ಕನ್ನಡ ಚಿಂತನೆ ಕಾರ್ಯಕ್ರಮ

Kannada Chinthane copy

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸೆ.೨೨ ರಂದು ಜರಗಿದ ಕನ್ನಡ ಚಿಂತನೆ ಕಾರ್ಯಕ್ರಮದ ದ್ವಿತೀಯ ಪರ್ವದ ಎರಡನೆಯ ಕಾರ್ಯಕ್ರಮದಲ್ಲಿ ‘ಪಠ್ಯದಿಂದಾಚೆಗಿನ ಓದು’ ಎಂಬ ವಿಷಯದ ಕುರಿತು ಉಪನ್ಯಾಸವನ್ನು ಕನ್ನಡ ಶಿಕ್ಷಕಿ ಸವಿತಾ ಎಂ ಕಲ್ಲಪ್ಪಳ್ಳಿ ನೀಡಿದರು.
ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತುಇದರ ಸುಳ್ಯ ಘಟಕದ ಕಾರ್ಯದರ್ಶಿ ತೇಜಸ್ವಿ ಕಡಪಳ, ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಚಂದ್ರಶೇಖರ ದಾಮ್ಲೆ ಭಾಗವಹಿಸಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ವಂದಿಸಿದರು. ಶಿಕ್ಷಕ ರಘುರಾಮ ಭಟ್ ಸಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಚೆನ್ನೈನ ವಿದುಷಿ ಶಾಂತಲಾ ಸುಬ್ರಹ್ಮಣ್ಯಂ ರವರ ಕೊಳಲುವಾದನ ಕಾರ್ಯಕ್ರಮ ನಡೆಯಿತು. ಇವರಿಗೆ ಹಿಮ್ಮೇಳದಲ್ಲಿ ಮೃದಂಗದಲ್ಲಿ ಅನಿರುದ್ಧ ಭಟ್ ಮತ್ತು ವಯಲಿನ್‌ನಲ್ಲಿ ವೈಭವ್‌ರಮಣಿ ಸಹಕರಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.