ರಂಗಮನೆಯಲ್ಲಿ ಯಕ್ಷ ಸಂಭ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Suddi logo copy
ಸುಳ್ಯದ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನವೆಂಬರ್ ೭ ರಂದು ಸಂಜೆ ೫.೩೦ರಿಂದ ಯಕ್ಷಸಂಭ್ರಮವನ್ನು ಏರ್ಪಡಿಸಲಾಗಿದೆ. ಸಂಜೆ ೬.೧೫ಕ್ಕೆ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷ ಗುರುಗಳಾದ ಲಕ್ಷ್ಮೀಶ ರೈ ಕಳಂಜ ಇವರ ನಿರ್ದೇಶನದ ‘ವೀರಮಣಿ ಕಾಳಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಈ ಪ್ರಸಂಗದ ಅರ್ಥ ಸಾಹಿತ್ಯವನ್ನು ಹಿರಿಯ ಅರ್ಥಧಾರಿ ವೆಂಕಟ್ರಾಮ್ ಭಟ್ ಸುಳ್ಯ ಬರೆದಿದ್ದು ಪ್ರದರ್ಶನದ ಭಾಗವತರಾಗಿ ರಾಮಚಂದ್ರ ಅರ್ಬಿತ್ತಾಯ, ಹಿಮ್ಮೇಳದಲ್ಲಿ ಕುಮಾರ ಸುಬ್ರಹ್ಮಣ್ಯ ಹಾಗೂ ಬಾಲಕೃಷ್ಣ ಬೊಮ್ಮಾರು ಸಹಕರಿಸಲಿದ್ದಾರೆ.
ರಾತ್ರಿ ೮.೦೦ ರಿಂದ ಸುಳ್ಯ ತಾಲೂಕು ಸಾಹಿತ್ಯ ಪರಿಷತ್ ಮತ್ತು ಸುವಿಚಾರ ಸಾಹಿತ್ಯ ವೇದಿಕೆ ಇದರ ಆಶ್ರಯದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಲಕ್ಷ್ಮೀಶ ರೈ ರೆಂಜಾಳ ಇವರು ಸಂಯೋಜಿಸಿದ ಯಕ್ಷಗಾನ ‘ಮಾಯಾ ತಿಲೋತ್ತಮೆ’ ಪ್ರದರ್ಶನಗೊಳ್ಳಲಿದೆ. ಭಾಗವತರಾಗಿ ಪದ್ಯಾಣ ಗಣಪತಿ ಭಟ್, ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮತ್ತು ವಿನಯ ಆಚಾರ್ಯ ಕಡಬ ಸಹಕರಿಸಲಿದ್ದಾರೆ. ಕಲಾವಿದರಾಗಿ ಅಂಬಾಪ್ರಸಾದ್ ಪಾತಾಳ, ಸದಾಶಿವ ಕುಲಾಲ್ ವೇಣೂರು, ದಿವಾಕರ ರೈ ಸಂಪಾಜೆ, ಜಯಾನಂದ ಸಂಪಾಜೆ ಹಾಗೂ ರಕ್ಷಿತ್ ಶೆಟ್ಟಿ ಪಡ್ರೆ ಹಾಗೂ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸುಳ್ಯದ ಖ್ಯಾತ ಯುವ ಕಲಾವಿದರುಗಳಾದ ದಿವಾಕರ ರೈ ಸಂಪಾಜೆ, ಜಯಾನಂದ ಸಂಪಾಜೆ, ಹಾಗೂ ಶ್ರೀಮತಿ ಭವ್ಯಶ್ರೀ ಕುಳ್ಕುಂದ ಇವರಿಗೆ ಸನ್ಮಾನ ನಡೆಯಲಿದೆ.
ರಂಗಮನೆಯಲ್ಲಿ ಉಚಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಯಕ್ಷಾಸಕ್ತರು ಭಾಗವಹಿಸಬೇಕೆಂದು ರಂಗಮನೆಯ ಅಧ್ಯಕ್ಷ ಜೀವನ್ ರಾಂ ಸುಳ್ಯ, ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಸುಂದರ ಕೇನಾಜೆ, ಕ.ಸಾ.ಪ ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ ಹಾಗೂ ಸುವಿಚಾರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಪೇರಾಲು ಕೋರಿರುತ್ತಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.