ಬಜ್ಪೆ ದೈವಸ್ಥಾನಕ್ಕೆ ಪಂಜ ಜೇಸಿಸ್ ಮೂಲಕ ಕೊಡುಗೆ

jci koduge copy

ಬಜ್ಪೆ ಶ್ರೀ ಚಾಮುಂಡೇಶ್ವರಿ ದೈವಸ್ಥಾನಕ್ಕೆ ಪಂಜದ ತೊಂಡಚ್ಚನ್ ಇಂಡಸ್ಟ್ರೀಸ್ ಮಾಲಕರಾದ ಜೇಸಿ. ಮನು ಎಂ ಹಾಗೂ ಆಶಾ ದಂಪತಿಗಳ ಕೊಡುಗೆಯಾಗಿ ನೀಡಿದ ೧.೫ ಲಕ್ಷ ರೂಪಾಯಿ ಮೌಲ್ಯದ ಇಂಟರ್ಲಾಕ್ ಹಾಗೂ ಗ್ರಾನೈಟ್‌ನ್ನು ಜೇಸಿಐ ಪಂಜ ಪಂಚಶ್ರೀಯ ಪ್ರಾಯೋಜಕತ್ವದಲ್ಲಿ ನೀಡಲಾಯಿತು.
ಸೀನಿಯರ್ ಸಿಟಿಜನ್ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ.ಅರವಿಂದ ರಾವ್ ಕೇದಿಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಜೇಸಿ.ಮನು ಹಾಗೂ ಆಶಾ ದಂಪತಿಗಳನ್ನು ದೈವಸ್ಥಾನದ ಪರವಾಗಿ ಸನ್ಮಾನಿಸಿದರು. ವಲಯ ೧೫ ರ ಟ್ರೈನಿಂಗ್ ಬ್ರಿಗೇಡಿಯರ್ ಜೇಸಿ.ಸವಿತಾರ ಮುಡೂರು, ಪಂಜ ಜೇಸಿಯ
ಸ್ಥಾಪಕ ಅಧ್ಯಕ್ಷ ಜೇಸಿ. ದೇವಿಪ್ರಸಾದ್ ಜಾಕೆ, ದೈವಸ್ಥಾನದ ಆಡಳಿತ ಮೊಕ್ತೇಸರ ಹರೀಶ್ಚಂದ್ರ, ಸದಸ್ಯರಾದ ಸಚ್ಚಿದಾನಂದ ರೈ, ಶ್ರೀಮತಿ ಬೇಬಿ, ಅಪ್ಪ ಕುಂಞಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂಜ ಜೇಸಿಯ ಅಧ್ಯಕ್ಷ ತೀರ್ಥಾನಂದ ಕೊಡಂಕಿರಿ ಸಭಾಧ್ಯಕ್ಷತೆ ವಹಿಸಿಸಿದ್ದರು. ದಯಪ್ರಸಾದ್ ಚೀಮುಳ್ಳು, ಸೋಮಶೇಖರ ನೇರಳ, ಪ್ರವೀಣ್ ಕಾಯರ ಉಪಸ್ಥಿತರಿದ್ದರು. ಶ್ರೀಮತಿ ಆಶಾ ಜೇಸೀ ವಾಣಿವಾಚಿಸಿದರು. ಕುಮಾರಿ ಸಾಗರಿಕ ಸ್ವಾಗತಿಸಿ, ಜೇಸಿ. ಚಂದ್ರಶೇಖರ ಕುಕ್ಕುಪುಣಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.