೆರೆ ನಗರಕ್ಕೆ ಇನ್ನೊಂದು ಗರಿ ಕ್ಯಾಂಪಸ್ ಮೆನ್ಸ್‌ವೇರ್ ಇದರ ಶುಭಾರಂಭವು ಮಾ.22ರಂದು ಸಪ್ತಗಿರಿ ಕಾಂಪ್ಲೇಕ್ಸ್‌ನಲ್ಲಿ ನಡೆಯಿತು.
ನೂತನ ಸಂಸ್ಥೆಯ ಉದ್ಘಾಟನೆಯನ್ನು ಬಿಜೆಪಿ ಯುವ ಮೊರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ದೀಪ ಬೆಳಗುವುದರ ಮೂಲಕ ನೇರವೇರಿಸಿ ಮಾತನಾಡಿ ಇಂದು ಎಲ್ಲಾ ರಂಗದಲ್ಲೂ, ಉದ್ಯೋಗದಲ್ಲೂ ಪೈಪೋಟಿ ನಡಿಯುತ್ತಿದೆ. ಈಗೀನ ಯುವಕರಿಗೆ ಪ್ಯಾಶನ್ ಇಷ್ಟ ಅಂತಹ ಮಾದರಿಯಲ್ಲಿ ಅವರ ಅಭಿರುಚಿಗೆ ತಕ್ಕದಾದ ವಸ್ತ್ರಮಳಿಗೆಯನ್ನು ಪ್ರಾರಂಭಿಸಿ ಉದ್ಯಮ ಕ್ಷೇತ್ರದಲ್ಲಿ ಗ್ರಾಹಕರ ಪ್ರೀತಿ-ವಿಶ್ವಾಸ ಗಳಿಸಿ ಉತ್ತಮ ಸೇವೆಯೊಂದಿಗೆ ಸಂಸ್ಥೆಯ ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಗುರುವಾಯನಕೆರೆ ವಿಜಯ ಕೋ-ಆಪರೆಟರ್ ಸೊಸೈಟಿಯ ಅಧ್ಯಕ್ಷ ಜಯರಾಮ ಶೆಟ್ಟಿ, ಸೀತಾ ಶೆಟ್ಟಿ ಕುರೆಲ್ಯ ಗುತ್ತು, ಕಾಶಿಶೆಟ್ಟಿ ನವಶಕ್ತಿ ಗುರುವಾಯನಕೆರೆ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ತಾ.ಪಂ. ಸದಸ್ಯ ಗೋಪಿನಾಥ್ ನಾಯಕ್, ಕಾಂಪ್ಲೇಕ್ಸ್ ಮಾಲಕರಾದ ರಾಮಕೃಷ್ಣ ನಾಯಕ್, ಮಾಲಕರ ಮಾತೃಶ್ರೀ ಬೇಬಿ ಶೆಟ್ಟಿ, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್, ಅಜಿತ್ ಕುಮಾರ್ ಶೆಟ್ಟಿ ಗುರುವಾಯನಕೆರೆ, ಲೋಕೇಶ್ ನ್ಯೂಸಿಟಿ, ಸುಚಿತಾರಾಜೇಶ್ ಶೆಟ್ಟಿ, ನಾಗೇಶ್ ನಿಸರ್ಗ, ಜಯಪ್ರಕಾಶ್ ಶೆಟ್ಟಿ ಉಜಿರೆ, ಮೊದಲಾದವರು ಉಪಸ್ಥಿತರಿದ್ದರು. ನೂತನ ಸಂಸ್ಥೆಯಲ್ಲಿ ಯುವಕರಿಗೆ ಬೇಕಾದ ಹೊಸ ಪ್ಯಾಶನ್ ಬಟ್ಟೆಗಳ ಸಂಗ್ರಹವಿದೆ. ಪುರುಷರ ಜರ್ಸಿ, ಕಾಟನ್ ಟಿ-ಶಾರ್ಟ್, ಹ್ಯಾಡ್ ಬಾಂಡ್ಸ್, ಕ್ಯಾಪ್ ಹಾಗೂ ಇನ್ನಿತರ ಉಡುಪು ಮತ್ತು ಪ್ಯಾಶನ್ ಆಕ್ಸಸರೀಸ್ ಪ್ರಿಂಟ್ ಮಾಡಿಕೊಡಲಾಗುವುದು. ಎಂದು ಸಂಸ್ಥೆಯ ಮಾಲಿಕ ಸಚಿನ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.