ಅ.3 : ಸಂತೃಪ್ತಿ ಗ್ರೂಪ್ಸ್ ನೂತನ ರೆಸ್ಟೋರೆಂಟ್ ಪುತ್ತೂರಿನಲ್ಲಿ ಶುಭಾರಂಭ

santhrupthi

ಸುಳ್ಯ ಶ್ರೀರಾಂ ಪೇಟೆಯ ಅಕ್ಷತಾ ಸೆಂಟ್ರಲ್ ಸ್ಕಾರ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸವಿ ರುಚಿಯ ಸೌತ್, ನಾರ್ತ್ ಚೈನೀಸ್, ಚಾಟ್ಸ್, ಡಸರ್ಟ್ಸ್ ಇತ್ಯಾದಿ ಖಾದ್ಯಗಳನ್ನು ನೀಡಿ ಗ್ರಾಹಕರನ್ನು ಸಂತೃಪ್ತಗೊಳಿಸಿ ಮನೆ ಮಾತಗಿರುವ ಸಂತೃಪ್ತಿ ರೆಸ್ಟೋರೆಂಟ್ ಇದರ ಇನ್ನೊಂದು ಸಸ್ಯಹಾರಿ ರೆಸ್ಟೋರೆಂಟ್ ಪುತ್ತೂರು ದರ್ಬೆಯಲ್ಲಿರುವ ಸಚಿನ್ ಕಾಂಪ್ಲೆಕ್ಸ್‌ನಲ್ಲಿ ಅ.೦೩ ರಂದು ಶುಭಾರಂಭಗೊಳ್ಳಲಿದೆ.
ಇದರ ಉದ್ಘಾಟನೆಯನ್ನು ಪದ್ಮಶ್ರೀ ಗಿರೀಶ್ ಭಾರದ್ವಾಜ್ ರವರು ನಿರ್ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ, ಕ್ಯಾಂಪ್ಕೊ ಮಂಗಳೂರು ಇದರ ಅದ್ಯಕ್ಷ ಸತೀಶ್ಚಂದ್ರ, ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಫಿಲೋಮಿನ ಕಾಲೇಜಿನ ರೆ|ಪಾ| ಆಂಟನಿ ಪ್ರಕಾಶ್ ಮೊಂತೆರೊ, ವಿದ್ಯಾ ರಶ್ಮಿ ಎಜುಕೇಶನ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಸವಣೂರು ಸೀತಾರಾಮ ರೈ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಂತಿ ಬಲ್ನಾಡ್, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಸಂಜೀವ ಮಂಠದೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ವರ್ತಕರ ಸಂಘದ ಅಧ್ಯಕ್ಷ ಸುರೇಂದ್ರ ಕಿಣಿ, ಸಚಿನ್ ಟ್ರೇಡಿಂಗ್ ಕಂಪನಿ ಮಂಜುನಾಥ್ ನಾಯಕ್ ಭಾಗವಹಿಸಲಿದ್ದಾರೆ. ಮಾನ್ಯ ಗ್ರಾಹಕರು ಅಗಮಿಸಬೇಕಾಗಿ ಸಂತೃಪ್ತಿ ಗ್ರೂಪ್ಸ್ ಪಾಲುದಾರರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.