ಫೆ. 9-11 ಶ್ರೀ ಬ್ರಹ್ಮ ಬೈದರ್ಕಳ ಪೇರುಮುಂಡ ಗರಡಿಯ ವರ್ಷಾವಧಿ ಜಾತ್ರೆ

  ಮೇಲಂತಬೆಟ್ಟು : ಪಾಲೆತ್ತಡಿಗುತ್ತು ಪೇರುಮುಂಡ ಗರಡಿಯ ವರ್ಷಾವಧಿ ಜಾತ್ರೆಯು ಫೆ.9 ರಿಂದ 11ರ ವರೆಗೆ ಜರುಗಲಿರುವುದು. ಫೆ.9 ರಂದು ಸಂಜೆ ಪಾಲೆತ್ತಡಿಗುತ್ತುವಿನಿಂದ ದೈವಗಳ ಭಂಡಾರ ಹೊರಡುವುದು. ಕೊಡಮಣಿತ್ತಾಯ ಮತ್ತು ಕೋಟಿ ಚೆನ್ನಯರಿಗೆ ಚೌಲೆ ಹಬ್ಬ, ರಾತ್ರಿ 10ಕ್ಕೆ ದೈವಂಕುಲ ನೇಮ, 2ಕ್ಕೆ ಕೊಡಮಣೆತ್ತಾಯ ನೇಮ ಮುಂಜಾನೆ 4ಕ್ಕೆ ಕೊಡಮಣಿತ್ತಾಯ ದೈವ ಮತ್ತು ಕೋಟಿ ಚೆನ್ನಯರ ಬೇಟಿ ಬಲಿ. ಫೆ.10 ರಂದು ರಾತ್ರಿ 9ಕ್ಕೆ ಗರಡಿಯಿಂದ ಕೋಟಿ ಚೆನ್ನಯರು ಇಳಿಯುವುದು. ರಾತ್ರಿ 2ಕ್ಕೆ ಕೊಡಮಣಿತ್ತಾಯ ಮುಕ್ಕಲ್ದಿ ಮತ್ತು ಕೋಟಿ ಚೆನ್ನಯ ಮುಕ್ಕಲ್ದಿಯರ ಬೇಟಿ ಬಲಿ. ಫೆ.11 ರಂದು ಮುಂಜಾನೆ 5ಕ್ಕೆ ಮಾಣಿಬಾಲೆ ದರ್ಶನ ಬಲಿ ಮತ್ತು ಪುರುಷರಾಯ ನೇಮ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಚಂದ್ರಪ್ರಕಾಶ್ ಪಾಲೆತ್ತಡಿಗುತ್ತು ಹಾಗೂ ಶ್ರೀಮತಿ ನಾಗಮ್ಮ ಕುಂಜಿರ ಪೂಜಾರಿ ಮತ್ತು ಮಕ್ಕಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.