ಗಟ್ಟಿ ಕಟ್ಟಿದ ಯೂರಿಯಾ ಕೆ.ಎಫ್.ಡಿ.ಸಿ. ಯೂರಿಯಾ ಪೂರೈಕೆಯಲ್ಲಿ ಅವ್ಯವಹಾರದ ಆರೋಪ : ಅಧಿಕಾರಿಗಳಿಂದ ನಿರಾಕರಣೆ

Advt_NewsUnder_1
Advt_NewsUnder_1
Advt_NewsUnder_1

Suddi logo copy

ರಬ್ಬರ್ ಪ್ಲಾಂಟೇಷನ್‌ನಲ್ಲಿ ರಬ್ಬರ್ ಮರಗಳಿಗೆ ಹಾಕಲು ಪೂರೈಕೆಯಾಗಿರುವ ಯೂರಿಯಾ ಗೋಣಿಯಲ್ಲೆ ಗಟ್ಟಿ ಕಟ್ಟಿದ್ದು ಇದರ ಪೂರೈಕೆಯಲ್ಲಿ ಅವ್ಯವಹಾರವಾಗಿದೆ ಎಂದು ಕಾರ್ಮಿಕ ನಾಯಕರು ಆರೋಪಿಸಿದ ಹಾಗೂ ಕೆ.ಎಫ್.ಡಿ.ಸಿ. ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ ಘಟನೆ ಐವರ್ನಾಡಿನಿಂದ ವರದಿಯಾಗಿದೆ.
ಐವರ್ನಾಡಿನ ಪ್ರೌಢಶಾಲೆಯ ಎದುರುಗಡೆ ಇರುವ ಕೆ.ಎಫ್.ಡಿ.ಸಿ. ಗೋಡೌನ್‌ನಲ್ಲಿ ಪೆರಿಯಬಾಣೆ ಮತ್ತು ನಿಡುಬೆ ಯುನಿಟ್‌ಗಳಿಗೆ ಪೂರೈಕೆ ಮಾಡಲೆಂದು ಗೊಬ್ಬರ ತಂದಿರಿಸಲಾಗಿದೆ. ಸೆ.೧೫ರಂದು ಗೊಬ್ಬರವನ್ನು ಕಾರ್ಮಿಕರಿಗೆ ನೀಡುವಾಗ ಯೂರಿಯಾ ಸಂಪೂರ್ಣವಾಗಿ ಗೋಣಿಯಲ್ಲೆ ಕಲ್ಲಿನಂತೆ ಗಟ್ಟಿಯಾಗಿತ್ತು. ಅದನ್ನು ಪುಡಿಮಾಡುವ ಸಾಧನ ತಂದು ಕುಟ್ಟಿ ಪುಡಿ ಮಾಡಿ ರಾಕ್ ಫಾಸ್ಪೇಟ್‌ನೊಂದಿಗೆ ಮಿಶ್ರಗೊಳಿಸಬೇಕಾಗಿತ್ತು. ಇದನ್ನು ಕಾರ್ಮಿಕರು ಪ್ರಶ್ನಿಸಿದರು. ಕಾರ್ಮಿಕ ನಾಯಕ ಚಂದ್ರಲಿಂಗಂರವರೂ ಕೂಡಾ ಅಲ್ಲಿಗೆ ಬಂದು ಯೂರಿಯಾದ ಹಳೆ ದಾಸ್ತಾನು ತರಿಸಿ ಕೊಂಡಿರುವುದರಿಂದ ಈ ರೀತಿ ಗಟ್ಟಿ ಕಟ್ಟಿದೆ. ಹಿಂದೆ ಹೀಗೆ ಆಗಿರಲಿಲ್ಲ. ಇದನ್ನು ಎಷ್ಟು ಪುಡಿ ಮಾಡಿದರೂ ಪೂರ್ಣ ಪುಡಿಯಾಗದೆ ಕಲ್ಲುಗಳಂತೆ ಉಳಿಯುತ್ತದೆ. ಇದರಿಂದ ಎಲ್ಲಾ ಮರಗಳಿಗೂ ಯೂರಿಯಾ ಹಾಕಲು ಸಿಕ್ಕದೆ ಕೆಲವು ಮರಗಳಿಗೆ ಯೂರಿಯಾ ಇಲ್ಲದಂತಾಗುತ್ತದೆ. ಪರಿಣಾಮವಾಗಿ ಮರದಿಂದ ಹಾಲು ಕಡಿಮೆ ದೊರೆತು ಕಾರ್ಮಿಕರಿಗೂ, ನಿಗಮಕ್ಕೂ ನಷ್ಠವಾಗುತ್ತದೆ“ ಎಂದು ಹೇಳಿದರು. ಪತ್ರಕರ್ತರಿಗೂ ವಿವರಿಸಿದರು.
ಈ ಬಗ್ಗೆ ಕೆ.ಎಫ್.ಡಿ.ಸಿ. ಐವರ್ನಾಡು ಡಿವಿಜನಲ್ ಮೆನೇಜರ್ ಹೂವಯ್ಯರನ್ನು ಸಂಪರ್ಕಿಸಿ ವಿಚಾರಿಸಿದಾಗ “ಯೂರಿಯಾ ಹಳೆ ಸ್ಟಾಕ್ ಅಲ್ಲ. ಸಾಮಾನ್ಯವಾಗಿ ಅದು ಗಟ್ಟಿಯಾಗುತ್ತದೆ. ಅದರಲ್ಲಿ ಅವ್ಯವಹಾರವೇನೂ ನಡೆದಿಲ್ಲ. ಚಂದ್ರಲಿಂಗಂರವರು ಕೆಲವು ಮೇಸ್ತ್ರಿಗಳನ್ನು ನಾನು ಟ್ರಾನ್ಸ್ ಫರ್ ಮಾಡಿಸಿದ್ದಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ“ ಎಂದು ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.