ವನ್ಯ ಧಾಮ ಪರಿಸರ ಸೂಕ್ಷ್ಮ ವಲ ಯಕ್ಕೆ ಕಲ್ಮಕಾರು ಮತ್ತು ಬಾಳು ಗೋಡು ಗ್ರಾಮಗಳ ಕೆಲ ಭಾಗಗಳನ್ನು ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿ ವಿರೋಧ ವ್ಯಕ್ತ ಪಡಿಸಿಹೋರಾಟ ನಡೆಸುತ್ತಿರುವ ಸ್ಥಳೀಯ ಜನರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರನ್ನು ಮತ್ತು ಅರಣ್ಯ ಸಚಿವ ರಮಾನಾಥ ರೈಯವರನ್ನು ಹರಿಹರಪಲ್ಲತ್ತಡ್ಕಕ್ಕೆ ಕರೆಸಿ ಅವರೆದುರೇ ವೈಲ್ಡ್ಲೈಫ್ ಅಧಿಕಾರಿಗಳಿಂದ ಅಭಯ ಪಡೆಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಮಾಲೋಚನಾ ಸಭೆಯನ್ನು ಹರಿಹರದಲ್ಲಿ ನಡೆಸಲು ನಿರ್ಧರಿಸಿದ್ದು ನ.೪ರಂದು ಡಿ.ವಿ, ನ.೬ರಂದು ರಮಾನಾಥ ರೈ ಹರಿಹರಕ್ಕೆ ಭೇಟಿ ನೀಡಲಿ ದ್ದಾರೆ.
ಕಲ್ಮಕಾರು ಮತ್ತು ಬಾಳು ಗೋಡು ಗ್ರಾಮಗಳ ಕೆಲ ಪ್ರದೇಶಗಳನ್ನು ವನ್ಯಧಾಮದ ಸೂಕ್ಷ್ಮ ವಲಯಕ್ಕೆ ಸೇರಿಸಿರುವ ವಿಚಾರವಾಗಿ ಈಗಾಗಲೆ ಹಲವು ಸಭೆಗಳು, ಪ್ರತಿಭಟನೆ, ಘೇರಾವು, ಮಾತುಕತೆ ನಡೆದಿದ್ದರೂ ಈ ಭಾಗದ ಜನರಿಗೆ ಆತಂಕ ದೂರವಾಗಿಲ್ಲ. ಅದಕ್ಕಾಗಿ ಬಾಳುಗೋಡು, ಐನೆಕಿದು, ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಭಾಗದ ಜನರಿಗೆ ಭರವಸೆ ಮೂಡಿಸಲು ನ.೪ ಮತ್ತು ೬ ಸಮಾಲೋಚನಾ ಸಭೆಯ ಮೇಲೆ ದೃಷ್ಠಿ ನೆಟ್ಟಿದೆ.
ನ.೪ ಡಿ.ವಿ ಹರಿಹರಕ್ಕೆ
ಹರಿಹರದ ಹರಿಹರೇಶ್ವರ ದೇವಸ್ಥಾ ನದ ಸಭಾಂಗಣದಲ್ಲಿ ನ.೪ ರಂದು ಸೂಕ್ಷ್ಮ ವಲಯ ಭಾದಿತ ಪ್ರದೇಶಗಳ ಜನರ ಸಮಾಲೋಚನಾ ಸಭೆ ಬೆಳಗ್ಗೆ ೧೦ ಗಂಟೆಗೆ ನಡೆಯಲಿದ್ದು ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಅಂಗಾರ, ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ಜಿ.ಪಂ. ಮತ್ತು ತಾ.ಪಂ. ಅಧ್ಯಕ್ಷರು ಹಾಗೂ ವೈಲ್ಡ್ ಲೈಪ್ ನ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನ.೬ ರಮಾನಾಥ ರೈ ಹರಿಹರಕ್ಕೆ ಹರಿಹರೇಶ್ವರ ದೇವಸ್ಥಾನದಲ್ಲಿ ನ.೬ ರಂದು ಅಪರಾಹ್ನ ೩ ಗಂಟೆಗೆ ಅರಣ್ಯ ಸಚಿವ ರಮಾನಾಥ ರೈ ಅವರ ಉಪಸ್ಥಿತಿಯಲ್ಲಿ ಅದೇ ಸ್ಥಳದಲ್ಲಿ ಸಮಾಲೋಚನಾ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಶಾಸಕ ಅಂಗಾರ, ವೈಲ್ಡ್ ಲೈಫ್ ಮತ್ತು ಅರಣ್ಯ ಇಲಾಖಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾರ್ಯಕ್ರಮಕ್ಕೆ ಸಂಬಂದಿಸಿ ಅ.೨೭ ರಂದು ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಅರಣ್ಯ ಸಚಿವ ರಮಾನಾಥ ರೈ ಅವರನ್ನು ಸೂಕ್ಷ್ಮ ವಲಯ ಭಾದಿತ ಪ್ರದೇಶದ ಹೋರಾಟದ ಸಂಘಟಕರುಗಳಾದ ಹರ್ಷಕುಮಾರ್ ದೇವಜನ, ಸೋಮಶೇಖರ್ ಕಟ್ಟೆಮನೆ, ಶೈಲೇಶ್ ಕಟ್ಟೆಮನೆ, ಜಯಂತ ಬಾಳುಗೋಡು, ಮಹೇಶ್ ಕೆ.ಪಿ, ಹಿಮ್ಮತ್ ಕೆ.ಸಿ, ಉದಯ ಕೊಪ್ಪಡ್ಕ, ವಸಂತ ಕಿರಿಭಾಗ, ಸತೀಶ್ ಕೊಮ್ಮೆಮನೆ, ನರೇಂದ್ರ ಬಿಳಿಮಲೆ ಮತ್ತಿತರರು ನ. ೪ ರ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದು ಆ ದಿನ ಬೇರೆ ಕಾರ್ಯಕ್ರಮವಿರುವ ಕಾರಣ ನ.೬ರಂದು ಬರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಿ.ವಿ.ಸದಾನಂದರನ್ನು ಬೆಂಗಳೂರಿನಲ್ಲಿ ಹರೀಶ್ ಕಂಜಿಪಿಲಿ, ಉದಯಕೊಪ್ಪಡ್ಕ, ಹಿಮ್ಮತ್ ಕೆ.ಸಿ., ಮತ್ತು ಇತರರು ಹೋಗಿ ಮಾತನಾಡಿ ಬಂದಿದ್ದಾರೆಂದು ತಿಳಿದುಬಂದಿದೆ.