ಫ್ಯಾಶನ್ ಡಿಸೈನಿಂಗ್ ತರಬೇತಿಗೆ ಅರ್ಜಿ ಆಹ್ವಾನ

Suddi logo copy

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಪ.ಪಂ ದ ನಿರುದ್ಯೋಗಿ ಯುವಕ ಯುವತಿಯರಿಗೆ ನಾಲ್ಕು ತಿಂಗಳ ಅವಧಿಯ ಉಚಿತ ಫ್ಯಾಷನ್ ಡಿಸೈನಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅಭ್ಯರ್ಥಿಗಳು ಪ.ಪಂ.ದ ವರ್ಗಕ್ಕೆ ಸೇರಿದವರಾಗಿದ್ದು ೧೮-೩೫ ವರ್ಷ ವಯೋಮಿತಿ ಹೊದಿದ್ದು ಕನಿಷ್ಟ ೭ ನೇ ತರಗತಿ ಉತ್ತೀರ್ಣರಾಗಿರಬೇಕು. ತರಬೇತಿಯನ್ನು ಯಶಸ್ವಿಯಾಗಿ ಪೋರೈಸಿದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಪ್ರಮಾಣ ಪತ್ರ ಮತ್ತು ೩೦೦೦ ರೂಪಾಯಿ ಶಿಷ್ಯ ವೇತನ ನೀಡಲಾಗುವುದು, ಅಲ್ಲದೇ ಉದ್ಯೋಗ ಮಾಡಲಿಚ್ಚಿಸುವವರಿಗೆ ಗುಣಮಟ್ಟವನ್ನು ಹೊಂದಿರುವ ಟೆಕ್ಸ್‌ಟೈಲ್ ಉದ್ಯಮದಲ್ಲಿ ೧೦೦% ಉದ್ಯೋಗ ಮಾಡಿಕೊಡಲಾಗುವುದು. ಸ್ವ-ಉದ್ಯೋಗ ಕೈಗೊಳ್ಳುವವರಿಗೆ ವಿವಿಧ ಇಲಾಖೆಯ ಸಹಯೋಗದ ಜೊತೆಯಲ್ಲಿ ಸಾಲ ಸಹಾಯಧನದ ಸೌಲಭ್ಯ ದೊರಕಿಸಿ ಕೊಡುವಲ್ಲಿ ಸಹಾಯ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಪ್ರಮಾಣ ಪತ್ರದ ನಕಲು ಪ್ರತಿ, ಆಧಾರ್ ಕಾರ್ಡ್ ಪ್ರತಿ ಮತ್ತು ಜಾತಿ ಪ್ರಮಾಣದ ನಕಲು ಪ್ರತಿಯೊಂದಿಗೆ ನೇರವಾಗಿ ಅ.೧೫ರ ಒಳಗೆ ಪ್ರಾಂಶುಪಾಲರು, ಕಮ್ಯುನಿಟಿ ಪಾಲಿಟೆಕ್ನಿಕ್,ಶಾಹಿನ್ ಮಾಲ್ ,ಎರಡನೆಯ ಮಹಡಿ,ಬಸ್ಸು ನಿಲ್ದಾಣದ ಎದುರುಗಡೆ, ಮುಖ್ಯ ರಸ್ತೆ ಬೆಳ್ಳಾರೆ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.