ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನ ಆಮಂತ್ರಣ ಪತ್ರಿಕೆ ಬಿಡುಗಡೆ

Pajiradka amanthrana bidugade copyಕಲ್ಮಂಜ : ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕದಲ್ಲಿ ಎ.8ರಿಂದ ಎ.10ರ ವರೆಗೆ ಪ್ರತಿಷ್ಠಾ ದಿನಾಚರಣೆ ಹಾಗೂ ವಾರ್ಷಿಕ ಜಾತ್ರೆಯು ನಡೆಯಲಿದ್ದು ಆ ಪ್ರಯುಕ್ತ ಮಾ.19ರಂದು ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಹುಣಿಪ್ಪಾಜೆ ರತನ್ ಕುಮಾರ್ ಜೈನ್‌ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಿ.ಜಿ. ಪ್ರಭಾಕರ್ ಕನ್ಯಾಡಿ ||, ಪಾಂಡುರಂಗ ಕಾಕತ್ಕರ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ತುಕಾರಾಮ ಸಾಲ್ಯಾನ್, ಅರ್ಚಕರಾದ ದಿನೇಶ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರಮೇಶ್ ಗೌಡ, ರಘುಚಂದ್ರ ಗುಡಿಗಾರ್, ಆದಪ್ಪ ಗೌಡ, ಉಮೇಶ್ ಪಿ, ಅಣ್ಣು ಮಲೆಕುಡಿಯ, ಬೈಲುವಾರು ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.