ಕೂಜುಗೋಡು ಮತ್ತು ಸುಬ್ರಹ್ಮಣ್ಯ ರೋಟರಿ ಕುಟುಂಬ ಸಮ್ಮಿಲನ : ಪಟೇಲ್ ನಾಗಪ್ಪ ಗೌಡರ ಹುಟ್ಟುಹಬ್ಬ ಆಚರಣೆ

Koojugodu Rotary Smmila & Nagappa Huttuhabba Acharane
ಕೂಜುಗೋಡು ಕುಟುಂಬ ಮತ್ತು ರೋಟರಿ ಕುಟುಂಬ ಸಮ್ಮಿಳನ ಕಾರ್ಯಕ್ರಮ ಅ. ೨೨ ರಂದು ಕೂಜುಗೋಡು ಪಟೇಲ್ ನಾಗಪ್ಪ ಗೌಡರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ವಾತಂತ್ರ್ಯ ಪೂರ್ವದ ಮಾಜಿ ಯೋಧ ಕೂಜುಗೋಡು ಮನೆತನದ ಹಿರೀಯ ವ್ಯಕ್ತಿ ಪಟೇಲ್ ನಾಗಪ್ಪ ಗೌಡ ಅವರ ೯೮ ನೇ ವರ್ಷದ ಹುಟ್ಟುಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿಯನ್ನು ಕಿಶೋರ್ ಕೂಜುಗೋಡು, ಪ್ರಶಾಂತ್ ಕೋಡಿಬೈಲು, ಕಾರ್ಯಪ್ಪ ಪಿ.ಎಸ್, ಗಿರಿಧರ ಸ್ಕಂದ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ವೆಂಕಟೇಶ್ ಎಚ್.ಎಲ್, ಬಂಟ್ವಾಳ ಕ್ಲಬ್ ನ ಮಾಜಿ ಗವರ್ನರ್ ಅಶ್ವಿನ್ ಕುಮಾರ್ ರೈ, ಯೋನ್ ೫ ರ ಅಸಿಸ್ಟೆಂಟ್ ಗವರ್ನರ್ ವಿಶ್ವಾಸ್ ಶೆಣೈ, ರೋಟರಿ ಜಿಲ್ಲಾ ೩೧೮೧ ರ ನಿರ್ದೇಶಕ ಒಸ್ಟರ್ ಆನಂದ, ಸುಬ್ರಹ್ಮಣ್ಯ ರೋಟರಿಯ ನಿಕಟಪೂರ್ವಾಧ್ಯಕ್ಷ ಬಾಲಕೃಷ್ಣ ಪೈ, ವಲಯ ಸೇನಾನಿ, ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್, ಕಾರ್ಯದರ್ಶಿ ಗೋಪಾಲ ಎಣ್ಣೆಮಜಲು, ದಿನೇಶ್ ಬಿ.ಎನ್, ವಿಶ್ವನಾಥ ನಡುತೋಟ, ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿ ತ್ಯಾಗರಾಜ್, ರಾಮಕೃಷ್ಣ ಮಲ್ಲಾರ, ಶಿವರಾಮ ಏನೆಕಲ್ಲು, ಭರತ್ ನೆಕ್ರಾಜೆ, ದೇವದಾಸ್ ಎಣ್ಣೆಮಜಲು, ದೇವದಾಸ್ ಕೂಜುಗೋಡು, ಡಾ.ಉದಯ ಕುಮಾರ್ ಕೂಜುಗೋಡು ಮತ್ತಿತರರು ಉಪಸ್ಥಿತರಿದ್ದರು. ಕೂಜುಗೋಡು ಮನೆತನದವರು ಮತ್ತು ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಸದಸ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.