ಜಾಲ್ಸೂರು ಗ್ರಾಮದ ಮರಸಂಕ ವಸಂತ ಎಂಬವರ ಮನೆಬಳಿ ಅಪರೂಪದ ಹಾವು ಪಾರೆಸ್ಟ್ ಬೆಕ್ಕು ಕಣ್ಣಿನ ಹಾವು ಆ. ೧೩ ರಂದು ಪತ್ತೆಯಾಗಿದೆ. ಸುಮಾರು ೬.೫ ಅಡಿಯಷ್ಟು ಉದ್ದ ಇದ್ದ ಇದನ್ನು ಜಾಲ್ಸೂರು ನಾಯಕ್ಸ್ ಮೆಡಿಕಲ್ ನ ಮಾಲಕ ಶ್ಯಾಮ್ ಪ್ರಸಾದ್ ಹಿಡಿದಿದ್ದು ನಿವೃತ್ತ ವನ ಪಾಲಕ ಶಿವರಾಮ ಬಲ್ಯಾಯ ಅವರ ಸಲಹೆ ಮೇರೆಗೆ ಪಿಲಿಕುಲದ ಡಾ. ಶಿವರಾಮ ಕಾರಂತ ನಿಸರ್ಗ ದಾಮಕ್ಕೆ ಕಳುಹಿಸಲಾಗಿದೆ. ಜೈವಿಕ ಉದ್ಯಾನವನ ದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಅರಣ್ಯ ಪಾಲಕ ದಿನೇಶ್ ಮುಖಾಂತರ ಹಾವನ್ನು ಕೊಂಡೊಯ್ದಿದ್ದಾರೆ. ಈ ಹಾವು ಪಶ್ಚಿಮ ಘಟ್ಟದಲ್ಲಿ ವಿನಾಶದ ಅಂಚಿನಲ್ಲಿದ್ದು ಇದು ವಿಷಕಾರಿ ಅಲ್ಲದ ಹಾವು ಇದಾಗಿದ್ದು ಹಕ್ಕಿ, ಮೊಟ್ಟೆ, ಇಲಿ ಇದರ ಆಹಾರವಾಗಿದೆ ಎಂದು ಅವರು ತಿಳಿಸಿದ್ದಾರೆ.