ಪಂಜ : ಜನನಿ ಹೊಟೇಲ್ ಮಾಲಕ ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

kushalappa panja death
ಪಂಜ ಸಿ ಎ ಬ್ಯಾಂಕ್ ಬಳಿಯ ಕಮಿಲ ಕಾಂಪ್ಲೆಕ್ಸ್‌ನಲ್ಲಿರುವ ಜನನಿ ಹೊಟೇಲ್ ಮಾಲಕ ಕುಶಾಲಪ್ಪ (೫೩ವ) ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.೨೩.ರಂದು ನಿಧನರಾದರು.ಅ.೧೬.ರಂದು ಅವರಿಗೆ ತೀವ್ರ ರಕ್ತ ವಾಂತಿ,ಭೇದಿ ಕಾಣಿಸಿ ಕೊಂಡಿತ್ತು. ಬಳಿಕ ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಗುಣಮುಖವಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು.ಅಲ್ಲಿ ಚಿಕಿತ್ಸೆ ಫಲಿಸದೆ ಅ.೨೩.ರಂದು ರಾತ್ರಿ ೯.೪೫ ರ ಹೊತ್ತಿಗೆ ಕೊನೆಯುಸಿರೆಳೆದರು. ಅವರು ಮೂಲತ: ಬಂಟ್ವಾಳ ತಾಲೂಕಿನ ಕಡೇಶಿವಾಲಯ ಅಣ್ಣೆಂಗಳ ಮನೆಯವರು. ಸುಮಾರು ೨೦ ವರುಷಗಳ ಹಿಂದೆ ಪಂಜ ವಿಶ್ವರಂಜಿನಿ ಹೊಟೇಲ್‌ಗೆ ಅಡುಗೆ ಕೆಲಸಕ್ಕೆ ಬಂದಿದ್ದರು. ಹೊಟೇಲ್ ಮಾಲಿಕತ್ವ ಬದಲಾದ ಬಳಿಕ ಪಂಜದಲ್ಲಿ ಕ್ಯಾಂಟಿನ್ ತೆರೆದಿದ್ದರು. ಮೂರು ವರುಷಗಳಿಂದ ಕಮಿಲ ಕಾಂಪ್ಲೆಕ್ಸ್‌ನಲ್ಲಿ ಜನನಿ ಹೊಟೇಲ್ ನಡೆಸುತ್ತಿದ್ದಾರೆ.ಅವರು ಪಂಬೆತ್ತಾಡಿ ಗ್ರಾಮದ ಚೀಮುಳ್ಳು ರಾಮಣ್ಣ ಮತ್ತು ನೀಲಮ್ಮ ದಂಪತಿಗಳ ಪುತ್ರಿ ರೇವತಿ ಯರನ್ನು ವಿವಾಹವಾಗಿದ್ದರು.ಮೃತರು ತಾಯಿ, ಸಹೋದರ, ಪತ್ನಿ ರೇವತಿ, ಪುತ್ರಿ ಪ್ರಜ್ಞಾ, ಪುತ್ರ ಪ್ರದೀಪ್ ಅವರನ್ನು ಅಗಲಿದ್ದಾರೆ.ಮೃತರ ಗೌರವಾರ್ಥ ಅ.೨೪.ರಂದು ಪಂಜದಲ್ಲಿ ವರ್ತಕರು ಒಂದು ತಾಸು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶೋಕಾಚರಿಸಿದರು. ಅ.೨೪.ರಂದು ಅವರ ಸ್ವಗ್ರಹ ಕಡೇಶಿವಾಲಯ ಅಣ್ಣೆಂಗಳದಲ್ಲಿ ಅಂತಿಮ ಸಂಸ್ಕಾರ ನಡೆಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.