ಸುಳ್ಯದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ

Advt_NewsUnder_1
Advt_NewsUnder_1
Advt_NewsUnder_1

swachate 2 copy

ಮಹಾತ್ಮಾ ಗಾಂಧೀಜಿ ಯವರ ಜನ್ಮ ದಿನ ಅ.೨ರಂದು ಸುಳ್ಯ ತಾಲೂಕಿನಾದ್ಯಂತ ಬೃಹತ್ ಸ್ವಚ್ಛತಾ ಆಂದೋಲನ ನಡೆಸಲಾಯಿತು. ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಹಾಗೂ ಸುಳ್ಯ ಸ್ವಚ್ಛತಾ ರಾಯಭಾರಿ ಡಾ. ಕೆ.ವಿ.ಚಿದಾನಂದರ ನೇತೃತ್ವದಲ್ಲಿ ಸಂಪಾಜೆ ಗೇಟ್‌ನಿಂದ ಪೆರ್ನಾಜೆ ತನಕ ರಾಜ್ಯ ಹೆದ್ದಾರಿಯ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ.
ಅರಂಬೂರಿನಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುಧಾಕರ ರೈ, ಬಾಪೂ ಸಾಹೇಬ್, ಯೂಸುಫ್ ಅಂಜಿಕ್ಕಾರ್, ಶ್ರೀಪತಿ ಭಟ್, ಜಗದೀಶ ಸರಳಿಕುಂಜ, ಗೋಪಾಲ ಪಡ್ಪು, ಅಂಬಿಕಾ ಮಹಿಳಾಮಂಡಲ ಅಧ್ಯಕ್ಷೆ ರಾಜೀವಿ ಜನಾರ್ದನ, ತಾರಾವತಿ ಮತ್ತು ಸದಸ್ಯರು ಮತ್ತು ಅರಂಬೂರಿನ ನಾಗರಿಕರು ಭಾಗವಹಿಸಿದ್ದರು.
ಅ.೨ ರಂದು ಬೆಳಿಗ್ಗೆ ೯ ಗಂಟೆಗೆ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಬೃಹತ್ ಸ್ವಚ್ಛತಾ ಆಂದೋಲನ ಕಾರ್ಯಕ್ರಮದ ಉದ್ಘಾಟನೆಗೊಂಡು, ೯.೩೦ ಕ್ಕೆ ಸಭಾ ಕಾರ್ಯಕ್ರಮ ನಡೆದು ಆ ಬಳಿಕ ಒಂದು ತಂಡ ಮೇಲಿನ ಪೇಟೆ ಕಡೆಗೆ ಇನ್ನೊಂದು ತಂಡ ಕೆಳಗಿನ ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಶಾಲಾ ಕಾಲೇಜುಗಳು, ವಿದ್ಯಾರ್ಥಿಗಳು, ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡರು. ಉದ್ಘಾಟನೆಯ ಬಳಿಕ ಎಲ್ಲ ೧೮ ವಾರ್ಡ್ ಸದಸ್ಯರು ತಮ್ಮ ತಮ್ಮ ವಾರ್ಡಿಗೆ ತೆರಳಿ ಅಲ್ಲಿ ಸ್ವಚ್ಛತೆ ಕಾರ್ಯ ನಡೆಸಿದರು. ಅಧಿಕಾರಿಗಳು ಅವರವರ ಇಲಾಖೆ ಕಚೇರಿ ಬಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.