ಉಪ್ಪಿನಂಗಡಿಗೆ ಎಸ್.ಐ ನಂದಕುಮಾರ್ ರತನ್ ಅಪರಾಧ ಪತ್ತೆ ದಳಕ್ಕೆ ವರ್ಗ

ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಸಬ್ ಇನ್ಸ್‌ಪೆಕ್ಟರ್ ಆಗಿ ನಂದಕುಮಾರ್ ಅವರನ್ನು ವರ್ಗವಣೆಗೊಳಿಸಿದೆ. ನಂದಕುಮಾರ್ ಅವರು ಕಳೆದ 4 ವರ್ಷಗಳಿಂದ ಬಂಟ್ವಾಳ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಭಾರ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರತರಾಗಿರುವ ರತನ್ ಅವರನ್ನು ದ.ಕ ಜಿಲ್ಲಾ ಅಪರಾಧ ವಿಭಾಗದ ಎಸ್.ಐ ಆಗಿ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಐ ಆಗಿದ್ದ ತಿಮ್ಮಪ್ಪ ನಾಯ್ಕ ಭಡ್ತಿ ಹೊಂದಿ ತೆರಳಿದ ಬಳಿಕ ಕಳೆದ 6 ತಿಂಗಳಿನಿಂದ ಇಲ್ಲಿ ಎಸ್.ಐ. ಹುದ್ದೆ ಖಾಲಿಯಾಗಿತ್ತು. ಇಲ್ಲಿಯೇ ಎ.ಎಸ್.ಐ ಆಗಿ ಭಡ್ತಿ ಹೊಂದಿದ್ದ ರತನ್ ಪ್ರಭಾರ ಎಸ್.ಐ. ಯಾಗಿ ಕರ್ತವ್ಯ ನಿರತರಾಗಿದ್ದರು.
ಈ ಹಿನ್ನಲೆಯಲ್ಲಿ ಇಲ್ಲಿಗೆ ನಿಷ್ಠಾವಂತ ಪೊಲೀಸ್ ಅಧಿಕಾರಿಯೊಬ್ಬರನ್ನು ಖಾಯಂ ಎಸ್.ಐ ಆಗಿ ನೇಮಕ ಮಾಡಬೇಕು ಎಂದು ಜನಸಂಪರ್ಕ ಸಭೆ, ಗ್ರಾಮ ಸಭೆ, ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಅಗ್ರಹ ವ್ಯಕ್ತವಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.