ಬೆಳ್ಳಾರೆ ಜ್ಞಾನದೀಪ ಸಂಸ್ಥೆಯ ದಶಮಾನೋತ್ಸವ ಲಾಂಛನ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Jnanadeepa
ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಆಡಳಿತದಲ್ಲಿ ಬೆಳ್ಳಾರೆಯ ದೇವಿ ಹೈಟ್ಸ್‌ನಲ್ಲಿ ನಡೆಸಲ್ಪಡುತ್ತಿರುವ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ದಶಮಾನೋತ್ಸವ ಆಚರಣೆಯ ಲಾಂಛನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ ಹೆಗ್ಗಡೆ ನಿವಾಸದಲ್ಲಿ ಬಿಡುಗಡೆಗೊಳಿಸಿದರು.

ರುಡ್‌ಸೆಟ್ ಸಂಸ್ಥೆಯಿಂದ ತರಬೇತಿ ಪಡೆದು ಜ್ಞಾನದೀಪ ಸಂಸ್ಥೆ ನಡೆಸುತ್ತಿರುವ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಿದರು. ಉಜಿರೆ ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್, ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಟ್ರಸ್ಟಿ ಸಂಜಯ್ ನೆಟ್ಟಾರ್, ಉಪನ್ಯಾಸಕರುಗಳಾದ ಗಣೇಶ್ ನಾಯಕ್, ತೀರ್ಥಾನಂದ ಕಲ್ಮಡ್ಕ, ಮಹಮ್ಮದ್, ಸರಸ್ವತಿ, ಪಲ್ಲವಿ, ಅಮಿತಾ, ಸುಷ್ಮಾ, ಹಿರಿಯ ವಿದ್ಯಾರ್ಥಿ ಸಂದೇಶ್ ನಾಯಕ್, ವಿದ್ಯಾರ್ಥಿ ನಾಯಕಿ ಗಾಯತ್ರಿ ಜಿ ಸೇರಿದಂತೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.