ಅರಂತೋಡು ತಾ.ಪಂ. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಲವರು ಬಿ.ಜೆ.ಪಿ.ಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Aranthodu Congress Karyakarthara Sabhe 1 copy
ಅರಂತೋಡು ತಾಲೂಕು ಪಂಚಾ ಯತ್ ಕ್ಷೇತ್ರದ ಸಂಪಾಜೆ, ಅರಂತೋಡು ಹಾಗೂ ತೊಡಿಕಾನ ಗ್ರಾಮದ ಕಾಂಗ್ರೆ ಸ್ ಪಕ್ಷದ ಕಾರ್ಯಕರ್ತರ ಸಭೆಯು ಅ.೨೮ರಂದು ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಜಯಪ್ರಕಾಶ್ ರೈಯವರ ಅಧ್ಯ ಕ್ಷತೆಯಲ್ಲಿ ನಡೆಯಿತು.
ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಅರಂತೋಡು ತಾಲೂಕು ಪಂಚಾಯತ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಘಟನಾ ಉಸ್ತುವಾರಿ ಮಹಮ್ಮದ್ ಕುಂಞ ಗೂನಡ್ಕರವರು ಅರಂತೋಡು ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಕಾರ್ಯ ಕರ್ತರು ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಬೇಕೆಂದು ಮನವಿ ಮಾಡಿ ಕೊಂಡರು.
ಅರಂತೋಡು ಗ್ರಾಮ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಡ್ಕಬಳೆ ಜನಾರ್ಧನ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಮೇರ್ಕಜೆ ವೆಂಕಟ್ರಮಣ ಗೌಡರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಅರಂತೋಡಿನ ಹಿರಿಯ ಕಾಂಗ್ರೆಸ್ಸಿಗ ರಾದ ದಿ| ಮೇರ್ಕಜೆ ಪದ್ಮಯ್ಯ ಗೌಡ, ಕೆ.ಪಿ.ಗುಂಡಪ್ಪ ಗೌಡ, ದಿ| ಗೂನಡ್ಕದ ಆದಂ ಕುಂಞಿ ಮತ್ತು ರಾಮಯ್ಯ ಮಾಸ್ತರ್ ಕುಂಟುಕಾಡು ಇವರಿಗೆ ಒಂದು ನಿಮಿಷದ ಮೌನಪ್ರಾರ್ಥನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ತೇಜಪ್ರಸಾದ್ ಗೌಡ ಅಜ್ಜನಗದ್ದೆ, ಚಂದ್ರಶೇಖರ್ ಗೌಡ ಶೆಟ್ಟಿಯಡ್ಕ, ಚಂಗಪ್ಪಗೌಡ ಕಲ್ಲಗದ್ದೆ, ಮೋಹನ್ ದಾಸ್ ಗೌಡ ಕಲ್ಲಗದ್ದೆ, ಕೃಷ್ಣ ಕುಮಾರ್ ಅಡ್ಯಡ್ಕ ಸಿ.ಆರ್. ಕಾಲನಿ, ರಮೇಶ ಗೌಡ ನಾರ್ಕೋಡು ಅರಂತೋಡು ಅಲ್ಲದೆ ಅರಂತೋಡು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಮನ್ಸ ಮುಗೇರ ಬಾಜಿನಡ್ಕ ಹೀಗೆ ಹಲವರು ಭಾರತೀಯ ಜನತಾ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಪಕ್ಷ ಸಂಘಟನೆಯ ಬಗ್ಗೆ ಅರಂತೋಡು ಮಾಜಿ ಮಂಡಲ ಪ್ರಧಾನರಾದ ಪಿ.ಬಿ.ದಿವಾಕರ್ ರೈ, ಅರಂತೋಡು ತಾಲೂಕು ಪಂಚಾಯತ್ ಮಾಜಿ ಸದಸ್ಯ ಸೋಮಶೇಖರ್ ಕೊಂಗಾಜೆ, ಕೆ.ಪಿ.ಸಿ.ಸಿ.ಸದಸ್ಯರಾದ ಎಂ.ವೆಂಕಪ್ಪ ಗೌಡ, ಡಾ.ರಘು, ಮಾಜಿ ಶಾಸಕರಾದ ಕೆ.ಕುಶಲ, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪಿ.ಸಿ. ಜಯರಾಮ, ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ.ಘಟಕದ ಉಪಾಧ್ಯಕ್ಷ ಶೌವಾದ್ ಗೂನಡ್ಕ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಬೇಕಲ ಅವರು ಮಾತ ನಾಡಿದರು.
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಗ್ರಾ.ಪಂ. ಸದಸ್ಯೆ ಮೋಹಿನಿ ಪೆಲ್ತಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧ ಶ್ರೀಧರ, ಉಪಾಧ್ಯಕ್ಷೆ ಆಶಾ ವಿನಯ್ ಕುಮಾರ್, ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಯೋಗೇಶ್ವರಿ ವೇದಿಕೆಯಲ್ಲಿದ್ದರು. ನೂರಾರು ಮಂದಿ ಉಪಸ್ಥಿತರಿದ್ದರು.
ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಮಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ ದರು. ಗ್ರಾಮ ಪಂಚಾಯತ್ ಸದಸ್ಯ ಪಿ.ಕೆ.ಅಬೂಸಾಲಿ ವಂದಿಸಿದರು.ಸುಳ್ಯ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯ ದರ್ಶಿ ಜಿ.ಕೆ.ಹಮೀದ್ ಕಾರ್ಯಕ್ರಮ ನಿರೂಪಿಸಿದರು.
ನಾವು ಕಾಂಗ್ರೆಸ್ ಸೇರಿಲ್ಲ
ನಾನೂ ಮೊಗೇರ ಸಂಘಕ್ಕೆ ಸಂಬಂಧಿಸಿ ಮನವಿ ನೀಡಲೆಂದು ಕಾಂಗ್ರೆಸ್ ಸಭೆಯಲ್ಲಿಗೆ ಹೋಗಿದ್ದೆ. ಆಗ ಅವರು ಕರೆದು ಕಾಂಗ್ರೆಸ್ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆಂದು ಹೇಳಿದ್ದಾರೆ. ಆದರೆ ನಾನು ಬಿಜೆಪಿಯಲ್ಲೆ ಇzನೆ. ಕಾಂಗ್ರೆಸ್‌ಗೆ ಸೇರಿಲ್ಲ ಎಂದು ಅರಂತೋಡು ಗ್ರಾ.ಪಂ. ಮಾಜಿ ಅಧ್ಯಕ್ಷ ಮನ್ಸ ಮುಗೇರ ಪತ್ರಿಕಾ ಕಚೇರಿಗೆ ಬಿಜೆಪಿ ನಾಯಕರೊಂದಿಗೆ ಬಂದು ತಿಳಿಸಿದ್ದಾರೆ.
ಮಾಜಿ ಸೈನಿಕ ಚಂಗಪ್ಪ ಕಲ್ಲಗದ್ದೆ ಯವರು ಸ್ಪಷ್ಟನೆ ನೀಡಿ ಗನ್‌ಲೈಸೆನ್ಸ್‌ಗೆ ಸಂಬಂಧಿಸಿ ಅರ್ಜಿ ಕೊಡಲೆಂದು ನಾನು ಹೋಗಿದ್ದೆ. ಆದರೆ ನಾನು ಯಾವ ಪಕ್ಷದ ಕಾರ್ಯಕರ್ತನಾಗಿಯೂ ಇಲ್ಲ. ಒಳ್ಳೆ ವ್ಯಕ್ತಿಗೆ ಮತ ನೀಡುವವನಾಗಿರುತ್ತೇನೆ ಎಂದಿದ್ದಾರೆ.
———————————————–

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.