ಗುತ್ತಿಗಾರು ಗ್ರಾಮ ಪಂಚಾಯತ್‌ನಲ್ಲಿ ಗಾಂಧಿ ಜಯಂತಿ ಹಾಗೂ ವಿಶೇಷ ಗ್ರಾಮ ಸಭೆ

guthigar grama panchayath copy

ಗುತ್ತಿಗಾರು ಗ್ರಾಮ ಪಂಚಾಯತ್‌ನಲ್ಲಿ ಗಾಂಧಿ ಜಯಂತಿ ಹಾಗೂ ವಿಶೇಷ ಗ್ರಾಮ ಸಭೆ ಅ.೨ ರಂದು ನಡೆಯಿತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಚ್ಚುತ ಗುತ್ತಿಗಾರು ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಸ್ವಾಗತಿಸಿ, ಗ್ರಾಮ ಸಭೆಯ ಮಹತ್ವ ವಿವರಿಸಿ, ನೂತನ ವಸತಿ ಫಲಾನುಭವಿಗಳ ಪಟ್ಟಿಯನ್ನು ಸಭೆಗೆ ತಿಳಿಸಿದರು. ಗ್ರಾಮ ಪ. ಸದಸ್ಯರಾದ ಜಯಪ್ರಕಾಶ್ ಮೊಗ್ರ ರವರು ಗ್ರಾಮಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಪಂಚಾಯತ್ ಅ.ಅಧಿಕಾರಿ ವಂದಿಸಿದರು. ಗಾಂಧಿ ಜಯಂತಿ ಪ್ರಯುಕ್ತ ಆಚಳ್ಳಿ ಪ.ಜಾತಿ ಕಾಲೋನಿಯಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಜೋಸೆಫ್ ಮ್ಯಾಥ್ಯೂ ಆಚಳ್ಳಿ ರವರು ಸ್ವಚ್ಚತೆಗೆ ಕಾಡು ಕಡಿಯುವ ಮೆಷಿನ್‌ಗಳನ್ನು ನೀಡಿ ತಾನೂ ಪಾಲ್ಗೊಂಡು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.