ಸೆ. 21-30 : ಬಳ್ಪ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವ

Suddi logo copy

ಬಳ್ಪ ಶ್ರೀ ತ್ರಿಶೂಲಿನೀ ದೇವಸ್ಥಾನ ಮತ್ತು ಬಳ್ಪ ಶ್ರೀ ದುರ್ಗಾಪರಮೃಶ್ವರೀ ದೇವಸ್ಥಾನದಲ್ಲಿ ಸೆ. ೨೧ರಿಂದ ಸೆ.೩೦ರವರೆಗೆ ಮಹಾನವರಾತ್ರಿ ಉತ್ಸವಗಳು ನಡೆಯಲಿದೆ. ಶ್ರೀ ದುರ್ಗಾಪರಮೃಶ್ವರೀ ಸನ್ನಧಿಯಲ್ಲಿ ಪ್ರತೀ ದಿನ ಪ್ರಾತಃಕಾಲ: ಗಣಪತಿ ಹೋಮ, ಶ್ರೀ ಅಮ್ಮನವರ ಸನ್ನಿಧಿಯಲ್ಲಿ, ಬೆಳಿಗ್ಗೆ ೭.೩೦ಕ್ಕೆ ಪ್ರಾತಃಪೂಜೆ, ಪಂಚಾಮೃತ ಅಭಿಷೇಕ, ಬೆಳಿಗ್ಗೆ ೧೦.೩೦ಕ್ಕೆ ಅಲಂಕಾರ ಪೂಜೆ, ಹೂವಿನ ಪೂಜೆ, ಹರಿವಾಣ ನೈವೇದ್ಯ ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಡೆಯಲಿದೆ. ಸೆ. ೨೪ರಂದು ತೆನೆ ತುಂಬಿಸುವುದು ಮತ್ತು ನವಾನ್ನ, ನಡೆಯಲಿದೆ. ಸೆ. ೨೬ರಂದು ವಗ್ಗ ಬಿ. ರಮೇಶ್ ರಾವ್ ಮತ್ತು ಮನೆಯವವರಿಂದ ಸೇವಾ ರೂಪದಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಲಿದೆ. ಸೆ. ೨೮ರಂದು ಶ್ರೀ ಯೋಗ ನರಸಿಂಹ ಸ್ವಾಮಿ ಸನ್ನಿಧಿಯಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಗುಡಾನ್ನ ನೈವೇದ್ಯ ಸಹಿತ ವಿಶೆಷ ಪೂಜೆ ಜರಗಲಿದೆ. ಸೆ. ೨೯ರಮದು ಬೆಳಿಗ್ಗೆ ೧೧.೩೦ಕ್ಕೆ ವಾಹನ ಪೂಜೆ, ಸೆ. ೩೦ ವಿಜಯದಶಮಿ ಪ್ರಯುಕ್ತ ರಾತ್ರಿ ಸಾಮೂಹಿಕ ರಂಗಪೂಜೆ ನಡೆಯಲಿದೆ. ಶ್ರೀ ತ್ರಿಶೂಲಿನೀ ದೇವಸ್ಥಾನದಲ್ಲಿ ಪ್ರತೀ ದಿನ ಬೆಳಿಗ್ಗೆ ೧೦.೦೦ಕ್ಕೆ ಮಹಾಪೂಜೆ ರಾತ್ರಿ ಗಂಟೆ ೬-೦೦ರಿಂದ ೮.೦೦ತನಕ ಹೂವಿನ ಪೂಜೆ, ರಂಗಪೂಜೆ ಮತ್ತು ಮಹಾಪೂಜೆ ಸಂಜೆ ಗಂಟೆ ೬.೩೦ರಿಂದ ೮.೦೦ರ ತನಕ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ಭಜನೆ ನಡೆಯಲಿದೆ. ಸೆ. ೨೧ರಂದು ಬೆಳಿಗ್ಗೆ ಗಣಪತಿ ಹೋಮ, ರಾತ್ರಿ ಬ್ರಹ್ಮಕಲಶೋತ್ಸವ ಸಮಿತಿಯ ಕೇನ್ಯ ಬೈಲುವಾರು ಸದಸ್ಯರಿಂದ ಸೇವಾ ರೂಪದಲ್ಲಿ ಸಾಮೂಹಿಕ ಶ್ರೀ ದುರ್ಗಾಪೂಜೆ ನಡೆಯಲಿದೆ. ಸೆ. ೩೦ರಂದು ಮಧ್ಯಾಹ್ನ ನಾಗತಂಬಿಲ, ಮಹಾಗಣಪತಿ ದೇವರಿಗೆ ಅಪ್ಪದ ಪೂಜೆ, ದೈವಗಳಿಗೆ ತಂಬಿಲ ಮತ್ತು ವಿಷ್ಣುಮಂಗಲ ಶಿರಾಡಿ ರಾಜನ್ ದೈವಸ್ಥಾನದಲ್ಲಿ ತಂಬಿಲ ಜರಗಲಿದೆ.
ಶ್ರೀಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಜು ೨೯ರಂದು ನಡೆದ ತಾಂಬೂಲ ಪ್ರಶ್ನೆ ಚಿಂತನೆಯಲ್ಲಿ ಸೂಚಿಸಿದ ಪರಿಹಾರ ಕಾರ್ಯಗಳ ಅಂಗವಾಗಿ ಸೆ. ೨೫ರಂದು ಸಂಜೆ ಗಂಟೆ ೬.೦೦ರಿಂದ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರಿಯವರ ನೇತೃತ್ವದಲ್ಲಿ ಸಾಮೂಹಿಕವಾಗಿ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾ ನಮಸ್ಕಾರ ಪೂಜೆ, ಕೂಟ ಪ್ರಾರ್ಥನೆ ಮತ್ತು ಮುಷ್ಠಿ ಕಾಣಿಕೆ ಸಮರ್ಪಣೆ ಜರಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.