ಮಿಷನ್ ಅಂತ್ಯೋದಯ ಯೋಜನೆಯಲ್ಲಿ ತಾಲೂಕಿನ 7 ಗ್ರಾಮಗಳ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

Suddi logo copy
ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಿಷನ್ ಅಂತ್ಯೋದಯ ಯೋಜನೆಗೆ ತಾಲೂಕಿನ ೭ ಗ್ರಾಮಗಳು ಆಯ್ಕೆಯಾಗಿದೆ. ಬಳ್ಪ, ಸುಬ್ರಹ್ಮಣ್ಯ, ಸಂಪಾಜೆ, ಕನಕಮಜಲು, ಬಾಳಿಲ, ಪಂಜ, ಬೆಳ್ಳಾರೆ ಗ್ರಾಮಗಳು ಆಯ್ಕೆಯಾಗಿದ್ದು ಮಿಷನ್ ಅಂತ್ಯೋದಯ ಯೋಜನೆಯನ್ವಯ ಗ್ರಾಮಗಳಲ್ಲಿ ಬಡತನ ನಿರ್ಮೂಲನೆಯ ಜತೆಗೆ ಆ ಗ್ರಾಮಗಳ ಜನರ ಆದಾಯ ಹೆಚ್ಚಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲು  ಉದ್ದೇಶಿಸಲಾಗಿದೆ.
ಅಲ್ಲದೆ ಗ್ರಾಮದಲ್ಲಿ ಮಹಿಳಾ ಸಶಕ್ತೀಕರಣ, ಪ್ರತಿಯೊಬ್ಬರಿಗೂ ಶಿಕ್ಷಣ,
ಆರೋಗ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲದೆ ಸ್ವದ್ಯೋಗ ಮಾಡುವ ಯುವಕರಿಗೆ ಬ್ಯಾಂಕ್ ಲೋನ್ ಕೊಡಿಸುವುದು, ಗ್ರಾಮಗಳಲ್ಲಿ ಉಜ್ವಲ ಯೋಜನೆ, ಸ್ವಚ್ಛ ಭಾರತ್ ಯೋಜನೆಗಳ ಅನುಷ್ಠಾನ ಮಾಡುವುದು, ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವುದರ ಮೂಲಕ ಈಗ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಈ ಗ್ರಾಮಗಳಲ್ಲಿ ಮತ್ತಷ್ಟು ಯಶಸ್ವಿಯಾಗುವಂತೆ ಅನುಷ್ಠಾನ ಮಾಡುವುದು ಈ ಯೋಜನೆಯ ಮುಖ್ಯ  ಉದ್ದೇಶವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.