ನ.15 ರಿಂದ ಚಂಪಾಷಷ್ಠಿ ಮಹೋತ್ಸವ ಆರಂಭ ನ.23ರಂದು ಪಂಚಮಿ ; ನ.24ರಂದು ಷಷ್ಠಿ 4 ತಾಲೂಕುಗಳಿಂದ ಹೊರೆ ಕಾಣಿಕೆಗೆ ನಿರ್ಧಾರ

Untitled-1
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದೇಶದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ದೇಶದಾದ್ಯಂತದ ಲಕ್ಷಾಂತರ ಭಕ್ತರು ಅತ್ಯಂತ ಗಣ್ಯ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಪ್ರಾರ್ಥನೆ ಸೇವೆ ಸಲ್ಲಿಸುತ್ತಾರೆ. ಆದಾಯದ ದೃಷ್ಠಿಯಿಂದ ರಾಜ್ಯದಲ್ಲೆ ಪ್ರಥಮ ಸ್ಥಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಳ ಇದೆ. ಊರವರು ಪರವೂರವರು ಅತ್ಯಂತ ಭಕ್ತಿ ಶ್ರದ್ಧೆಯಿಂದ ನಡೆದುಕೊಳ್ಳುವ ಈ ನಾಗ ಕ್ಷೇತ್ರದ ಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಊರವರಲ್ಲಿ ಇನ್ನಷ್ಟು ಹೆಚ್ಚು ಭಕ್ತಿಯ ಸಂಚಲನ ಮೂಡಿಸಿ, ಸಕ್ರಿಯವಾಗಿ ಲ್ಗೊಳ್ಳುವಂತೆ ಮಾಡುವ ಉzಶದಿಂದ ಸುಳ್ಯ, ಪುತ್ತೂರು, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳ ಭಕ್ತಾದಿಗಳಿಂದ ಕುಕ್ಕೆ ಕ್ಷೇತ್ರಕ್ಕೆ ಹಸಿರು ಹೊರೆ ಕಾಣಿಕೆ ಬರುವಂತೆ ಮಾಡುವ ಯೋಜನೆಯನ್ನು ಈಗಿನ ವ್ಯವಸ್ಥಾಪನಾ ಸಮಿತಿ ರೂಪಿಸಿದೆ. ಅದಕ್ಕಾಗಿ ಈ ೪ ತಾಲೂಕುಗಳ ಎಲ್ಲಾ ದೇವಾಲಯಗಳ ವ್ಯವಸ್ಥಾಪನಾ ಸಮಿತಿಗಳ ನೇತೃತ್ವದಲ್ಲಿ ಆಯಾ ಊರುಗಳಿಂದ ಹೊರೆ ಕಾಣಿಕೆ ಸಂಗ್ರಹಿಸಿ, ಕ್ಷೇತ್ರಕ್ಕೆ ತರುವ ಕಾರ್ಯಕ್ರಮ ರೂಪಿಸಲಾಗಿದೆ.
‘ವಾಸುಕೀ ಸ್ಕಂದ ಸಹಿತ ನಾಗರಾಜನ ಪುರಾಣ ಪ್ರಸಿದ್ಧ ಕ್ಷೇತ್ರವಾದ ಈ ಕ್ಷೇತ್ರದೊಂದಿಗೆ ಭಕ್ತಾದಿಗಳಿಗಿರುವ ಅವಿನಾಭಾವ ಧಾರ್ಮಿಕ ಸಂಬಂಧವನ್ನು ಇನ್ನಷ್ಟು ಹೆಚ್ಚಿಸಿ ಆ ಮೂಲಕ ಭಕ್ತಿಯ ಸಮರ್ಪಣೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಈ ತೀರ್ಮಾನವನ್ನು ತೆಗೆದು ಕೊಂಡಿದೆ’ ಎಂದು ಕುಕ್ಕೆ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ
ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.
ಜಾತ್ರಾ ಸಮಯದ ಈ ಹದಿನೈದು ದಿನಗಳಲ್ಲಿ ನಿತ್ಯ ಪೂಜಾದಿ ಕಾರ್ಯಗಳೊಂದಿಗೆ ಪಲ್ಲಕಿ, ಬಂಡಿ ಉತ್ಸವ, ರಥೋತ್ಸವಾದಿಗಳು ಹಾಗೂ ದಿನ ನಿತ್ಯ ಅನ್ನಸಂತರ್ಪಣೆ ಇತ್ಯಾದಿ ವಿಶೇಷ ಕಾರ್ಯಕ್ರಮಗಳು ಜರುಗುತ್ತಿರುತ್ತದೆ. ಈ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಬರುತ್ತಿರುತ್ತಾರೆ. ಆದ್ದರಿಂದ ತಮ್ಮ ತಮ್ಮ ಗ್ರಾಮ-ಪರಿಸರಗಳಲ್ಲಿನ ಭಗವದ್ಭಕ್ತರಿಗೆ ಈ ವಿಚಾರವನ್ನು ತಿಳಿಯಪಡಿಸಿ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳಿಂದ ಹೊರೆ ಕಾಣಿಕೆ ಸಂಗ್ರಹಿಸಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಗೆ ಅರ್ಪಣೆಯಾಗುವಂತೆ ಸಹಕರಿಸಬೇಕೆಂದು ಕೂಡಾ ಅವರು ಕೋರಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಠಿ ಮಹೋತ್ಸವದ ಪೂರ್ವಭಾವಿ ಸಭೆ
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.೧೫ರಿಂದ ಡಿ.೧ರ ತನಕ ಜರಗಲಿರುವ ಚಂಪಾಷಷ್ಠಿ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಅ.೧೭ರಂದು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಶ್ರೀ ದೇವಳದ ವತಿಯಿಂದ ಕಲ್ಪಿಸಬಹುದಾದ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಕರೆದ ಈ ಸಭೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ, ಜನಪ್ರತಿಧಿಗಳ, ವಿವಿಧ ಇಲಾಖಾಧಿಕಾರಿಗಳ, ಗ್ರಾಮ ಪಂಚಾಯತ್, ದೇವಳದ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗ ಹಾಗೂ ಊರವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ ವಾರ್ಷಿಕ ಜಾತ್ರೋತ್ಸವ ಸುಸೂ ತ್ರವಾಗಿ ನಡೆಸಲು ಸರ್ವರ ಸಹಕಾರ ಅತ್ಯಗತ್ಯ. ಸೂಕ್ತ ಯೋಜಿತ ಚಿಂತನೆ ಮೂಲಕ ಶ್ರೀ ದೇವತಾ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಭಕ್ತರು ಮತ್ತು ಇಲಾಖಾಧಿಕಾರಿಗಳ ಸಹಕಾರ ಕೋರಿದರು. ಲಕ್ಷ ದೀಪೋತ್ಸವದಂದು ದೇವಳದ ಹೊರಾಂಗಣ ಉತ್ಸವ ಪ್ರಾರಂಭವಾಗುವ ವೇಳೆ ಗೋಪುರದಿಂದ ಕಾಶಿಕಟ್ಟೆ ಗಣಪತಿ ದೇವಸ್ಥಾನದ ತನಕ ಲಕ್ಷ ಹಣತೆ ಬೆಳಗಿಸಿ ಲಕ್ಷದೀಪೋತ್ಸವ ಆಚರಿಸಲು ನಿರ್ಧರಿಸಲಾಯಿತು.

ಷಷ್ಠಿ ಸಂದರ್ಭದಲ್ಲಿ ವಾಹನ
ಪಾರ್ಕಿಂಗ್‌ಗಾಗಿ ಆಂಜನೇಯ ದೇವಸ್ಥಾನದ ಬಳಿ, ಸವಾರಿ ಮಂಟ ಪದ ಬಳಿ, ಬಿಲದ್ವಾರ ಮತ್ತು ಕುಮಾರ ಧಾರದ ಹೆಲಿಪ್ಯಾಡ್ ಮೈದಾನಗಳನ್ನು ಬಳಸಲಾಗುತ್ತದೆ. ಈ ಪ್ರದೇಶದಲ್ಲಿ ಸಿಸಿ ಟಿವಿ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಸಮರ್ಪಕವಾಗಿ ಅಳವ ಡಿಸಲು ತೀರ್ಮಾನಿಸಲಾಯಿತು. ಚೌತಿ, ಪಂಚಮಿ, ಷಷ್ಠಿ ಹಾಗೂ ಅವಭೃತ ದಿನಗಳಂದು ಮಧ್ಯಾಹ್ನ ಮತ್ತು ರಾತ್ರಿ ಭೋಜನ ಪ್ರಸಾದ ವನ್ನು ದೇವಳದ ಸಮೀಪದ ಅಂಗಡಿ ಗುಡ್ಡೆಯಲ್ಲಿ ನೀಡುವುದೆಂದು ತೀರ್ಮಾ ನಿಸಲಾಯಿತು. ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ. ಕಾಲೇಜಿನ ಪ್ರಾಂಶುಪಾಲರಿಗೆ ಇದರ ಜವಾಬ್ದಾರಿಯನ್ನು ಹಂಚಲಾ ಯಿತು. ಆದಿ ಸುಬ್ರಹ್ಮಣ್ಯದಲ್ಲಿ ಹೆಚ್ಚುವರಿ ಸೇವಾಕೌಂಟರ್ ವ್ಯವಸ್ಥೆಯನ್ನು ಮಾಡು ವುದೆಂದು ನಿರ್ಧರಿಸಲಾಯಿತು.
ಭಕ್ತಾದಿಗಳ ಒತ್ತಡ ನಿಯಂತ್ರಿಸಲು ಪ್ರವೇಶ ಗೋಪುರ, ಹೊರಾಂಗಣ, ಆದಿ ಸುಬ್ರಹ್ಮಣ್ಯ, ಭೋಜನ ಶಾಲೆ ಮೊದಲಾದ ಕಡೆಗಳಲ್ಲಿ ಸರದಿ ಸಾಲಿನ ವ್ಯವಸ್ಥೆ ಹಾಗೂ ಲಗೇಜು ಕೊಠಡಿ ಮತ್ತು ಮಾಹಿತಿ ಕೇಂದ್ರಗಳಲ್ಲಿ ಸ್ವಯಂ ಸೇವಕರ ನಿಯೋಜನೆಯೊಂದಿಗೆ ಸೂಕ್ತ ವ್ಯವಸ್ಥೆ ಮಾಡಲು ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರಿಗೆ ಹಾಗೂ ಆರಕ್ಷಕ ಮತ್ತು ಗೃಹ ರಕ್ಷಕ ಸಿಬ್ಬಂದಿಗಳಿಗೆ ಜವಾಬ್ದಾರಿ ವಹಿಸ ಲಾಯಿತು. ದೇವಳದ ಹೊರಾಂಗಣ, ಒಳಾಂಗಣ, ಸ್ನಾನಘಟ್ಟ, ಭೋಜನ ಶಾಲೆ, ಆದಿ ಸುಬ್ರಹ್ಮಣ್ಯ, ರಥಬೀದಿ ಇತ್ಯಾದಿ ಎಲ್ಲಾ ಕಡೆ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಪೋಲೀಸ್ ಇಲಾಖೆಗೆ ಮನವಿ ನೀಡಲಾಯಿತು.
ಪಂಚಮಿ ಮತ್ತು ಷಷ್ಠಿ ದಿನದಂದು ವಾಹನಗಳನ್ನು ಕುಮಾರಧಾರ ಪರಿ ಸರದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ. ಅಲ್ಲಿಂದ ಶ್ರೀ ದೇವಳದ ತನಕ ತೆರಳಲು ಉಚಿತ ವಾಹನಗಳ ವ್ಯವಸ್ಥೆಯನ್ನು ಕುಮಾ ರಸ್ವಾಮಿ ವಿದ್ಯಾಲಯ ಹಾಗೂ ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ ಮಾಲಕ ಸಂಘ ದವರು ನೀಡಲಿರುವರು. ಆರಕ್ಷಕ ಸಿಬ್ಬಂಧಿಗಳಿಗೆ, ಸ್ವಯಂಸೇವಕರಿಗೆ, ಗೃಹ ರಕ್ಷಕ ಸಿಬ್ಬಂದಿಗಳಿಗೆ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗುವುದು. ಈ ಭಾರಿ ವಿಶೇಷವಾಗಿ ಭಕ್ತಾದಿಗಳ ಪಾಳ್ಗೊಳ್ಳುವಿಕೆಗಾಗಿ ಜಾತ್ರಾ ಸಮಯದಲ್ಲಿ ಶ್ರೀ ದೇವಳಕ್ಕೆ ಸುಳ್ಯ, ಪುತ್ತೂರು ಬೆಳ್ತಂಗಡಿ ಸೇರಿದಂತೆ ನೆರೆಯ ಊರುಗಳಿಂದ ಹಸಿರು ಕಾಣಿಕೆ ಸಂಗ್ರಹಿಸಲು ತೀರ್ಮಾ ನಿಸಲಾಯಿತು.
ಕ್ಷೇತ್ರದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ವ್ಯವಸ್ಥೆ ಜಾರಿಗೊಳಿಸುವುದು, ಆರೋಗ್ಯ, ಶುಚಿತ್ವ, ನೀರಾವರಿ ವ್ಯವಸ್ಥೆ, ವಿದ್ಯುತ್, ರಕ್ಷಣೆ ಮತ್ತು ಕೃಷಿ ಮೇಳ ನಡೆಸುವ ಕುರಿತು ತೀರ್ಮಾ ನಿಸಲಾಯಿತು.
ಸಭೆಯಲ್ಲಿ ದೇವಳದ ಕಾರ‍್ಯನಿರ್ವ ಹಣಾಧಿಕಾರಿ ರವೀಂದ್ರ ಎಂ.ಎಚ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಕೇನ್ಯ ರವೀಂದ್ರ ನಾಥ ಶೆಟ್ಟಿ, ಬಾಲಕೃಷ್ಣ ಬಳ್ಳೇರಿ, ಮಾಧವ. ಡಿ, ರಾಜೀವಿ ಆರ್ ರೈ, ದಮಯಂತಿ ಕೂಜುಗೋಡು ತಾ. ಪಂ. ಸದಸ್ಯ ಅಶೋಕ್ ನೆಕ್ರಾಜೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ವಿಮಲಾರಂಗಯ್ಯ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವರಾಮ ರೈ, ಕೆ.ಪಿ.ಗಿರಿಧರ್, ಸುಬ್ರಹ್ಮಣ್ಯ ಗ್ರಾ.ಪಂ. ಪಿ.ಡಿ.ಓ. ಯು.ಡಿ.ಶೇಖರ್ ಮತ್ತು ಗ್ರಾ.ಪಂ. ಸದಸ್ಯರು, ದೇವಳದ ಆಡಳಿತಕ್ಕೊಳಪಟ್ಟ ಕಾಲೇಜುಗಳ ಪ್ರಾಂಶುಪಾಲರು, ಲೋಕೋಪಯೋಗಿ ಇಲಾಖಾಧಿಕಾರಿಗಳು, ಮೆಸ್ಕಾಂ ಅದಿಕಾರಿ, ಅರಣ್ಯಾಧಿಕಾರಿಗಳು, ಕೆ.ಎಸ್.ಆರ್.ಟಿ.ಸಿ, ಆರೋಗ್ಯ ಇಲಾಖಾಧಿಕಾರಿಗಳು, ಸಂಘಞ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ದೇವಳದ ಸಿಬ್ಬಂದಿ ಬಾಲಸುಬ್ರಹ್ಮಣ್ಯ ಮಾರರ್ ಪ್ರಾರ್ಥಿಸಿದರು. ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ. ಎಚ್. ಸ್ವಾಗತಿಸಿದರು. ಕಛೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ವಿಷಯಗಳನ್ನು ಪ್ರಸ್ತಾಪಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ವಂದಿಸಿದರು. ಉಪನ್ಯಾಸಕ ರತ್ನಾಕರ ಎಸ್ ಕಾರ್ಯಕ್ರಮ ರೂಪಿಸಿದರು. ಶ್ರೀ ದೇವಳದ ಪದ್ಮನಾಭ ಶೆಟ್ಟಿಗಾರ್, ಯೋಗೀಶ್, ದೇವಳದ ಅಭಿಯಂತರ ಉದಯ ಕುಮಾರ್ ಹಾಗೂ ಸಿಬ್ಬಂಧಿ ವರ್ಗದವರು ಸಭೆಯ ಯಶಸ್ಸಿಗೆ ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.