ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿಯಿಂದ ಮಹಿಳೆಯರ ಬದುಕು ಹಸನಾಗಿದೆ: ಪೂಂಜ

gardady padagrahana1 copy

ಗರ್ಡಾಡಿ: ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟಗಳ ಪದಗ್ರಹಣ

ಗರ್ಡಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ಗರ್ಡಾಡಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗರ್ಡಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಗರ್ಡಾಡಿ ಪ್ರಗತಿಬಂಧು ಎ ಮತ್ತು ಬಿ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರು ಉಚ್ಛ ನ್ಯಾಯಾಲಯ ನ್ಯಾಯವಾದಿ ಹರೀಶ್ ಪೂಂಜ ಮಾತನಾಡಿ, ಧರ್ಮಸ್ಥಳ ಯೋಜನೆಯ ಕಾರ್ಯವೈಖರಿಯಿಂದ ಇಂದು ಮಹಿಳೆಯರ ಬದುಕು ಹಸನಾಗಿದೆ ಅಲ್ಲದೆ ಆರ್ಥಿಕವಾಗಿ ಸದೃಢರಾಗಿದ್ದಾರೆ. ಸಾಮಾಜಿಕವಾಗಿ ಗುರುತಿಸಿಕೊಳ್ಳುತ್ತಿರುವ ಮಹಿಳೆಯರು ಸ್ವಾಲಂಬನೆಯ ಬದುಕು ಕಂಡುಕೊಂಡಿದ್ದಾರೆ. ಪದಗ್ರಹಣ ಸಮಾರಂಭ ಇದಕ್ಕೆ ಮತ್ತಷ್ಟು ಪ್ರೇರಣೆಯಾಗಲಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್, ಕುಂಡದಬೆಟ್ಟು ಜುಮ್ಮಾ ಮಸೀದಿಯ ಧರ್ಮಗುರು ಕೆ.ಎಂ. ಹನೀಫ್ ಸಖಾಫಿ ಬಂಗೇರಕಟ್ಟೆ, ಒಕ್ಕೂಟಗಳ ವೇಣೂರು ವಲಯಧ್ಯಕ್ಷ ಅಶೋಕ್ ಕಜಿಪಟ್ಟ, ಗರ್ಡಾಡಿ ಪ್ರಗತಿ ಬಂಧು ಒಕ್ಕೂಟಗಳ ಅಧ್ಯಕ್ಷರುಗಳಾದ ಜಯರಾಮ ಶೆಟ್ಟಿ, ಉಸ್ಮಾನ್, ಆನಂದ ಶೆಟ್ಟಿ, ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.
ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಶ್ವೇತಾಶ್ರೀ ಸ್ವಸಹಾಯ ಸಂಘ ಮತ್ತು ಪಾರೊಟ್ಟು ಪ್ರಗತಿ ಬಂಧು ತಂಡವನ್ನು ಗೌರವಿಸಲಾಯಿತು. ಉತ್ತಮ ಕಾರ್ಯದಕ್ಷತೆಗಾಗಿ ಸೇವಾಪ್ರತಿನಿಧಿ ಹೇಮಲತಾ ಅವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಗರ್ಡಾಡಿ ಸೇವಾಪ್ರತಿನಿಧಿ ಹೇಮಲತಾ ವರದಿ ವಾಚಿಸಿ ಒಕ್ಕೂಟದ ಕಾರ್ಯದರ್ಶಿ ಪ್ರೇಮಾ ಸ್ವಾಗತಿಸಿ ಕೃಷ್ಣಪ್ಪ ವಂದಿಸಿದರು. ವೇಣೂರು ವಲಯ ಮೇಲ್ವಿಚಾರಕ ಶ್ರೀನಿವಾಸ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಗರ್ಡಾಡಿ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.