ಸುಳ್ಯದಲ್ಲಿ ಚಲನಚಿತ್ರ ಟಿವಿ ಮಾಧ್ಯಮದ ಅವಕಾಶಗಳ ಅಭಿನಯ ತರಬೇತಿ ಮತ್ತು ಸಂವಾದ ಕಾರ್ಯಕ್ರಮ

Suddi logo copy

ಚಲನಚಿತ್ರಗಳಲ್ಲಿ ಮತ್ತು ಟಿವಿ ಮಾಧ್ಯಮಗಳಲ್ಲಿ ಇರುವ ಅಭಿನಯ ಅವಕಾಶಗಳ ಬಗ್ಗೆ ಮಾಹಿತಿ, ಅಭಿನಯ ತರಬೇತಿ ಮತ್ತು ಸಂವಾದ ಕಾರ್ಯಾಗಾರ ಸುಳ್ಯದಲ್ಲಿ ಅ.೧೫ರಂದು ನಡೆಯಲಿದೆ.
ಸುಳ್ಯದ ಮಯೂರಿ ಪ್ರೊಡಕ್ಷನ್‌ನವರು ಪ್ರಾಯೋಜಕತ್ವದ ನೆರವಿನೊಂದಿಗೆ ಈ ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ. ಅ.೧೫ ರಂದು ಸುಳ್ಯದ ಲಯನ್ಸ್ ಸೇವಾ ಸಂಘದ ಸಭಾಂಗಣದಲ್ಲಿ ನಡೆಯುವ ಈ ಅಭಿನಯ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿರ್ದೇಶಕರು ಹಾಗೂ ಡ್ರಾಮಾ ಜೂನಿಯರ್ಸ್ ತರಬೇತುದಾರರಾದ ಹರೀಶ್ ಭಟ್, ನಟ ನಿರ್ದೇಶಕ ಯೋಗೀಶ್ ಬಂಕೇಶ್ವರ, ನಟ ನಿರ್ದೇಶಕ ವಿಕ್ರಮ್ ಸೂರಿ, ಚಲನಚಿತ್ರ ನಿರ್ದೇಶಕ ಶರತ್ ಬಿಳಿನೆಲೆ, ಚಲನಚಿತ್ರ ಮತ್ತು ಧಾರಾವಾಹಿಗಳ ನಟಿಯರಾದ ಅಮೃತ ನಾಯಕ್, ಅನುಷಾ ಹೆಗ್ಡೆ, ಹೇಮಾ ಗೌಡ ಭಾಗವಹಿಸುವರು. ಜೊತೆಗೆ ಡ್ರಾಮಾ ಜೂನಿಯರ್ಸ್ ಖ್ಯಾತಿಯ ತುಷಾರ್ ಗೌಡ, ಅಚಿಂತ್ಯ, ಮಹೇಂದ್ರ ಮತ್ತು ಶರತ್ ಅವರಿಂದ ವಿಶೇಷ ಕಾರ್ಯಕ್ರಮವಿರುತ್ತದೆ.
೮ ವರ್ಷ ಮೇಲ್ಪಟ್ಟ ಆಸಕ್ತ ಪ್ರತಿಭೆಗಳು ಅ.೧೪ ರ ಒಳಗೆ ನೋಂದಾಯಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಟಿ.ವಿ. ಮಾಧ್ಯಮಗಳಲ್ಲಿ ಭಾಗವಹಿಸುವಪ್ರತಿಭೆಗಳಿಗೆಲ್ಲರಿಗೂ ಸೂಕ್ತ ಮಾಹಿತಿಯನ್ನು ಒದಗಿಸುವ ವೇದಿಕೆ ಇದಾಗಿದ್ದು, ಭವಿಷ್ಯದಲ್ಲಿ ಮಯೂರಿ ಪ್ರೊಡಕ್ಷನ್ ವತಿಯಿಂದ ಹಲವು ಕಿರುಚಿತ್ರ, ಆಲ್ಬಂ, ರಿಯಾಲಿಟಿ ಶೋಗಳು ನಡೆಯಲಿದ್ದು, ಎಲ್ಲರಿಗೂ ಉತ್ತಮ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈ ಕಾರ‍್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ವಿಜಯಕುಮಾರ್ ಮಯೂರಿ ಮತ್ತು ಲೋಕೇಶ್ ಉರುಬೈಲು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.