ಅಡ್ಕಾರ್‌ನಲ್ಲಿ ಎ.ವಿ.ಎಲ್ – ವಾಲಿಬಾಲ್ ಪಂದ್ಯಾಟ ವಿನ್ನರ್ – ಅರಸು ಫ್ರೆಂಡ್ಸ್ ಅಡ್ಕಾರು, ರನ್ನರ್ – ವಿವೇಕಾನಂದ ಫ್ರೆಂಡ್ಸ್ ಅಡ್ಕಾರ್

Advt_NewsUnder_1
Advt_NewsUnder_1
Advt_NewsUnder_1

ವಿವೇಕಾನಂದ ಫ್ರೆಂಡ್ಸ್ ವಿನೋಬಾನಗರ ಅಡ್ಕಾರು ಇದರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಅ೧೮ರಂದು ವಾಲಿಬಾಲ್ ಪಂದ್ಯಾಟವು ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆಯಿತು. ಲೀಗ್ ಮಾದರಿಯಲ್ಲಿ ನಡೆದ ಎ.ವಿ.ಎಲ್. ಪಂದ್ಯಾಟವು ವಿವೇಕಾನಂದ ಫ್ರೆಂಡ್ಸ್ ಅಡ್ಕಾರು ಎಂ.ಎಸ್ ಕನ್ಸ್ಟ್ರಕ್ಷನ್ ಸುಳ್ಯ, ರೋಯಲ್ ಸ್ಪೋರ್ಟ್ಸ್ ಲೈನ್ ಸುಳ್ಯ, ಅರಸು ಫ್ರೆಂಡ್ಸ್ ಅಡ್ಕಾರ್, ಅಸ್ತ್ರ ಟ್ರಾನ್ಸ್‌ಪೋರ್ಟ್ ಪೈಚಾರ್, ಇಂಟೀರಿಯರ್ ಡಿಸೈನ್ ಮತ್ತು ಬಿಲ್ಡ್ ಸುಳ್ಯ ಇವುಗಳ ಮಧ್ಯೆ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಹಾಗೂ ಉತ್ತಮ ಹೊಡೆತಗಾರ, ಉತ್ತಮ ಎತ್ತುವಿಕೆ, ಸರ್ವಾಂಗೀಣ ಆಟಗಾರರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಸಮಾ ರಂಭದ ಅಧ್ಯಕ್ಷತೆಯನ್ನು ಜಾಲ್ಸೂರು ಪಂಚಾಯತ್ ಉಪಾಧ್ಯಕ್ಷ ದಿನೇಶ್ ಅಡ್ಕಾರ್ ವಹಿಸಿದ್ದರು. ವೇದಿಕೆಯಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ, ಗ್ರಾ.ಪಂ ಸದಸ್ಯ ಜನಾರ್ದನ ಆಚಾರ್ಯ, ಉದ್ಯಮಿಗಳಾದ ಸುಧಾಕರ ಕಾಮತ್ ಅಡ್ಕಾರ್, ವಾಲಿಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ಎಸ್.ಸಂಶುದ್ಧೀನ್, ಗುರುಪ್ರಕಾಶ್ ಸುಳ್ಯ, ಲಕ್ಷ್ಮಿ ನಾರಾಯಣ ಕಜೆಗದ್ದೆ, ದೊಡ್ಡಣ್ಣ ಬರೆಮೇಲು, ಉಪಸ್ಥಿತರಿದ್ದರು. ರಜತ್ ಅಡ್ಕಾರ್ ಮಾಲಕತ್ವದ ಅರಸು ಫ್ರೆಂಡ್ಸ್ ತಂಡವು ವಿನ್ನರ್ ಹಾಗೂ ವಿವೇಕಾನಂದ ಫ್ರೆಂಡ್ಸ್ ರನ್ನರ್, ಹರ್ಷಿತ್ ಸುಳ್ಯ ಮಾಲಕತ್ವದ ರೋಯಲ್ ಸ್ಪೋರ್ಟ್ಸ್ ಲೈನ್ ಸುಳ್ಯ ತೃತೀಯ ಪ್ರಶಸ್ತಿಯನ್ನು ಗಳಿಸಿಕೊಂಡಿತು. ಗಣೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ವಿವೇಕಾನಂದ ಫ್ರೆಂಡ್ಸ್‌ನ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.